ಮುಂಡರಗಿ

ರಾಮಕೃಷ್ಣ ದೊಡ್ಡಮನಿ ಬಂಡಾಯ ಎದ್ದಿರುವುದು ಶೋಭೆ ತರುವಂತದ್ದಲ್ಲ: ನಾಡಗೌಡರ

ರಾಮಕೃಷ್ಣ ದೊಡ್ಡಮನಿ ಬಂಡಾಯ ಎದ್ದಿರುವುದು ಶೋಭೆ ತರುವಂತದ್ದಲ್ಲ: ನಾಡಗೌಡರ

ಮುಂಡರಗಿ 09:  ರಾಜ್ಯದಲ್ಲಿ ವಿಧಾನ ಸಭೆ ಸಾರ್ವತ್ರಿಕ ಚುನಾವಣೆಯ ಪ್ರಯುಕ್ತ ಗದಗ ಜಿಲ್ಲೆಯ ಶಿರಹಟ್ಟಿ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ಇನ್ನೂ ಅಧಿಕೃತವಾದ ಹೆಸರು ಘೋಷಣೆ ಆಗದೇ ಊಹಾಪೋಹಗಳಿಗೆ ಒಳಗಾಗಿ ಕಾಂಗ್ರೆಸ್ ಪಕ್ಷದ ಶಿರಹಟ್ಟಿ ಕ್ಷೇತ್ರದ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಅವರ ಬೆಂಬಲಿಗರು ಕಾಂಗ್ರೆಸ್ ಹಿರಿಯ ಮುಖಂಡರಿಗೆ ಏಕವಚನದಲ್ಲಿ ಮಾತನಾಡುವುದರ ಮೂಲಕ ಬಂಡಾಯ ಎದ್ದಿರುವುದು ಕಾಂಗ್ರೆಸ್ ಪಕ್ಷಕ್ಕೆ ಶೋಭೆ ತರುವಂತದ್ದಲ್ಲ ಎಂದು ಹಿರಿಯರು ಹಾಗೂ ಮುಂಡರಗಿ ಬ್ಲಾಕ್ ಕಾಂಗ್ರೆಸ್ ಕಮೀಟಿ ಮಾಜಿ ಅಧ್ಯಕ್ಷ ವಿ.ಎಲ್‌. ನಾಡಗೌಡರ ಹೇಳಿದರು. 

ಪಟ್ಟಣದ ನಾಡಗೌಡರ ವಾಡೆಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು. ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿಯವರು ಈ ರೀತಿಯ ಸಂಗತಿಗಳನ್ನು ಮಾಡುವುವರಲ್ಲ. ಆದರೆ ಉದ್ವೇಗದಿಂದ ಹೀಗೆ ನಡೆದುಕೊಂಡಿರಬಹುದು. ರಾಮಕೃಷ್ಣ ದೊಡ್ಡಮನಿಯವರು ಈ ಹಿಂದೆ ಕಾಂಗ್ರೇಸ್ ಪಕ್ಷದ ಬಲದಿಂದ ನನ್ನ ಮುಂದಾಳತ್ವದಿಂದ ಪುರಸಭೆಗೆ ಅಧ್ಯಕ್ಷರಾಗಿದ್ದರು. ಅಲ್ಲದೇ ಕಳೆದ 2013 ರ ವಿಧಾನ ಸಭಾ ಚುನಾವಣೆಯಲ್ಲಿ ನಾವೆಲ್ಲರೂ ಸೇರಿ ಅವರನ್ನು ಕಾಂಗ್ರೇಸ್ ಪಕ್ಷದಿಂದ ಪ್ರಭಲವಾಗಿ ಬೆಂಬಲ ನೀಡುವುದರ ಮೂಲಕ ಅವರನ್ನು ಶಾಸಕರನ್ನಾಗಿ ಮಾಡಲಾಗಿತ್ತು. 

ಹಾಗೂ ಕಾಂಗ್ರೇಸ್ ಪಕ್ಷದಿಂದ ಅವರಿಗೆ ಮುಖ್ಯಮಂತ್ರಿ ಸಂಸದಿಯ ಕಾರ್ಯದರ್ಶಿಯನ್ನಾಗಿಯೂ ಮಾಡಲಾಗಿತ್ತು. ಆದರೆ ಅವರು 2018 ರ ಚುನಾವಣೆಯಲ್ಲಿ ಕೆಲವು ಕಾರಣಗಳಿಂದ ಅವರು ಸೋಲು ಅನುಭವಿಸಿದ್ದು ನಮ್ಮೆಲ್ಲರಿಗೂ ಬೇಸರವಾಗಿತ್ತು. ಆದರೆ ಅವರನ್ನು ನಾವು ಯಾವತ್ತು ಬಿಟ್ಟುಕೊಡುವುದಿಲ್ಲ. ಇಂದಿಗೂ 2023 ರ ಚುನಾವಣೆಗೆ ರಾಮಕೃಷ್ಣ ದೊಡ್ಡಮಯವರಿಗೆ ಕಾಂಗ್ರೇಸ್ ಪಕ್ಷದ ಹೈಕಮಾಂಡ್ ಟಿಕೇಟ್ ನೀಡಿದರೂ ಕಾಂಗ್ರೇಸ್ ಪಕ್ಷದ ಸಿದ್ದಾಂತಗಳಿಗೆ ತಲೇಬಾಗಿ ಅವರ ಪರವಾಗಿ ಮತಕ್ಕಾಗಿ ಶ್ರಮಿಸುತ್ತೇವೆ. ಆದರೆ ಅವರ ಬೆಂಬಲಿಗರು ಕಾಂಗ್ರೇಸ್ ಪಕ್ಷದ ಹಿರಿಯರನ್ನು ಏಕವಚನದಿಂದ ಮಾತನಾಡುವ ಮೂಲಕ ಕಾಂಗ್ರೇಸ್ ಪಕ್ಷಕ್ಕೆ ಮೋಸಮಾಡಿದಂತಾಗುತ್ತದೆ ಎಂದು ಹೇಳಿದರು. 

