ಘನತ್ಯಾಜ್ಯ 2026 ರ ನಿಯಮಗಳನ್ನು ಅನುಷ್ಠಾನಗೊಳಿಸಿ : ಜಿಲ್ಲಾಧಿಕಾರಿ

ಘನತ್ಯಾಜ್ಯ 2026 ರ ನಿಯಮಗಳನ್ನು ಅನುಷ್ಠಾನಗೊಳಿಸಿ : ಜಿಲ್ಲಾಧಿಕಾರಿ  Implement the Solid Waste 2026 rules: District Collector

ಲೋಕದರ್ಶನ ವರದಿ 

ಕಾರವಾರ  06:  ಘನತ್ಯಾಜ್ಯ ವಿಲೇವಾರಿ 2026 ರಲ್ಲಿನ ನಿಯಮಗಳನ್ನು ಸಂಪೂರ್ಣವಾಗಿ ಅರಿತು, ಜಿಲ್ಲೆಯಲ್ಲಿನ ಘನತ್ಯಾಜ್ಯ ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸಿ, ನಗರಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ   ಮತ್ತು ಸ್ವಚ್ಚ ಪರಿಸರವನ್ನು ನಿರ್ಮಿಸಲು ಕಾರ್ಯನಿರ್ವಹಿಸುವಂತೆ ಎಲ್ಲಾ ನಗರಸ್ಥಳೀಯ ಸಂಸ್ಥೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ   ಸೂಚಿಸಿದರು.  ಅವರು ಶನಿವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ, ನಗರಾಭಿವೃದ್ಧಿ ಇಲಾಖೆ, ಪೌರಾಡಳಿತ ನಿರ್ದೇಶನಾಲಯ ಬೆಂಗಳೂರು, ಜಿಲ್ಲಾ ನಗರಾಭಿವೃದ್ಧಿ ಕೋಶ ಕಾರವಾರ ಅವರ ವತಿಯಿಂದ, ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ಪೌರಾಯುಕ್ತರು, ಮುಖ್ಯಾಧಿಕಾರಿಗಳು. ಆಭಿಯಂತರರು, ಆರೋಗ್ಯ ನೀರೀಕ್ಷಕರು ಮತ್ತು ಆರೋಗ್ಯ ಶಾಖೆಯ ಸಿಬ್ಬಂದಿಗಳಿಗೆ ಆಯೋಜಿಸಿದ್ದ ಘನತ್ಯಾಜ್ಯ ನಿಯಮಗಳು-2026 ಮತ್ತು ಸರ್ಕುಲರ್ ಎಕಾನೆಮಿ ಕುರಿತ ತರಬೇತಿ ಕಾರ್ಯಗಾರಢ ಉದ್ಘಾಟಿಸಿ ಮಾತನಾಡಿದರು.  

ಜಿಲ್ಲೆಯಲ್ಲಿ ತ್ಯಾಜ್ಯ ನಿರ್ವಹಣೆ ಕಾರ್ಯದಲ್ಲಿ ಪ್ರತಿಯೊಬ್ಬ ಅಧಿಕಾರಿ ಸಿಬ್ಬಂದಿಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಜಿಲ್ಲಾ ನಗರಾಭಿವೃದ್ಧಿಕೋಶದ ಮೂಲಕ ಎಂ.ಆರ್‌.ಎಫ್‌. ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ, ಜಿಲ್ಲೆಯಲ್ಲಿ 80 ರಷ್ಟು ಅರಣ್ಯ ಪ್ರದೇಶವಿದ್ದು, ಎಸ್‌.ಟಿ.ಪಿ ಮತ್ತು ಎಫ್‌.ಎಸ್‌.ಟಿ.ಪಿ ಗೆ ಭೂಮಿ ಸಮಸ್ಯೆ ಇದ್ದು ಇದನ್ನು ಬಗೆಹರಿಸಲು ಪ್ರಯತ್ನಿಸಲಾಗುವುದು. ಲೆಗಸಿ ತ್ಯಾಜ್ಯ ನಿರ್ವಹಣೆಗೂ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ ಎಂದರು.  

