ಅತಿಥಿ ಉಪನ್ಯಾಸಕರ ಸೇವಾ ಭದ್ರತೆಗಾಗಿ ಪ್ರತಿಭಟನೆ
ಮುಧೋಳ 27: ಕಾಲೇಜು ಶಿಕ್ಷಣ ಇಲಾಖಾ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಕಾಲೇಜುಗಳಲ್ಲಿರುವ ಸದ್ಯದ ಕಾರ್ಯನಿರತ ಹುದ್ದೆಗಳಿಗೆ ವಿರುದ್ಧವಾಗಿ ಹೊಸ ಹುದ್ದೆಗಳನ್ನು ಸೃಜಿಸಿ, ಸೇರೆ್ಡ ಮತ್ತು ಕಾನೂನು ತಿದ್ದುಪಡಿ ಮಾಡಿಕೊಂಡು ಅನುಮೋದನೆ ನೀಡಿ, ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರನ್ನು ಸೃಜಿಸಿದ ಹುದ್ದೆಗಳಲ್ಲಿ ವೀಲೀನಗೊಳ ಸೇವಾ ಸಕ್ರಮಾತಿ ಮಾಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘಟನೆ ತಾಲೂಕಾ ಘಟಕ ವತಿಯಿಂದ ವಿವಿಧ ಸಂಘಟನೆಗಳ ಬೆಂಬಲದೊಂದಿಗೆ ಬಸ್ ನಿಲ್ದಾಣದಿಂದ ತಹಸೀಲ್ದಾರ ಕಚೇರಿ ವರೆಗೆ ಪ್ರತಿಭಟನೆ ಮಾಡಿ ಸರ್ಕಾರದ ವಿರುದ್ದ ಘೋಷಣೆ ಕೂಗಿ ನಗರದ ಬಸವ ವೃತ್ತ, ಶಿವಾಜಿ ವೃತ್ತ ಗಡದನ್ನವರ ವೃತ್ತ, ರನ್ನ ವೃತ್ತ, ಯಾದವಾಡ ಕ್ರಾಸ್ ಗಳಲ್ಲಿ ವಿದ್ಯಾರ್ಥಿ ಹಾಗೂ ಅತಿಥಿ ಉಪನ್ಯಾಸಕರು ಮಾನವ ಸರಪಳಿ ನಿರ್ಮಾಣ ಮಾಡಿ ತಹಸೀಲ್ದಾರ ಸಂಗಮೇಶ ಬಾಡಗಿ ಅವರಿಗೆ ಮನವಿ ಸಲ್ಲಿಸಿದರು.
ಜಿಲ್ಲಾ ಅಧ್ಯಕ್ಷ ಬಸವರಾಜ ಮಂಜಗಾರ ಮಾತನಾಡಿ ಯುಜಿಸಿ ನಿಯಮಾವಳಿಯಂತೆ ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ನೀಡುವ ವೇತನವನ್ನು ನಮ್ಮ ಸಪ್ರದ ಕಾಲೇಜುಗಳಲ್ಲಿ ಸೇವೆ ಮಾಡುತ್ತಿರುವ ಅತಿಥಿ ಉಪನ್ಯಾಸಕರಿಗೂ ಆದೇ ವೇತನ ನೀಡಬೇಕು ಕೊರೊನಾ ಕಾಲದ ನಂತರ ಇತ್ತೀಚಿಗೆ ಸಪ್ರದ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರನ್ನು ಸೆಮಿಸ್ಟರ್ಗಳಿಗೆ ನೇಮಕ ಮಾಡಿಕೊಳ್ಳುವ ಈ ಅನಿಷ್ಟ ಪದ್ಧತಿ ತಕ್ಷಣವೇ ಕೈಬಿಟ್ಟು ಶೈಕ್ಷಣಿಕ ವರ್ಷದ 12 ತಿಂಗಳವರಿಗೂ ವೇತನ ನೀಡುವ ಕ್ರಮ ಕೈಗೊಳ್ಳಬೇಕು . ಸರ್ಕಾರಿ ಮೇಲಿನ ಎಲ್ಲಾ ನಿಯಮಾವಳಿಗಳಂತೆ ಪರೀಶೀಲಿಸಿ ಸೂಕ್ತ ನ್ಯಾಯ ಒದಗಿಸಬೇಕು ಎಂದು ಹೇಳಿದರು.
