ಗದಗ-ವಾಡಿ ರೈಲ್ವೆ ಹಳಿಗೆ ಸೇತುವೆ ನಿರ್ಮಿಸಲು ಸಚಿವ ಸೋಮಣ್ಣರಿಗೆ ರಾಜೂರ ಮುಖಂಡರಿಂದ ಮನವಿ
ಕುಕನೂರು 10: ತಾಲೂಕಿನ ರಾಜೂರು ಗ್ರಾಮದ ಮುಖಂಡರು ಗದಗ-ವಾಡಿ ರೈಲ್ವೆ ಹಳಿಗೆ ಮೇಲ್ಸುತುವೇ ನಿರ್ಮಿಸಬೇಕೆಂದು ಮಾಜಿ ಸಚಿವ ಬಸವರಾಜ ರಾಯರಡ್ಡಿ ನೇತೃತ್ವದಲ್ಲಿ ಮೂಲ ಸೌಕರ್ಯ ಸಚಿವ ವಿ.ಸೋಮಣ್ಣ ಅವರಿಗೆ ಗುರುವಾರ ವಿಧಾನಸೌಧದ ಅವರ ಕಚೇರಿಯಲ್ಲಿ ಮನವಿ ಸಲ್ಲಿಸಿದರು.
ನಂತರ ಮಾತನಾಡಿದ ಅವರು, ಕುಕನೂರು ತಾಲೂಕಿನ ರಾಜೂರು ಗ್ರಾಮದಲ್ಲಿ ಪ್ರಾರಂಭವಾಗಿರುವ ಗದಗ-ವಾಡಿ ರೈಲ್ವೆ ಕಾಮಗಾರಿಯನ್ನು ಗುತ್ತಿಗೆದಾರರು ಹಳಿಯನ್ನು ಹಾಕಿ ನಿರ್ಮಿಸಿದ್ದಾರೆ. ರಾಜೂರು ಗ್ರಾಮದ ರೈತರ ಜಮೀನುಗಳು ಸುಮಾರು 4 ಸಾವಿಕ್ಕೂ ಹೆಚ್ಚು ಭೂಮಿ ತೊಂಡಿಹಾಳ ಮಾರ್ಗದ ರಸ್ತೆಯಲ್ಲಿ ಇದೆ. ರೈತರಿಗೆ ಜಮೀನಿಗೆ ಸರಿಯಾಗಿ ಹೋಗುವದಕ್ಕೆ ಸರಿಯಾದ ಮಾರ್ಗ ಇಲ್ಲವಾಗಿದ್ದು ಆದ್ದರಿಂದ ಹಳಿಯ ಮೇಲೆ ಒಂದು ಮೇಲ್ಸುತುವೆಯನ್ನು ನಿರ್ಮಿಸಬೇಕು ಇದರಿಂದ ನೂರಾರು ರೈತರಿಗೆ ತಮ್ಮ ಜಮೀನಿಗಳ ಸಂಚಾರಕ್ಕೆ ಅನುಕೂಲವಾಗುತ್ತದೆ ಎಂದು ಮನವಿ ಸಲ್ಲಿಸಿದರು.
ಸಚಿವ ವಿ. ಸೋಮಣ್ಣ ಮಾತನಾಡಿ, ಶೀಘ್ರವಾಗಿ ಮೇಲ್ಸುತುವೆ ನಿರ್ಮಿಸಲು ಕ್ರಮ ತೇಗೆದುಕೊಳ್ಳುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಬಸವರಾಜ ರಾಯರಡ್ಡಿ, ಮುಖಂಡರಾದ ಸಂಗಪ್ಪ ಅಂಗಡಿ, ಮುದಿಯಪ್ಪ ಕವಲೂರು, ಶರಣಪ್ಪ ಅರಕೇರಿ, ಪಕೀರಸಾಬ ನದಾಫ್, ದೇವೆಂದ್ರ್ಪ ಬಡಿಗೇರ, ಭೀಮರೆಡ್ಡಿಪ್ಪ ಮಾದಿನೂರು, ವಿಜಯಕುಮಾರ ಮದ್ದೂರ್, ಅರವಿಂದ್ ಮುಂದಲಮನಿ, ಶರಣಪ್ಪ ಸೋಂಪೂರ, ಶರಣಪ್ಪ ಮುಂಡರಗಿ ಸೇರಿದಂತೆ ಅನೇಕರು ಇದ್ದರು.