ಅಂತರರಾಷ್ಟ್ರೀಯ

ಎರಡನೇ ಸುತ್ತಿನಲ್ಲೂ ಮುನ್ನಡೆ ಸಾಧಿಸಿದ ರಿಷಿ ಸುನಕ್

ಎರಡನೇ ಸುತ್ತಿನಲ್ಲೂ ಮುನ್ನಡೆ ಸಾಧಿಸಿದ ರಿಷಿ ಸುನಕ್

ಲಂಡನ್: ಜುಲೈ 15: ಬ್ರಿಟನ್ ಪ್ರಧಾನ ಮಂತ್ರಿ ಗಾದಿಗೆ ಪೈಪೋಟಿ ಶುರುವಾಗಿದ್ದು, ಭಾರತೀಯ ಮೂಲದ ರಿಷಿ ಸುನಕ್ ಎರಡನೇ ಸುತ್ತಿನಲ್ಲೂ ಮುನ್ನಡೆ ಸಾಧಿಸಿದ್ದಾರೆ. ಸುನಕ್ ನಂತರ ಪೆನ್ನಿ ಮೊರ್ಡಾಂಟ್ ಎರಡನೇ ಸ್ಥಾನದಲ್ಲಿದ್ದಾರೆ.

ರಿಷಿ ಸುನಕ್ ಅವರು ವ್ಯಾಪಾರ ಮತ್ತು ವ್ಯವಹಾರ ಸಚಿವ ಪೆನ್ನಿ ಮೊರ್ಡಾಂಟ್ ಮತ್ತು ವಿದೇಶಾಂಗ ಸಚಿವ ಲಿಜ್ ಟ್ರಸ್ ಅವರ ವಿರುದ್ಧ ಸ್ಪರ್ಧೆಗಿಳಿದಿದ್ದಾರೆ.

ಗುರುವಾರ ನಡೆದ ಎರಡನೇ ಸುತ್ತಿನ ಮತದಾನದಲ್ಲಿ ಅವರು ಹೆಚ್ಚು ಮತಗಳನ್ನು ಗಳಿಸಿದ್ದಾರೆ ಮತ್ತು ಬೋರಿಸ್ ಜಾನ್ಸನ್ ನಂತರ ಕನ್ಸರ್ವೇಟಿವ್ ಪಕ್ಷದ ನಾಯಕರಾಗಲು ಮುಂಚೂಣಿಯಲ್ಲಿದ್ದಾರೆ. ರಿಷಿ ಸುನಕ್ 101 ಮತಗಳನ್ನು ಪಡೆದರೆ, ಅವರ ಸಮೀಪದ ಪ್ರತಿಸ್ಪರ್ಧಿ ಪೆನ್ನಿ ಮೊರ್ಡಾಂಟ್ 83 ಮತಗಳನ್ನು ಗಳಿಸಿದರು. ಇದರರ್ಥ ರಿಷಿ ಸುನಕ್ ಅವರ ಪಕ್ಷದ ಮೇಲೆ ಬಲವಾದ ಹಿಡಿತ ಸಾಧಿಸಿದ್ದಾರೆ.

ಏತನ್ಮಧ್ಯೆ, ಟ್ವಿಟರ್ ನಲ್ಲಿ ತಮ್ಮ ಬೆಂಬಲಿಗರಿಗೆ ಧನ್ಯವಾದ ಹೇಳಿದ ರಿಷಿ ಸುನಕ್ ಅವರು, “ನಮ್ಮ ರಾಷ್ಟ್ರಕ್ಕೆ ನನ್ನಲ್ಲಿರುವ ಎಲ್ಲವನ್ನೂ ನೀಡಲು ನಾನು ಸಿದ್ಧನಿದ್ದೇನೆ. ನಾವು ಒಟ್ಟಾಗಿ ನಂಬಿಕೆಯನ್ನು ಪುನಃಸ್ಥಾಪಿಸಬಹುದು, ನಮ್ಮ ಆರ್ಥಿಕತೆಯನ್ನು ಪುನರ್ನಿರ್ಮಿಸಬಹುದು ಮತ್ತು ದೇಶವನ್ನು ಮತ್ತೆ ಒಗ್ಗೂಡಿಸಬಹುದು ಎಂದು ಹೇಳಿದ್ದಾರೆ.

ಸುದ್ದಿ ಓದಿ