ಜಿಲ್ಲೆಯಲ್ಲಿನ ರಾಷಿೊಥಯ ಹೆದ್ದಾರಿಗಳಲ್ಲಿ ಬಿದ್ದಿರುವ ಕಸವನ್ನು ವ್ಯವಸ್ಥಿತ ರೀತಿಯಲ್ಲಿ ತೆರವುಗೊಳಿಸುವುದು ಅತ್ಯಂತ ಅಗತ್ಯವಿದ್ದು, ಇದಕ್ಕಾಗಿ ವಿನೂತನ ಯೋಜನೆಯನ್ನು ರೂಪಿಸುವುದು ಅವಶ್ಯಕತೆಯಿದೆ ಎಂದ ಅವರು, ಘನತ್ಯಾಜ್ಯ ವಿಲೇವಾರಿ 2026 ರಲ್ಲಿನ ನಿಯಮಗಳ ಪ್ರಕಾರ ಪ್ರತಿದಿನ 100 ಕೆ.ಜಿ ಗೂ ಅಧಿಕ ತ್ಯಾಜ್ಯ ಉತ್ಪಾದನೆ ಮಾಡುವವರನ್ನು ಬಲ್ಕ್‌ ವೇಸ್ಟ್‌ ಜನರೇಟರ್ ಎಂದು ಗುರುತಿಸಲಾಗುತ್ತಿದ್ದು, ಈ ವ್ಯಾಪ್ತಿಗೆ ಒಳಪಡುವವರು ತಮ್ಮ ಹಂತದಲ್ಲಿಯೇ ತ್ಯಾಜ್ಯವನ್ನು ನಿರ್ವಹಣೆ ಮಾಡಬೇಕು. ನಿಯಮಗಳನ್ನು ಪಾಲಿಸದೇ ಇದ್ದಲ್ಲಿ ಕುಡಿಯುವ ನೀರಿನ ಸಂಪರ್ಕ ಮತ್ತು ವಿದ್ಯುಚ್ಛಕ್ತಿ ಸಂಪರ್ಕವನ್ನು ಕಡಿತಗೊಳಿಸುವ ಅಧಿಕಾರವನ್ನೂ ಈ ನಿಯಮಗಳು ನೀಡಿವೆ ಎಂದರು.  

ಘನತ್ಯಾಜ್ಯ ವಿಲೇವಾರಿ ನಿಯಮಗಳು-2026 ಮತ್ತು ಮಾನ್ಯ ಸರ್ವೋಚ್ಚ ನ್ಯಾಯಾಲಯದ ಆದೇಶದ ಕುರಿತು ನಗರ ಸ್ಥಳೀಯ ಸಂಸ್ಥೆಗಳು ಕೈಗೊಳ್ಳಬೇಕಾದ ಕರ್ತವ್ಯಗಳ ಬಗ್ಗೆ ಪೌರಾಡಳಿತ ನಿರ್ದೇಶನಾಲಯದ ನಿವೃತ್ತ ಅಧಿಕಾರಿ ರಾಘವೇಂದ್ರ, ಒಣತ್ಯಾಜ್ಯ ವಿಲೇವಾರಿ (ಎಂ.ಆರ್‌.ಎಫ್) ಮತ್ತು ಅಡಿಛಿಣಟಚಿಡಿ ಇಛಿಠಠಥಿ ಕುರಿತು ನಗರ ಸ್ಥಳೀಯ ಬಗ್ಗೆ ಸಾಹಸ್ ಸಂಸ್ಥೆಯ ಯೋಜನಾ ವ್ಯವಸ್ಥಾಪಕ ಸುದೇಶ್ ಕಿಣಿ, ಎಸ್‌.ಡಬ್ಲ್ಯೂ.ಎಂ ಅನುಷ್ಟಾನ ಕುರಿತು ಎದುರಿಸುತ್ತಿರುವ ವಾಸ್ತವಿಕ ಸಮಸ್ಯೆಗಳು, ಕುರಿತು. ಸ್ವಾವಲಂಬಿಯಾಗಿ ನಿರ್ವಹಣೆ ಮಾಡುವ ಬಗ್ಗೆ ಜಿಲ್ಲಾ ನಗರಾಭಿವೃದ್ಧಿ ಕೋಶದ ಎಸ್‌.ಬ್ಲೂ.ಎಂ ಪರಿಣಿತ ಕಾರ್ತಿಕ್ ಆರ್ ನಾಯಕ್, ಗೋವಾದಲ್ಲಿನ ತ್ಯಾಜ್ಯ ವಿಲೆವಾರಿ ಕ್ರಮಗಳ ಬಗ್ಗೆ ಗೋವಾ ವೇಸ್ಟ್‌ ಮ್ಯಾನೇಜ್ ಮೆಂಟ್ ನ ಡಾ.ರಜತ್ ಚಿತ್ತಾರಿ ವಿವರವಾದ ಮಾಹಿತಿ ನೀಡಿದರು.   ಅಪರ ಜಿಲ್ಲಾಧಿಕಾರಿ ಸಾಜೀದ್ ಮುಲ್ಲಾ, ಜಿಲ್ಲಾ ನಗರಾಭಿವೃದ್ಧಿ ಕೋಶದ ಅಧಿಕಾರಿ ಮಂಜುನಾಥ ಹಾಗೂ ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ಪೌರಾಯುಕ್ತರು, ಮುಖ್ಯಾಧಿಕಾರಿಗಳು, ಅಭಿಯಂತರರು, ಆರೋಗ್ಯ ನಿರಿಕ್ಷಕರು. ಸ್ವಚ್ಛತಾ ಹಾಗೂ ಆರೋಗ್ಯ ಶಾಖೆಯ ಸಿಬ್ಬಂದಿಗಳು ಹಾಜರಿದ್ದರು.