ಗಣಿತ ಸಮೂಹದ ಅಧ್ಯಕ್ಷರಾಗಿ ರಮೇಶ್ ಬಾಬು ಆಯ್ಕೆ
ಮುಧೋಳ 23: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ವತಿಯಿಂದ ನಡೆಯುವ 2021 - 22 ನೇ ಸಾಲಿನ ತಾಲೂಕ ಮಟ್ಟದ ಮೊದಲನೆಯ ಗಣಿತ ವಿಷಯದ ವಿಷಯ ಕಾರ್ಯಾಗಾರದ ಸಭೆ ಆನ್ಲೈನ್ನಲ್ಲಿ ಕ್ಷೇತ್ರಶಿಕ್ಷಣಾಧಿಕಾರಿಗಳ ಉಪಸ್ಥಿತಿಯಲ್ಲಿ ನಡೆಯಿತು. 2020 21 ನೇ ಸಾಲಿನ ಗಣಿತ ವಿಷಯದ ಸಮೂಹದ ಅಧ್ಯಕ್ಷರಾದಂತಹ ಪರಶುರಾಮ್ ಬಗಲಿ ತಮ್ಮ ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸಿದರು. ಮತ್ತು ಮುಧೋಳ ತಾಲೂಕಿನ ಎಲ್ಲ ಗಣಿತ ಶಿಕ್ಷಕ-ಶಿಕ್ಷಕಿಯರು ಅವಿರೋಧವಾಗಿ ಮಹಾಲಿಂಗಪೂರ ಕೆ.ಎಲ್. ಇ ಪ್ರೌಢಶಾಲೆಯ ಗಣಿತ ಶಿಕ್ಷಕ ರಮೇಶ್ ಬಾಬು ರವರನ್ನು ಆಯ್ಕೆ ಮಾಡಿದರು. ಕುಳಲಿಯ ಸರಕಾರಿ ಪ್ರೌಢಶಾಲೆಯ ಗಣಿತ ಶಿಕ್ಷಕ ಸಿ.ವಿ. ಸೂಡಿ ಕಾರ್ಯದರ್ಶಿಗಳಾಗಿ ಅವಿರೋಧವಾಗಿ ಆಯ್ಕೆಯಾದರು. ಮತ್ತು ಆರ್ ಬಿಜಿ ಲೋಕಾಪುರದ ಗಣಿತ ಶಿಕ್ಷಕರಾದ ಹೆಚ್ .ವಿ. ಕೇರಿ ಖಜಾಂಚಿಯಾಗಿ ಅವಿರೋಧವಾಗಿ ಆಯ್ಕೆಯಾದರು. ಮುಧೋಳದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವಿ.ಎಂ.ಪತ್ತಾರ್ ಅವರು ಭಾಗವಹಿಸಿ ಅಧ್ಯಕ್ಷ, ಕಾರ್ಯದರ್ಶಿ, ಖಜಾಂಚಿಗಳಿಗೆ ಸ್ವಾಗತಿಸಿ ಇಲಾಖೆ ನಿಮ್ಮೊಂದಿಗೆ ಸದಾ ಸೇವೆಗೆ ಸಿದ್ಧ ಇರುತ್ತದೆ ಗಣಿತದಲ್ಲಿ ಇನ್ನಷ್ಟು ಹೊಸ ಹೊಸ ವಿಧಾನಗಳನ್ನು ಬಳಸಿ ಸುಲಭೀಕರಿಸಿ ಮಕ್ಕಳಿಗೆ ಮುಟ್ಟುವ ಹಾಗೆ ತಂತ್ರಜ್ಞಾನದ ಮೂಲಕ ತಿಳಿಸಿ ಎಂದು ಹೇಳಿದರು. ಕುಳಲಿಯ ಸರಕಾರಿ ಪ್ರೌಢಶಾಲೆ ತಂತ್ರಜ್ಞಾನದಲ್ಲಿ ಮಾಡಿದ ಸಾಧನೆಯ ಬಗ್ಗೆ ಇಲಾಖೆಗೆ ಹೆಮ್ಮೆಯಿದೆ ಎಂದರು.ಧಾರವಾಡಮಠ ಗುರುಗಳು ಹೊಸ ಮತ್ತು ಬದಲಾದ ಪರೀಕ್ಷಾ ಕ್ರಮದ ಬಗ್ಗೆ ಮಾಹಿತಿ ನೀಡಿ ಕಾರ್ಯಕ್ರಮವನ್ನು ವಂದಿಸಿದರು.