ಮುಧೋಳ

ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ಪುನರಾರಂಭಿಸುವಂತೆ ಒತ್ತಾಯಿಸಿ ಪ್ರತಿಭಟಿನೆ

ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ಪುನರಾರಂಭಿಸುವಂತೆ ಒತ್ತಾಯಿಸಿ ಪ್ರತಿಭಟಿನೆ

ಆಡಳಿತ ಮಂಡಳಿ ರಾಜೀನಾಮೆ ಕೊಟ್ಟು ಸರ್ಕಾರ ಕಾರ್ಖಾನೆ ಅರಂಭಿಸಲಿ:ಕೂಡಿಹಳ್ಳಿ ಚಂದ್ರಶೇಖರ

ಮುಧೋಳ 25: ತಾಲ್ಲೂಕಿನ ತಿಮ್ಮಾಪುರ ಗ್ರಾಮದ ರೈತರ ಸಹಕಾರಿ ಸಕ್ಕರೆ ಕಾರ್ಖಾನೆ (ರನ್ನ ಶುಗರ್) ,ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು ಕಾರ್ಖಾನೆಯನ್ನು ಪ್ರಸಕ್ತ ಹಂಗಾಮನ್ನು ಆರಂಭಿಸಬೇಕು. 9 ತಿಂಗಳಿಂದ ಉಳಸಿಕೊಂಡಿರುವ ಬಾಕಿ ವೇತನವನ್ನು  ನೀಡಬೇಕು. 6 ನೇ ವೇತನವನ್ನು ಅನುಷ್ಠಾನಗೊಳಿಸಬೇಕು ಹಾಗೂ ಹಲವಾರು ಬೇಡಿಕೆಗಾಗಿ  ರನ್ನ ಶುಗರ್ಸ ಎಂಪ್ಲಾಯಿಸ್ ಯುನಿಯನ್ ಸದಸ್ಯರು  ನಗರದಲ್ಲಿ ತಹಶೀಲ್ದಾರ್ ಕಛೇರಿ ಎದುರು ನಡೆದ ಅನಿರ್ದಿಷ್ಟಾವಧಿ  ಪ್ರತಿಭಟನೆ ಮೂವತ್ತೊಂದನೆಯ ದಿನಕ್ಕೆ ಕಾಲಿರಿಸಿದ ಸಮಯದಲ್ಲಿ  ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಕೂಡಿಹಳ್ಳಿ ಚಂದ್ರಶೇಖರ ಬಾಗಿಯಾಗಿ ಮಾತನಾಡಿದರು.      

ಆಡಳಿತ ಮಂಡಳಿ ರಾಜೀನಾಮೆ ಕೊಡಿ ಇಲ್ಲವೆ ಕಾರ್ಖಾನೆ ಪ್ರಾರಂಭಿಸಿ ಇಲ್ಲವೆ ಸರ್ಕಾರದ ತಾಬಾ ತೆಗೆದುಕೊಂಡು ಪ್ರಾರಂಬಿಸಿ ಶೇಹರುದಾರರು,ರೈತರ ಕಾರ್ಖಾನೆಯ ಕಾರ್ಮಿಕರ ಮೇಲೆ ರೈತರ ಉತಾರ ಅಡವಿಟ್ಟು 65ಕೋಟಿ ಸಾಲ ಮಾಡಿದ ಹಾಗೂ ಕೊಟ್ಟ ಬ್ಯಾಂಕಿಗೆ ಶಿಕ್ಷೆಯಾಗಬೇಕು ರೈತರ ಪರವಾಗಿ ಸರ್ಕಾರ ಇರಬೇಕು ಎಂದು ಹೇಳಿದರು.   ರೈತರ ಸಹಕಾರಿ ಸಕ್ಕರೆ ಕಾರ್ಖಾನೆ (ರನ್ನ ಶುಗರ್ಸ) ಈಗ ಆರ್ಥಿಕವಾಗಿ ನಷ್ಟದಲ್ಲಿದ್ದ ಹಾಗೂ ಹಲವು ತಿಂಗಳಿಂದ ಉಳಸಿಕೊಂಡಿರುವ ಬಾಕಿ ವೇತನವನ್ನು ಕಾರ್ಖಾನೆಯ ಎಂಪ್ಲಾಯಿಸ್ ಯುನಿಯೂನ್ ನೀಡದೆ ಅನ್ಯಾಯ ಮಾಡಿದ್ದು ಜೊತೆಗೆ ಜಿಲ್ಲೆಯಲ್ಲಿ ಸಹಕಾರ ತತ್ವದಲ್ಲಿ ನಡೆಯುತ್ತಿರುವ ಏಕೈಕ ಕಾರ್ಖಾನೆ ಕಟ್ಟಿದ ರೈತರಿಗೆ ಅನ್ಯಾಯ ಮಾಡಿದೆ ಪ್ರಸಕ್ತ ಹಂಗಾಮು ಕಬ್ಬು ನುರಿಸುವವರೆಗೂ ನಾನು ನಿಮ್ಮ ಜೊತೆಗೆ ಇದ್ದು ,ಕಾರ್ಖಾನೆ ಅರಂಬಿಸಲು ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.   

