ಮೆಕ್ಕೆಜೋಳಕ್ಕೆ ಖರೀದಿ ಕೇಂದ್ರ ತೆರೆದು ಕ್ವಿಂಟಲ್ ಗೆ 3000 ನಿಗದಿ ಮಾಡಲು ಮನವಿ
Request to open a procurement center for maize and fix a price of 3000 per quintal
ಧಾರವಾಡ 12: ಮೆಕ್ಕೆಜೋಳಕ್ಕೆ ಕೂಡಲೇ ಖರೀದಿ ಕೇಂದ್ರ ತೆರೆದು ಕ್ವಿಂಟಲ್ ಗೆ 3000 ನಿಗದಿ ಮಾಡಿ, ಖರೀದಿ ಮಾಡಲು ಒತ್ತಾಯಿಸಿ ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿದರು ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿಗಳಿಗೆ ಮತ್ತು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನಾ ಸಭೆಯನ್ನು ಜಸ್ಸಿ ಮಾತನಾಡಿದ ಜಿಲ್ಲಾ ಅಧ್ಯಕ್ಷರಾದ ದೀಪಾ ಧಾರವಾಡ ಪ್ರತಿ ವರ್ಷವೂ ಎಲ್ಲಾ ಬೆಳೆಗಳಿಗೂ ಸರಿಯಾದ ವೈಜ್ಞಾನಿಕ ಬೆಲೆ ನೀಡಬೇಕು ಎಂದು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಮೇಲೆ ರೈತರು ಒತ್ತಾಯಿಸುತ್ತಿದ್ದಾರೆ. ಅದರಂತೆ ಧಾರವಾಡ ಜಿಲ್ಲೆಯ ಪ್ರಮುಖ ಬೆಳೆಗಳಲ್ಲೊಂದಾದ ಮೆಕ್ಕೆಜೋಳಕ್ಕೂ ಕೂಡ ಸರಿಯಾದ ಬೆಲೆ ಸಿಗುತ್ತಿಲ್ಲ. ಈ ಬಾರಿ ಅತಿವೃಷ್ಟಿಯಿಂದ ಕಂಗಾಲಾದ ರೈತ ಬೆಳೆದ ಬೆಳೆಯನ್ನು ಮಳೆಯಿಂದ ಸಂರಕ್ಷಿಸಿಕೊಳ್ಳಲು ಪಡಬಾರದ ಕಷ್ಟಪಟ್ಟು, ಎರಡು ಮೂರು ಬಾರಿ ಬಿತ್ತನೆ ಮಾಡಿ ಅಷ್ಟು ಇಷ್ಟು ಗೊಂಜಾಳವನ್ನು ಕೈಗೆ ಧಕ್ಕಿಸಿಕೊಂಡಿದ್ದಾನೆ. ಒಂದು ಎಕರೆಗೆ ಕನಿಷ್ಠ 20 ರಿಂದ 25 ಸಾವಿರ ಖರ್ಚು ಮಾಡಿ ಅಂದಾಜು 20 ಕ್ವಿಂಟಲ್ ಮೆಕ್ಕೆಜೋಳವನ್ನು ಎಕರೆಗೆ ಬೆಳೆದಿದ್ದಾನೆ. ಕಳೆದ ವರ್ಷ ಈ ವರ್ಷ ಕೂಡ ಕ್ವಿಂಟಲ್ ಗೆ 2400 - 2500 ರೂಪಾಯಿಗೆ ಮಾರಿದಂತಹ ಮೆಕ್ಕೆಜೋಳ ಈಗ 1500- 1600 ರೂಪಾಯಿಗೆ ಮಾರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬೆಲೆಗೆ ಮಾರಾಟ ಮಾಡಿದರೆ, ಗೊಂಜಾಳ ಬೆಳೆಯಲು ಗೊಬ್ಬರಕ್ಕೆ ಖರ್ಚು ಮಾಡಿದ ಹಣವೂ ವಾಪಾಸ್ ಬರುವುದಿಲ್ಲ ಎಂದರು.
