ಪಿಯುಸಿ ಪರೀಕ್ಷೆಯಲ್ಲಿ ಸಾಧನೆಗೈದ ರೋಹಿಣಿ ಬೆಟಿಗೇರಿಗೆ ಸನ್ಮಾನ

ಪಿಯುಸಿ ಪರೀಕ್ಷೆಯಲ್ಲಿ ಸಾಧನೆಗೈದ ರೋಹಿಣಿ ಬೆಟಿಗೇರಿಗೆ ಸನ್ಮಾನ  Rohini Betigeri felicitated for excelling in PUC exams

ಲಕ್ಷ್ಮೇಶ್ವರ 17: ಪಿಯುಸಿ ಪರೀಕ್ಷೆಯಲ್ಲಿ ಶ್ರೀ ತಾಯಿ ಪಾರ್ವತಿ ಮಕ್ಕಳ ಬಳಗದ ಶ್ರೀ ವೀರಗಂಗಾಧರ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯಾದ ರೋಹಿಣಿ ಬೆಟಗೇರಿ ಅವರು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತಾಲೂಕಿಗೆ ಪ್ರಥಮ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದು ಸಾಧನೆಗೈದಿದ್ದಾರೆ. ವಿದ್ಯಾರ್ಥಿನಿಯನ್ನು  ಹರಳಯ್ಯ ಸಮಾಜ ಮತ್ತು ವಿಶ್ವ ಬಹುಜನ ಧ್ವಜ ಮತ್ತು ಸಂವಿದಾನ ಸೇವಾ ಟ್ರಸ್ಟ್‌ ವತಿಯಿಂದ ಪಟ್ಟಣದ ಮುಕ್ತಿನಗರದಲ್ಲಿರುವ ವಿದ್ಯಾರ್ಥಿನಿ ರೋಹಿಣಿ ಅವರ ನಿವಾಸದಲ್ಲಿ ಭಾರತ ರತ್ನ ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಅವರ ಪುಟ್ಟ ಮೂರ್ತಿಯನ್ನು ಉಡುಗೊರೆಯಾಗಿ ನೀಡಿ ಸನ್ಮಾನಿಸಿ ಗೌರವಿಸಿದರು. 

ಸನ್ಮಾನವನ್ನು ಸ್ವೀಕರಿಸಿದ ರೋಹಿಣಿ ಬೆಟಿಗೇರಿ ವಿದ್ಯಾರ್ಥಿನಿ ಮಾತನಾಡಿ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಲು ನಮ್ಮ ತಂದೆ ತಾಯಿಗಳು ನನ್ನ ಮೇಲೆ ಇಟ್ಟ ಕಾಳಜಿ ಹಾಗೂ ಕಾಲೇಜಿನ ಶಿಕ್ಷಕ ವೃಂದ ನೀಡಿದ ಶಿಕ್ಷಣವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡು ಪರೀಕ್ಷೆಯನ್ನು ಧೈರ್ಯದಿಂದ ಎದುರಿಸಿದ್ದೇನೆ ಇದರಿಂದ ನನಗೆ ಉತ್ತಮ ಸ್ಥಾನ ಪಡೆಯಲು ಸಾಧ್ಯವಾಗಿದೆ ಮುಂದೆಯೂ ನಾನು ಇನ್ನು ಹೆಚ್ಚಿನ ವಿದ್ಯಾಭ್ಯಾಸ ಮಾಡಿ ಐಎಎಸ್ ಅಧಿಕಾರಿ ಆಗಬೇಕೆಂಬ ಆಸೆ ನನ್ನಲ್ಲಿ ಇದೆ ಅದಕ್ಕೆ ಪ್ರಯತ್ನ ಪಡುತ್ತೇನೆ ಎಂದರು. 

ಈ ಸಮಯದಲ್ಲಿ ತಮ್ಮ ತಂದೆಯವರಾದ ಪ್ರಭು ತಾಯಿ ಕವಿತಾ ಬೆಟಿಗೇರಿ, ವಿಬಿಡಿಎಸ್ ಸಮಗಾರ ಸಮಾಜ ಹುಬ್ಬಳ್ಳಿ ಧಾರವಾಡ ಜಿಲ್ಲಾಧ್ಯಕ್ಷರಾದ ವಿನಾಯಕ ಅಮರಗೋಳ, ರಾಜ್ಯ ಉಪಾಧ್ಯಕ್ಷರಾದ ಮಾರುತಿ ಎಸ್ ಹುಟಗಿ, ಶುಭಾಷ ಸಾವಳಗಿ, ಉಪಾಧ್ಯಕ್ಷರಾದ ಅರವಿಂದ ದೊಡ್ಡಮನಿ, ಕಾರ್ಯದರ್ಶಿ ಮಂಜುನಾಥ ಸಾಂಬುಜಿ, ಸಹ ಕಾರ್ಯದರ್ಶಿ ರಾಘವೇಂದ್ರ ಅಗಾಸಿ, ರವಿ ಸಾತಪೂತೆ, ಮಹಿಳಾ ಕಾರ್ಯದರ್ಶಿ ರೇಣುಕಾ ವಿ ಅಮರಗೋಳ ಸೇರಿದಂತೆ ಇನ್ನೂ ಅನೇಕರು ಇದ್ದರು.