ಹೋರ್ತಿ ಮಲ್ಲಿಕಾರ್ಜುನ ಶಾಲೆಯಲ್ಲಿ ರಸಪ್ರಶ್ನೆ ಕಾರ್ಯಕ್ರಮ
Quiz program at Horthi Mallikarjuna School
ಹೋರ್ತಿ ಮಲ್ಲಿಕಾರ್ಜುನ ಶಾಲೆಯಲ್ಲಿ ರಸಪ್ರಶ್ನೆ ಕಾರ್ಯಕ್ರಮ
ಇಂಡಿ 09: ತಾಲೂಕಿನ ಹೋರ್ತಿ ಮಲ್ಲಿಕಾರ್ಜುನ ಅಂತಾರಾಷ್ಟ್ರೀಯ ಪಬ್ಲಿಕ್ ಶಾಲೆ ಹೊರ್ತಿಯಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ಭಾಷಾ ರಸಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಮಕ್ಕಳು ಬಹು ಉತ್ಸಾಹದಿಂದ ಭಾಗವಹಿಸಿದರು.
ಸ್ಪರ್ಧೆಯಲ್ಲಿ ಕವಿ ಕಾವ್ಯ ಕಣಜ, ವೇಗ ಆವೇಗ, ಇತಿಹಾಸ ಇಕ್ಷುವನ, ವ್ಯಾಕರಣ ವೈಭವ ಎಂದೆಲ್ಲಾ ಸುತ್ತುಗಳಿದ್ದು ಕನ್ನಡ ಭಾಷೆಯ ಪಕ್ಷಿನೋಟವನ್ನೇ ಮಕ್ಕಳು ಸವಿದರು. ಮಕ್ಕಳ ಭಾಷಾ ಸಾಮರ್ಥ್ಯ ಅಳೆಯುವಲ್ಲಿ ಈ ಕಾರ್ಯಕ್ರಮ ಬಹು ಯಶಸ್ವಿಯಾಯಿತು.ಕಾರ್ಯಕ್ರಮದ ಕೊನೆಯಲ್ಲಿ ಸಂಸ್ಥೆಯ ಕಾರ್ಯದರ್ಶಿ ಬಿ ಬಿ ಗಡ್ಡದ ಮಾತನಾಡಿ ರಸಪ್ರಶ್ನೆ ಕಾರ್ಯಕ್ರಮವು ವಿದ್ಯಾರ್ಥಿಗಳ ಜ್ಞಾನವನ್ನು ಪರೀಕ್ಷಿಸಲು, ಕಲಿಕೆಯನ್ನು ಪ್ರೋತ್ಸಾಹಿಸಲು ಮತ್ತು ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸಲು ಸಹಾಯ ಮಾಡುತ್ತದೆ. ಇದು ಸಾಮಾನ್ಯ ಜ್ಞಾನವನ್ನು ಹೆಚ್ಚಿಸಲು, ವಿಷಯಗಳ ಕುರಿತು ತಿಳುವಳಿಕೆಯನ್ನು ಆಳವಾಗಿಸಲು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧಪಡಿಸಲು ಅತ್ಯಂತ ಪರಿಣಾಮಕಾರಿ ಸಾಧನವಾಗಿದೆ. ಮಕ್ಕಳಲ್ಲಿ ಭಾಷಾಭಿಮಾನ ಮೂಡಿಸಲು ರಸಪ್ರಶ್ನೆ ಕಾರ್ಯಕ್ರಮ ಅದ್ಭುತ ವಿಧಾನವಾಗಿದ್ದು, ಸ್ಪರ್ಧಾ ಮನೋಭಾವನೆ ಮೂಡಿಸುತ್ತದೆ. ಹೀಗಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಈ ಮೂಲಕ ಸಂಸ್ಥೆಯ ಸರ್ವತೋಮುಖ ಬೆಳವಣಿಗೆ ಸಾಧ್ಯವಾಗುವುದು ಎಂದು ಹೇಳಿದರು.
ಸಂಸ್ಥೆಯ ನಿರ್ದೇಶಕರಾದ ಗುರುನಾಥ ಭೋಸಗಿ, ಅಣ್ಣಪ್ಪ ಪೂಜಾರಿ ಹಾಗೂ ಶಾಲೆಯ ಪ್ರಾಂಶುಪಾಲ ಪ್ರೊ. ಅಣ್ಣಪ್ಪ ಎಮ್ ಶಿರೂರ ಹಾಗೂ ಗುರುಗಳು ಉಪಸ್ಥಿತರಿದ್ದರು.
ಸವಿತಾ ಗಡ್ಡದ, ಅನುಷಾ ಮಹಿಷಿ, ಲಕ್ಷ್ಮಿ ಕುಂಬಾರ ತೀಪುಗಾರರಾಗಿ ಕಾರ್ಯನಿರ್ವಹಿಸಿದರು. ಗುರುಗಳಾದ ಚನ್ನವೀರ ಹಿರೇಮಠ ಅಜರ್ ಮಲ್ಲಾಡ್ಕರ್, ರವಿ ಕಟ್ಟಿಮನಿ, ಆಕಾಶ ಇಂಗಳೇಶ್ವರ್, ಸಂಗಪ್ಪ ಹಲಿಂಗಲಿ ಶಿಕ್ಷಕರು ಮತ್ತಿತರರು ಉಪಸ್ಥಿತರಿದ್ದರು.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 