ಅಂತರರಾಷ್ಟ್ರೀಯ

ಮಾಲ್ಡಿವ್ಸ್‌‌ನಿಂದ ಸಿಂಗಾಪುರಕ್ಕೆ ಹಾರಿದ ರಾಜಪಕ್ಸೆ!

ಮಾಲ್ಡಿವ್ಸ್‌‌ನಿಂದ ಸಿಂಗಾಪುರಕ್ಕೆ ಹಾರಿದ ರಾಜಪಕ್ಸೆ!

ಕೊಲಂಬೊ: ಜುಲೈ 14 : ಶ್ರೀಲಂಕಾ ಅಧ್ಯಕ್ಷ ಗೋತಬಯ ರಾಜಪಕ್ಸೆ ಗುರುವಾರ ಮಧ್ಯಾಹ್ನ ಮಾಲ್ಡೀವ್ಸ್‌ನಿಂದ ಸಿಂಗಾಪುರಕ್ಕೆ ತೆರಳಿದ್ದಾರೆ ಎಂದು ಡೈಲಿ ಮಿರರ್ ಮಾಹಿತಿ ನೀಡಿದೆ.

ಶ್ರೀಲಂಕಾದ ವಾಯುಪಡೆಯ ಜೆಟ್‌ನಲ್ಲಿ ಮಾಲೆಗೆ ತೆರಳಿದ್ದ ರಾಜಪಕ್ಸೆ ಅವರು ಇಂದು ಸೌದಿ ಅರೇಬಿಯಾದ ವಿಮಾನದ ಮೂಲಕ ಸಿಂಗಾಪುರಕ್ಕೆ ತೆರಳಿದ್ದಾರೆ ಎಂದು ಪತ್ರಿಕೆ ತಿಳಿಸಿದೆ.

ರಾಜಪಕ್ಸೆ ಅವರು ತಮ್ಮ ಪತ್ನಿ ಮತ್ತು ಇಬ್ಬರು ಭದ್ರತಾ ಅಧಿಕಾರಿಗಳೊಂದಿಗೆ ಕೊಲಂಬೊದಿಂದ ಹೊರಟಿದ್ದರು. ಮಾಲ್ಡೀವ್ಸ್ ನ ವಿಶೇಷ ರಕ್ಷಣಾ ಪಡೆಯ ಯೋಧರು ಲಂಕಾ ಅಧ್ಯಕ್ಷರನ್ನು ವಿಮಾನ ನಿಲ್ದಾಣಕ್ಕೆ ಕರೆದೊಯ್ದಿದ್ದರು ಎಂದು ತಿಳಿಸಿದೆ.

ಸುದ್ದಿ ಓದಿ