ಆರ್ಸಿಬಿ ತಂಡದ ಲೋಗೋ ಬದಲಾವಣೆ: 2020ಕ್ಕೆ ಅದೃಷ್ಠ ನೀಡುವುದೇ ಲಾಂಛನ?
ಬೆಂಗಳೂರು, ಫೆ 14,ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಅದೃಷ್ಟವಿಲ್ಲ. ಇದರಿಂದಾಗಿ ಒಮ್ಮೆಯೂ ಚಾಂಪಿಯನ್ ಪಟ್ಟ ಅಲಂಕರಿಸಿರಲಿಲ್ಲ. ಈ ಕುಖ್ಯಾತಿಯಿಂದ ತಂಡವನ್ನು ಪಾರು ಮಾಡಲು ಆರ್ಸಿಬಿ ಫ್ರಾಂಚೈಸಿ ಮುಂಬರುವ 2020ರ ಐಪಿಎಲ್ ಟೂರ್ನಿಗೆ ಲಾಂಛನವನ್ನು ಶುಕ್ರವಾರ ಬದಲಾವಣೆ ಮಾಡಿದೆ. ಆ ಮೂಲಕ ಕಳೆದ ಎರಡು ದಿನಗಳಿಂದ ಆರ್ಸಿಬಿ ಫ್ರಾಂಚೈಸಿ ಸಾಮಾಜಿಕ ಜಾಲ ತಾಣದಲ್ಲಿ ತೆಗೆಯಲಾಗಿದ್ದ ಲೋಗೋ ಹಾಗೂ ಪ್ರೊಫೈಲ್ ಚಿತ್ರ ಇದೀಗ ಪರಿಷ್ಕರಣಿಗೊಂಡಿದ್ದು ಮುಂದಿನ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಆರ್ಸಿಬಿ ಚಾಂಪಿಯನ್ ಆಗುವುದೇ ಎಂದು ಕಾದು ನೋಡಬೇಕಾಗಿದೆ.ಭವ್ಯ ಸಿಂಹದೊಂದಿಗೆ ಮರುವಿನ್ಯಾಸಗೊಳಿಸಲಾದ ಲೋಗೋ ಆರ್ಸಿಬಿಯ ತತ್ತ್ವಶಾಸ್ತ್ರವನ್ನು ವಿವರಿಸುತ್ತದೆ ಮತ್ತು ಜೀವಂತಿಕೆಯನ್ನು ತರುತ್ತದೆ.
ಅತ್ಯಾಕರ್ಷಕ ಕ್ರಿಕೆಟ್ ಆಡುವ ದಿಟ್ಟ ಮತ್ತು ನಿರ್ಭೀತ ಮನೋಭಾವವನ್ನು ಇದು ಸೂಚಿಸುತ್ತದೆ.ಕಳೆದ ವರ್ಷಾಂತ್ಯದಲ್ಲಿ ಐಪಿಎಲ್ 13ನೇ ಆವೃತ್ತಿಗಾಗಿ ನಡೆದ ಹರಾಜಿನ ಬಳಿಕ ಲೊಗೊದಿಂದ ಬೆಂಗಳೂರು ಹೆಸರನ್ನು ತೆಗೆದು ಹಾಕಿರುವುದು ಕನ್ನಡಾಭಿಮಾನಿಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಕೊನೆಗೂ ಹೊಸ ಲೊಗೊದಲ್ಲಿ ತಪ್ಪನ್ನು ತಿದ್ದಿರುವ ಆರ್ಸಿಬಿ ಪರಿಷ್ಕೃತ ಲೊಗೊದಲ್ಲಿ ಬೆಂಗಳೂರು ಎಂಬ ಪದವನ್ನು ಆರಂಭದಲ್ಲೇ ಚಿನ್ನದ ವರ್ಣದಲ್ಲಿ ಉಲ್ಲೇಖಿಸಿ ಅಭಿಮಾನಿಗಳ ಪ್ರೀತಿಗೆ ಪಾತ್ರವಾಗಿದೆ.ರಾಯಲ್ ಚಾಜಲೆಂಜರ್ಸ್ ಬೆಂಗಳೂರು ತಂಡದ ಲಾಂಛನ ಪರಿಷ್ಕೃತಗೊಂಡಿರುವ ಬೆನ್ನಲ್ಲೇ ತಂಡದ ಸಮವಸ್ತ್ರವೂ ಬದಲಾಗುತ್ತಾ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಐಪಿಎಲ್ನಲ್ಲಿ ಪ್ರತಿ ಸಾಲಿನಲ್ಲೂ ವಾಡಿಕೆಯಂತೆ ಎಲ್ಲ ತಂಡಗಳು ಜೆರ್ಸಿಯಲ್ಲಿ ಸಣ್ಣ ಪುಟ್ಟ ಮಾರ್ಪಾಡುಗಳನ್ನು ತರುತ್ತದೆ. ಈ ನಿಟ್ಟಿನಲ್ಲಿ ಆರ್ಸಿಬಿ 'ಹೋಮ್' ಹಾಗೂ 'ಎವೇ' ಜೆರ್ಸಿಗಳು ಹೇಗೆ ಕಾಣಿಸಿಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 