ಈ ವೇಳೆ ಬ್ಲಾಕ್ ಕಾಂಗ್ರೆಸ್ ಕಮೀಟಿ ಮಾಜಿ ಅಧ್ಯಕ್ಷ ರಾಮು ಕಲಾಲ ಮಾತನಾಡಿ, ಕಾಂಗ್ರೇಸ್ ಪಕ್ಷ ಶಿಸ್ತಿನ ಪಕ್ಷವಾಗಿದೆ. ಅದರ ತತ್ವ ಸಿದ್ದಾಂತಗಳನ್ನು ಯಾರು ಮರೆಬಾರದು. ಪಕ್ಷದ ಮುಖಂಡರ ತೀರ್ಮಾನದಂತೆ ಎಲ್ಲಾ ಕಾರ್ಯಕರ್ತರು ನಡೆದುಕೊಳ್ಳಬೇಕಾಗುತ್ತದೆ. ಹೀಗಾಗಿ ಕಾಂಗ್ರೆಸ್ ಪಕ್ಷದಿಂದ ಶಿರಹಟ್ಟಿ ವಿಧಾನ ಸಭೆ ಕ್ಷೇತ್ರದಿಂದ ಯಾರಿಗೆ ಟಿಕೇಟ್ ಎಂದು ಇನ್ನೂ ಅದಿಕೃತ ಅಭ್ಯರ್ಥಿಯ ಘೋಷಣೆಯಾಗಿಲ್ಲ. ಆದರೆ ಈಗಲೇ ಮಾಜಿ ಶಾಸಕರ ಬೆಂಬಲಿಗರು ಪಕ್ಷದ ತತ್ವ ಸಿದ್ದಾಂತಗಳಿಗೆ ಬೆಲೆ ಕೊಡದ ರೀತಿಯಲ್ಲಿ ನಡೆದುಕೊಳ್ಳುವುದು ಸರಿಯಲ್ಲ. ಪ್ರತಿಯೊಬ್ಬ ಆಕಾಂಕ್ಷಿಗಳಿಗೆ ಟಿಕೇಟ್ ಕೊಡಬೇಕಾದರೆ ಸ್ಕ್ರೀನಿಂಗ್ ಕಮೀಟಿಯಿಂದ ಪಟ್ಟಿಯನ್ನು ಸಂಗ್ರಹಿಸಿ ಅವರ ವರದಿ ತರಿಸಿಕೊಂಡು ಕೊನೆಗೆ ಹೈಕಮಾಂಡ ಮುಂದೆ ಇಡಲಾಗುತ್ತದೆ. ಹಾಗೂ ಆಕಾಂಕ್ಷಿಗಳ ಆಂತರಿಕ ಸಮೀಕ್ಷೆಯ ಮೂಲಕ ಸಮರ್ಥ ಅಭ್ಯರ್ಥಿಯನ್ನು ಘೋಷಣೆ ಮಾಡುತ್ತಾರೆ. ಅಲ್ಲಿಯವರೆಗೂ ಕಾಯುವುದು ಎಲ್ಲರ ಕರ್ತವ್ಯವಾಗಬೇಕು.  

