ಮುಂಡರಗಿ

ಪಟ್ಟಣದ ಪ್ರತಿಯೊಂದು ವಾರ್ಡುಗಳ ತುಂಬೆಲ್ಲಾ ಸೊಳ್ಳೆ, ತಿಗಣಿ, ನೋರ್ಜುಗಳ ಕಾಟ : ನಗರದ ಸ್ವಚ್ಛತೆಗೆ ಆದ್ಯತೆ ನೀಡಬೇಕೆಂದು ಮನವಿ

ಪಟ್ಟಣದ ಪ್ರತಿಯೊಂದು ವಾರ್ಡುಗಳ ತುಂಬೆಲ್ಲಾ ಸೊಳ್ಳೆ, ತಿಗಣಿ, ನೋರ್ಜುಗಳ ಕಾಟ : ನಗರದ ಸ್ವಚ್ಛತೆಗೆ ಆದ್ಯತೆ ನೀಡಬೇಕೆಂದು ಮನವಿ

ಮುಂಡರಗಿ 19:  ಪಟ್ಟಣದ ಪ್ರತಿಯೊಂದು ವಾರ್ಡುಗಳ ತುಂಬೆಲ್ಲಾ ಸೊಳ್ಳೆ, ತಿಗಣಿ, ನೋರ್ಜುಗಳ ಕಾಟ ಹೆಚ್ಚಾಗಿದ್ದು, ಅವುಗಳನ್ನು ನಿಯಂತ್ರಿಸಲು ಎಲ್ಲಾ ವಾರ್ಡುಗಳಲ್ಲಿ ಫಾಗಿಂಗ್ ಮಾಡಲು ಮೂಲಕ ನಗರದ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿ ಡಾ. ಬಿ.ಆರ್‌.ಅಂಬೇಡ್ಕರ್ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದಿಂದ ಮನವಿ ನೀಡಲಾಯಿತು.  

ಸಂಘದ ಅಧ್ಯಕ್ಷ ಅಡಿವೆಪ್ಪ ಛಲವಾದಿ ಮಾತನಾಡಿ, ಮುಂಡರಗಿ ಪುರಸಭೆ ವ್ಯಾಪ್ತಿಯ ಎಲ್ಲ ವಾರ್ಡ್ಗಳಲ್ಲಿ ಸೊಳ್ಳೆ, ನೋರ್ಜು, ತಿಗಣಿಗಳು ಹೆಚ್ಚಾಗಿದ್ದು, ಹಾಗೆಯೇ ಸ್ವಚ್ಛತೆ ಇಲ್ಲದೇ ದುರ್ನಾತ ಬೀರುತ್ತಿದೆ. ಆದ್ದರಿಂದ ಎಲ್ಲ ವಾರ್ಡ್ಗಳಲ್ಲಿ ವಾಗಿಂಗ್ ಮಾಡುವ ಮೂಲಕ ನಗರದ ಸ್ವಚ್ಛತೆಗೆ ಆದ್ಯತೆ ನೀಡುವುದರ ಜೊತೆಗೆ ಪ್ರತಿ ಎರಡು ದಿನಕೊಮ್ಮೆಯಾದರೂ ಫಾಗಿಂಗ್ ಮಾಡುವ ಮೂಲಕ ಸೊಳ್ಳೆ, ನೊರ್ಜು, ತಿಗಣಿಗಳನ್ನು ನಿಯಂತ್ರಿಸಬೇಕು. ಹಾಗೂ ನಗರದಲ್ಲಿ ಚಿಕ್ಕ ಮಕ್ಕಳಿಗೆ, ಹಿರಿಯರಿಗೆ ಸೊಳ್ಳೆ ಕಚ್ಚುವುದರಿಂದ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಗೆ ಅಲೆದಾಡುವಂತಾಗಿದೆ. ಮುಂಡರಗಿ ಪುರಸಭೆಯಲ್ಲಿ ಎರಡು ಫಾಗಿಂಗ್ ಯಂತ್ರಗಳು ಇದ್ದರೂ ಸಹ ಅಧಿಕಾರಿಗಳ ನಿರ್ಲಕ್ಷ್ಯತನದಿಂದ ಇಲ್ಲಿವರೆಗೂ ಫಾಗಿಂಗ್ ಮಾಡುವ ಕಾರ್ಯಕ್ಕೆ ಮುಂದಾಗಿಲ್ಲ . ಪುರಸಭೆಯು ಈ ಬಗ್ಗೆ ನಿಷ್ಕಾಳಜಿ ವಹಿಸದೆ ಮುಂಜಾಗೃತಾ ಕ್ರಮವನ್ನು ವಹಿಸಿಕೊಂಡು ಫಾಗಿಂಗ್ ಮಾಡಬೇಕು . ಹಾಗೂ ಚರಂಡಿ ಮತ್ತು ಗಲೀಜು ಪ್ರದೇಶದಲ್ಲಿ ಭೀಚಿಂಗ್ ಪೈಡರ್ ಸಿಂಪಡಿಸಬೇಕು ಹಾಗೂ ಗಲೀಜು ಪ್ರದೇಶದ ಭಾಗದಲ್ಲಿ ಸ್ವಚ್ಛತೆಗೆ ಕ್ರಮ ವಹಿಸಬೇಕು ಎಂದು ಆಗ್ರಹಿಸಿ ಮನವಿ ನೀಡಿದರು.  

ಮನವಿ ಸ್ವೀಕರಿಸಿದ ಮುಂಡರಗಿ ಪುರಸಭೆ ಮುಖ್ಯಧಿಕಾರಿಗಳು ಎರಡು ದಿನಗಳೋಳಗಾಗಿ ಪಟ್ಟಣದಲ್ಲಿ ಪಾಗಿಂಗ್ ಮಾಡುವ ಭರವಸೆ ನೀಡಿದರು. ಸರಕಾರದ ಗೃಹ ಲಕ್ಷ್ಮಿ ಯೋಜನೆಯ ಲಾಭ ಪಡೆಯಲು ಸಹ ತಿಳಿಸಿದರು.  

ಈ ವೇಳೆ ಮಂಜುನಾಥ ಕಟ್ಟಿಮನಿ, ಪ್ರಕಾಶ್ ದೊಡ್ಡಮನಿ, ಹುಲಿಗೆಪ್ಪ ಬಂಡಿವಡ್ಡರ, ನಾಗರಾಜ ರಾಮೇನಹಳ್ಳಿ, ಹಸನ್ ಅಳವಂಡಿ, ಹನಮಂತಪ್ಪ ಭಜಂತ್ರಿ, ರವಿ ಭಜಂತ್ರಿ. ಜಾಫರಾಸಾಬ್, ರಮೇಶ ಕೊಪ್ಪಳ, ಎಲ್ಲಪ್ಪ ಭಜಂತ್ರಿ, ಮಂಜುನಾಥ್ ಅಳವಂಡಿ, ಸುರೇಶ್ ಬಂಡಿವಡ್ಡರ, ಪ್ರವೀಣ್ ಭಜಂತ್ರಿ ಸೇರಿದಂತೆ ಸಂಘದ ಸದಸ್ಯರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು. 


ಸುದ್ದಿ ಓದಿ