ಅಕ್ಕಿ ಜಿಲಾನ್‌ಗೆ ಸಂಗೀತ ಭಾರ್ಗವ ಪ್ರಶಸ್ತಿ ಪುರಸ್ಕಾರ
Sangeet Bhargava award to Akki Jeelan
ಅಕ್ಕಿ ಜಿಲಾನ್‌ಗೆ ಸಂಗೀತ ಭಾರ್ಗವ ಪ್ರಶಸ್ತಿ ಪುರಸ್ಕಾರ
ಕಂಪ್ಲಿ 28: ಹೊಸಪೇಟೆ ನಗರದಲ್ಲಿ ಸಂಗೀತ ಭಾರತಿ ಸಂಸ್ಥೆಯಿಂದ ರಕ್ತದಾನ, ಸಮಾಜ ಸೇವೆ ಗುರುತಿಸಿ, ಕಂಪ್ಲಿ ನಿವಾಸಿ ಹಾಗೂ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಟ್ರಸ್ಟ್ ಅಧ್ಯಕ್ಷ ಯು.ಜಿಲಾನ್ ಇವರಿಗೆ ರಾಜ್ಯ ಮಟ್ಟದ ಸಮಾಜ ಸೇವಾ ಸಂಗೀತ ಭಾರ್ಗವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಂತರ ಅಕ್ಕಿ ಜಿಲಾನ್ ಅವರು ಪ್ರಶಸ್ತಿ ಸ್ವೀಕರಿ ಮಾತನಾಡಿ, ಕಂಪ್ಲಿ ಸೇರಿದಂತೆ ನಾನಾ ಭಾಗದಲ್ಲಿರುವ ಕೆಲ ಬಡವರಿಗೆ ರಕ್ತದಾನ ಮಾಡುವ ಜತೆಗೆ ಹಲವು ಸಮಾಜ ಸೇವೆ ಕಾರ್ಯಗಳನ್ನು ಮಾಡಿಕೊಂಡು ಬಂದಿರುವುದು ಮನಸ್ಸಿಗೆ ನೆಮ್ಮದಿ ತರಿಸಿದೆ. ಈ ಸೇವೆಯನ್ನು ಗುರುತಿಸಿ, ನಮ್ಮನ್ನು ಸಂಗೀತ ಭಾರ್ಗವ ಪ್ರಶಸ್ತಿಗೆ ಆಯ್ಕೆ ಮಾಡಿ, ಪುರಸ್ಕಾರ ನೀಡಿರುವುದು ಸಂತಹ ತಂದಿದೆ. ಎಲೆಮರೆ ಕಾಯಿಯಂತಿರುವ ಸಾಧಕರನ್ನು ಹೊಸಪೇಟೆ ಸಂಗೀತ ಭಾರತಿ ಸಂಸ್ಥೆಯು ಪ್ರಶಸ್ತಿ ನೀಡುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಈ ಪ್ರಶಸ್ತಿಯಿಂದ ಇನ್ನಷ್ಟು ಸೇವೆಗಳನ್ನು ಮಾಡಬೇಕೆಂಬ ಹಂಬಲವಾಗಿದೆ ಎಂದರು. ಈ ಸಂದರ್ಭದಲ್ಲಿ ಪ್ರಮುಖರಾದ ಎಚ್.ಪಿ.ಕಲ್ಲಂಭಟ್, ಪ್ರೊ.ಯು.ರಾಘವೇಂದ್ರರಾವ್, ಹರ್ಷ ಪಂತರ್, ಇಂತಿಯಾಜ್, ಬಳೇ ಮಲ್ಲಿಕಾರ್ಜುನ, ಬಡಿಗೇರ ಜಿಲಾನ್‌ಸಾಬ್, ಬಿ.ಕೆ.ವಾಸೀಮ್, ಸೈಯ್ಯದ್ ಬುಡೇನ್, ಮರ್ದಾನ್, ಶ್ರೀಕೃಷ್ಣ, ಗಾದಿಲಿಂಗಪ್ಪ, ಎಸ್.ಡಿ.ಬಸವರಾಜ, ಎಲಿಗಾರ ವೆಂಕಟರೆಡ್ಡಿ, ಎಸ್.ಶಾಮಸುಂದರರಾವ್, ಬಂಗಿ ದೊಡ್ಡ ಮಂಜುನಾಥ ಸೇರಿ ಇತರರಿದ್ದರು. ಜ.002: ಹೊಸಪೇಟೆಯಲ್ಲಿ ಸಮಾಜ ಸೇವೆ ಗುರುತಿಸಿ, ಅಕ್ಕಿ ಜಿಲಾನ್ ಇವರಿಗೆ ಸಂಗೀತ ಭಾರ್ಗವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 