ಕಾಂಗ್ರೇಸ್ ಪಕ್ಷದಿಂದ ಗುರುತಿಸಿಕೊಂಡು ಶಾಸಕರಾಗಿ ಕೆಲಸ ಮಾಡಿ ಹಾಗೂ ಸಂಸದಿಯ ಕಾರ್ಯದರ್ಶಿಯಾಗಿ ಕೆಲಸ ಮಾಡಿದ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿಯನವರು ತಾವಾದರೂ ತಮ್ಮ ಬೆಂಬಲಿಗರಿಗೆ ತಿಳಿ ಹೇಳಬಹುದಿತ್ತು. ಪಕ್ಷದರಿಂದ ಗುರುತಿಸಿಕೊಂಡು ಪಕ್ಷದ ಬಗ್ಗೆ ಅವಹೇಳನಕಾರಿ ಮಾತನಾಡಿದರೂ ಬೆಂಬಲಿಗರಿಗೆ ತಿಳಿ ಹೇಳದೇ ಅವರಿಗೆ ಪ್ರಚೋದನೆ ಕೊಡುತ್ತಿರುವುದರಿಂದ ಕಾಂಗ್ರೇಸ್ ಪಕ್ಷ ಹೇಗೆ ಬೆಳೆಯಬೇಕು. ಆದ್ದರಿಂದ ಪಕ್ಷದ ಕಾರ್ಯಕರ್ತರು ಸಂಯಮದಿಂದ ನಡೆದುಕೊಳ್ಳುವುದು ಸೂಕ್ತ. ಹೀಗಾಗಿ ಕಾಂಗ್ರೇಸ್ ಹೈಕಮಾಂಡ್ ಯಾರಿಗಾದರೂ ಟೀಕೆಟ್ ನೀಡಲಿ, ಅವರ ಪರವಾಗಿ ಪ್ರತಿಯೊಬ್ಬರೂ ಮನಸ್ಪೂರ್ವಕವಾಗಿ ಕಾಂಗ್ರೆಸ್ ಪಕ್ಷದ ತೀರ್ಮಾನವನ್ನು ಒಪ್ಪಿಕೊಂಡು ಕಾಂಗ್ರೇಸ್ ಪಕ್ಷದ ಗೆಲುವಿಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು. 

ಪುರಸಭೆಯ ಸದಸ್ಯರು ಹಾಗೂ ವಿರೋಧ ಪಕ್ಷದ ನಾಯಕ ನಾಗರಾಜ ಹೊಂಬಳಗಟ್ಟಿ ಮಾತನಾಡಿ, ಸುಜಾತ ದೊಡ್ಡಮನಿಯವರು ಸ್ಥಳಿಯರಲ್ಲ ಎನ್ನಲಾಗುತ್ತಿರುವುದು ಸುಳ್ಳು. ಅವರು ಮೂಲತಃ ಶಿರಹಟ್ಟಿಯವರು ಅವರ ಸಂಪೂರ್ಣ ಶಿಕ್ಷಣವೂ ಶಿರಹಟ್ಟಿಯಲ್ಲಿಯೇ ಮುಗಿದಿರುತ್ತದೆ. ಹೀಗಾಗಿ ಕಾಂಗ್ರೇಸ್ ಪಕ್ಷ ಎಲ್ಲಾ ರೀತಿಯಿಂದಲೂ ಸಮೀಕ್ಷೇ ಮಾಡಿ ವರದಿ ತರಿಸಿಕೊಂಡು ಹಾಗೂ ಯಾರಿಗೂ ಗೊತ್ತಿಲ್ಲದೇ ಕ್ಷೇತ್ರದ ಎಲ್ಲರ ಅಭಿಪ್ರಾಯದ ಮೂಲಕ ಅವರಿಗೆ ಟಿಕೇಟ್ ನೀಡಲು ಮುಂದಾಗಿರಬಹುದು. ಆದರೆ ಇನ್ನೂ ಟಿಕೇಟ್ ಪೈನಲ್ ಆಗಿಲ್ಲ. ಇಷ್ಟರಲ್ಲೇ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿಯವರ ಬೆಂಬಲಿಗರು ಅವಹೇಳನಕಾರಿಯಾಗಿ ವರ್ತಿಸುವುದು ಪಕ್ಷಕ್ಕೆ ಮುಜುಗುರು ತರುವಂತಾಗುತ್ತದೆ. ಹೀಗಾಗಿ ಪಕ್ಷ ಕೊಟ್ಟ ತೀರ್ಮಾನವನ್ನು ಎಲ್ಲರೂ ಪರಿಗಣಿಸಿ ಕಾಂಗ್ರೇಸ್ ಪಕ್ಷದ ಆಡಳಿತಕ್ಕೆ ಬೆಂಬಲಿಸೋಣ ಎಂದು ಹೇಳಿದರು. 

ಈ ವೇಳೆ ಎಂ.ಯು.ಮಕಾಂದಾರ, ಮಹ್ಮದರಫಿ ವಡ್ಡಟ್ಟಿ, ಐ.ಎಸ್‌.ಸರ್ವೆ, ಯಲ್ಲಪ್ಪ ಹೊಂಬಳಗಟ್ಟಿ, ರಾಘವೇಂದ್ರ ದೊಡ್ಡಮನಿ, ರಮೇಶ ಪೂಜಾರ, ಈರ​‍್ಪ ಕಮ್ಮಾರ, ದುರಗಪ್ಪ ಮೋರನಾಳ, ನಿಂಗರಾಜ ಹಾಲಿನವರ, ಮಂಜುನಾಥ ಹರಿಜನ, ಶಿವು ಕಲಕೇರಿ, ಮಂಜುನಾಥ ಭಜಂತ್ರಿ ಇತರರು ಇದ್ದರು. 


ಸುದ್ದಿ ಓದಿ