ತಾಲೂಕಾ ಅಧ್ಯಕ್ಷ ಪಾಂಡರಂಗ ಜಾದವ ಮಾತನಾಡಿ ಅತಿಥಿ ಉಪನ್ಯಾಸಕರ ಖಾಯಂಮಾತಿ ಮಾಡಲು ಒತ್ತಡ ಹಾಕಿ , ಸೇವಾ ಭದ್ರತೆ ನೀಡಲು ತುರ್ತು ಕ್ರಮ ಕೈಗೋಳ್ಳಲು ಸೂಚಿಸಬೇಕು . ಹಾಗೂ ಸರ್ಕಾರ ಕೈಗೊಳ್ಳುವ ತಿರ್ಮಾನಕ್ಕೆ ನಾವು ಬದ್ಧರಾಗಿರುತ್ತವೆ. ಆದ್ದರಿಂದ ಕರ್ನಾಟಕ ರಾಜ್ಯದ ಕಾಲೇಜು ಶಿಕ್ಷಣ ಇಲಾಖಾ ವ್ಯಾಪ್ತಿಯಲ್ಲಿ ಬರುವ ಪ್ರಥಮ ದರ್ಜೆ ಕಾಲೇಜುಗಳಲ್ಲಿರುವ ಕಾರ್ಯನಿರತ ಹುದ್ದೆಗಳಿಗೆ ವಿರುದ್ಧವಾಗಿ ಹೊಸ ಹುದ್ದೆಗಳನ್ನು ಸೃಜಿಸಿ, ಸರ್ವಡೆ ಮತ್ತು ಕಾನೂನು ತಿದ್ದುಪಡಿ ಮಾಡಿಕೊಂಡು ಅನುಮೋದನೆ ನೀಡಿ ತಮ್ಮ ಘನ ಸರ್ಕಾರವು ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರನ್ನು ಸೃಜಿಸಿದ ಹುದ್ದೆಗಳಲ್ಲಿ ವೀಲೀನಗೊಳಸಿ ಸೇವಾ ಭದ್ರತೆ ನೀಡಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮುಧೋಳ ಲೋಕಪೂರ,ಯಡಹಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರಾದ ಜಿಲ್ಲಾ ಅಧ್ಯಕ್ಷ ಬಸವರಾಜ ಮಂಜಗಾರ, ತಾಲ್ಲೂಕಾ ಅಧ್ಯಕ್ಷ ಪಾಂಡರಂಗ ಜಾದವ ,ಜಾದವ ಹನಮಂತ ಕುಲಗೋಡ, ಮಹಾಂತೇಶ ಪಟ್ಟಣಶೆಟ್ಟಿ, ರಮೇಶ ಪರಕರಕಿ, ಮಂಜು ತೋಳಮಟ್ಟಿ,ವಿನೋದ ಹಡಪದ, ರಾಜೇಸಾಬ ಕೊಪ್ಪ, ಶಂಕರ ನಿಂಬಾಳಕರ, ಗಿರಿಮಲ್ಲಪ್ಪ ಕರಿಜಾಡರ, ಕಲಾವತಿ ಗುರವ, ದ್ರಾಕ್ಷಾಯಣಿ ತೋಟದ, ಐ.ಬಿ.ಹೂಗಾರ, ಬಸವರಾಜ ಕಾಮಗೊಂಡ ತಿಮ್ಮಾರೆಡ್ಡಿ ಸೇರಿದಂತೆ ಇತರರು ಇದ್ದರು.
ನಗರದ ಬಸವ ವೃತ್ತ, ಶಿವಾಜಿ ವೃತ್ತ ಗಡದನ್ನವರ ವೃತ್ತ, ರನ್ನ ವೃತ್ತ, ಯಾದವಾಡ ಕ್ರಾಸ್ ಗಳಲ್ಲಿ ವಿದ್ಯಾರ್ಥಿ ಹಾಗೂ ಅತಿಥಿ ಉಪನ್ಯಾಸಕರು ಮಾನವ ಸರಪಳಿ ನಿರ್ಮಾಣ ಮಾಡಿ ರಸ್ತೆ ತಡೆದರಿಂದ ಕೆಲಕಾಲ ಪ್ರಯಾಣಿಕರಿಗೆ ತೊಂದರೆಯಾಗಿತ್ತು.
ಕಳೆದ ಹದಿನೆಂಟು ದಿನಗಳಿಂದ ಉಪನ್ಯಾಸ ನಡೆಯದ ಕಾರಣ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಇದ್ದರು.