ರನ್ನ ಶುಗರ್ಸ ಎಂಪ್ಲಾಯಿಸ್ ಯುನಿಯೂನ್ ಅಧ್ಯಕ್ಷ ಈರಪ್ಪಗೌಡ ಪಾಟೀಲ ಮಾತನಾಡುತ್ತಾ ಈಗಾಗಲೇ 5ನೇ ವೇಜ್ ಬೋರ್ಡ ವೇತನ ಜಾರಿಗೊಂಡಿದ್ದು,ಈಗಾಗಲೇ 2014ರಿಂದ ಸರಕಾರದಲ್ಲಿ 6ನೇ ವೇತನ ಜಾರಿಯಾಗಿದ್ದು,6ನೇ ವೇತನವನ್ನು ಜಾರಿಗೊಳಿಸಬೇಕು.2004 ರಿಂದ ಇಲ್ಲಿಯವರೆಗೆ ಕೊಡತಕ್ಕ ಒಟ್ಟು ವೇತನದ 30 ಕೋಟಿ ಹಿಂಬಾಕಿಯನ್ನು ಕೊಡಬೇಕು. ಕಾರ್ಖಾನೆಯಲ್ಲಿ 5 ವರ್ಷಕ್ಕಿಂತ ಹೆಚ್ಚಿಗೆ ದುಡಿಯುತ್ತಿರುವ ದಿನಗೂಲಿ ಸಿಬ್ಬಂದಿ ಹಾಗೂ ಕಾರ್ಮಿಕರನ್ನು ವೇಜಬೋರ್ಡ ವೇತನ ದಡಿಯಲ್ಲಿ ತರಬೇಕು.ಈಗಾಗಲೇ ದುಡಿಯುತ್ತಿರುವ ಯಾವುದೇ ಸಿಬ್ಬಂದಿ ಕಾರ್ಮಿಕರನ್ನು ವರ್ಗಾವಣೆ ಮಾಡಬಾರದು, ವಿ.ಆರ್.ಎಸ್ ಸೌಲಭ್ಯ ನೀಡಬೇಕು,ಪ್ರತಿ ತಿಂಗಳು ಮೊದಲನೇ ವಾರದಲ್ಲಿ ವೇತನ ನೀಡಬೇಕು,ಪ್ರತಿ ವರ್ಷ ತಪ್ಪದೆ ಕಾರ್ಮಿಕ ವರ್ಷದ ಒಟ್ಟು ವೇತನದ ಶೇ.25 ರಷ್ಟು ಬೋನಸ್ ನೀಡಬೇಕು,ಪ್ರತಿಯೊಬ್ಬ ಕಾರ್ಮಿಕನಿಗೆ ಪ್ರತಿ ತಿಂಗಳು 5 ಕೆಜಿ ಸಕ್ಕರೆ ಉಚಿತವಾಗಿ ನೀಡಬೇಕು,ಎಲ್ಲ ಕಾರ್ಮಿಕರಿಗೆ ಸೇವಾ ಭದ್ರತೆ ನೀಡಬೇಕು ಹೀಗೆ ಹತ್ತಾರು ಬೇಡಿಕೆಗಳನ್ನು ಕಾರ್ಖಾನೆಯ ಆಡಳಿತ ಮಂಡಳಿಯವರು ಈಡೇರಿಸಬೇಕೆಂದು ಹೇಳಿದರು.   ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಕೂಡಿಹಳ್ಳಿ ಚಂದ್ರಶೇಖರ ಬಾಗಿಯಾಗಿ ಮಾತನಾಡಿದರು. ದಯಾನಂದ ಪಾಟೀಲ, ರೈತ ಸಂಘದ ಜಿಲ್ಲಾಧ್ಯಕ್ಷ ಬಸವಂತ ಕಾಂಬಳೆ,ಉಕಹೋಸ ಪ್ರಧಾನ ಕಾರ್ಯದರ್ಶಿ ನಾಗೇಶ ಗೋಲಶೆಟ್ಟಿ,ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ದಯಾನಂದ ಪಾಟೀಲ,ಸಂಗಪ್ಪ ನಾಗರಡ್ಡಿ,ಈರಪ್ಪ ಹಂಚನಾಳ,ಗಣೇಶ ಈಳಗೇರ,ರೈತ ಸಂಘದ ಮಂಜುಳಾ ಪೂಜಾರಿ, ಉಪಾಧ್ಯಕ್ಷ ಉಮೇಶ ಬಡಿಗೇರ, ಪ್ರ.ಕಾರ್ಯದರ್ಶಿ ಪ್ರಕಾಶ ಕಬ್ಬೂರ,ಖಜಾಂಚಿ ಪಾಂಡಪ್ಪ ಮುಳ್ಳೂರ, ಸದಸ್ಯರಾದ ಹಣಮಂತಗೌಡ ಪಾಟೀಲ, ನಾಗಪ್ಪ ಕೆಳಗಡೆ, ಚಂದ್ರಶೇಖರ ದೇಸಾಯಿ,ಕಾಳಪ್ಪ ಕಂಬಾರ,ಗೋವಿಂದಪ್ಪ ಅವರಾದಿ ಮುಂತಾದವರು ನೇತೃತ್ವ ವಹಿಸಿದ್ದರು.


ಸುದ್ದಿ ಓದಿ