ಅತಿಯಾದ ಮಳೆಯಿಂದಾಗಿ ಈ ಬಾರಿ, ಫಸಲು ಕೂಡ ಕಡಿಮೆ ಬಂದಿದೆ, ಅದಕ್ಕೆ ಸರಿಯಾಗಿ ಇನ್ನೂ ಕೂಡ ಬೆಳೆ ನಷ್ಟ ಪರಿಹಾರವೂ ಕೈಗೆ ಸಿಕ್ಕಿಲ್ಲ,ಸಾಲ ಮಾಡಿ ಹಾಕಿದಂತಹ ಹಣವು ವಾಪಸ್ಸು ಬರುತ್ತಿಲ್ಲ, ಬೆಳೆ ನಷ್ಟ ಪರಿಹಾರ ಹಣ ಬರದೆ ಕೃಷಿ ಬಿಕ್ಕಟ್ಟಿನಿಂದ ರೈತರ ಆತ್ಮಹತ್ಯೆಯು ನಡೆಯುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಉದ್ದು, ಹೆಸರು, ಹತ್ತಿ, ಈರುಳ್ಳಿ, ಸೋಯಾಬೀನ್ ಇನ್ನಿತರೆ ಎಲ್ಲಾ ಬೆಳೆಗಳ ಬೆಲೆ ಪಾತಾಳಕ್ಕೆ ಇಳಿಯುತ್ತಿದೆ. ಇತ್ತೀಚೆಗೆ ಅಮರಗೋಳ ಎಪಿಎಂಸಿಯಲ್ಲಿ ಒಂದು ಕ್ವಿಂಟಲ್ ಈರುಳ್ಳಿ ಬೆಲೆ ರೂ.50ಕ್ಕೆ ಹರಾಜು ಕೂಗಿದ್ದು, ರೈತನ ಬದುಕನ್ನೇ ಅಣಕಿಸುವಂತಿದೆ. ಸಾರಿಗೆ ವೆಚ್ಚವು ವಾಪಸ್ಸು ಬರದಂತೆ ಎಪಿಎಂಸಿಯಲ್ಲಿ ದರ ನಿಗದಿ ಮಾಡುತ್ತಿರುವುದು ಸರ್ಕಾರದ ಬೇಜವಾಬ್ದಾರಿ ತನಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಈ ನಿಟ್ಟಿನಲ್ಲಿ ಗೊಂಜಾಳಕ್ಕೆ ಕೂಡಲೇ ಖರೀದಿ ಕೇಂದ್ರ ತೆರೆದು ಕ್ವಿಂಟಲ್ ಗೆ ರೂ.3,000 ನಿಗದಿ ಮಾಡಿ ಸರ್ಕಾರವೇ ಖರೀದಿ ಮಾಡಬೇಕು ಮತ್ತು ಈ ಕೆಳಕಂಡ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆ ಸಭೆ ಅಧ್ಯಕ್ಷತೆಯನ್ನು ಜಿಲ್ಲಾ ಕಾರ್ಯದರ್ಶಿ ಶರಣು ಗೋನವಾರ ವಹಿಸಿದ್ದರು. ಪ್ರತಿಭಟನೆಯಲ್ಲಿ ಜಿಲ್ಲಾ ಸಮಿತಿ ಸದಸ್ಯರಾದ ಶಿವಲಿಂಗಪ್ಪ ಉಣಕಲ್, ನಾರಾಯಣ ಮೇಘಾನೆ, ಈರ್ಪ ಅಂಗಡಿ, ಮಂಜುನಾಥ್ ತಿಮ್ಮಾಪುರ, ಕರಿಬಸಪ್ಪ ನೇಕರ್, ಶಿವನಗೌಡ ಮಂಗಳಗಟ್ಟ, ಮಹಾದೇವಿ, ಮಲ್ಲಪ್ಪ ಮುಂತಾದವರು ಇದ್ದರು.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 