ರನ್ನ ಸಕ್ಕರೆ ಕಾರ್ಖಾನೆ ಪುನರಾರಂಭಿಸುವಂತೆ ಒತ್ತಾಯಿಸಿ ಪ್ರತಿಭಟನೆ
ಮುಧೋಳ 03: ರೈತರ ಸಹಕಾರಿ ರನ್ನ ಸಕ್ಕರೆ ಕಾರ್ಖಾನೆ ಪುನರಾರಂಭಿಸುವಂತೆ ಒತ್ತಾಯಿಸಿ ಪ್ರತಿಭಟಿನೆಯ ಎಂಟನೆಯ ದಿನ ಮುಕ್ತಾಯವಾಗುತ್ತಾ ಬಂದಿದ್ದು ತಾಲ್ಲೂಕಿನ ವಿವಿದ ಸಂಘಟನೆಗಳ ಮೂಲಕ ತಹಶೀಲ್ದಾರ ಕಚೇರಿಯನ್ನು ತಡರಾತ್ರಿ ಮುತ್ತಿಗೆ ಹಾಕಿದರು. ರೈತರ ಸಕ್ಕರೆ ಕಾರ್ಖಾನೆಯ ರೈತ ಹಾಗೂ ಕಾರ್ಮಿಕರ ಹೋರಾಟಕ್ಕೆ ಇಂದು ರೈತ ಸಂಘ, ಹಸಿರು ಸೇನೆ, ಉತ್ತರ ಕರ್ನಾಟಕ ಹೋರಾಟ ಸಮಿತಿ,ಕಾಂಗ್ರೆಸ್, ಜೆಡಿಎಸ್, ಕರವೆ ಸೇರಿದಂತೆ ಇತರ ಸಂಘಟನೆಗಳ ಬೆಂಬಲ ವ್ಯಕ್ತ ಪಡಿಸಿದವು. ಒಂದು ವಾರದಿಂದ ಮುಧೋಳ ನಗರದ ತಾಲೂಕಾ ಕಛೇರಿಯ ಮುಂದೆ ನಡೆದ ರೈತರ ಸಕ್ಕರೆ ಕಾರ್ಖಾನೆಯ ರೈತರ ಹಾಗೂ ಕಾರ್ಮಿಕರ ಅನಿರ್ದಿಷ್ಟಾವದಿ ಧರಣಿ ಸತ್ಯಾಗ್ರಹಕ್ಕೆ ಒಂಭತ್ತನೆಯ ದಿನಕ್ಕೆ ಕಾಲಿಟ್ಟಿದೆ. ಉತ್ತರ ಕರ್ನಾಟಕ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ನಾಗೇಶ ಗೋಲಶೆಟ್ಟಿ ಮಾತನಾಡಿ ಕಾರ್ಖಾನೆಯ ಆಡಳಿತ ಮಂಡಳಿ ಈಗಾಗಲೆ 12 ಕೋಟಿ ಡಿಸಿಸಿ ಬ್ಯಾಂಕಿನ ಸಾಲವನ್ನು ದುರುಪಯೋಗ ಪಡಿಸಿಕೊಂದಿದ್ದು ಸಾಬೀತಾಗಿದ್ದು ಈಗಾಗಲೇ ಅವರ ಮೇಲೆ ಕಾನೂನಿನ ಕ್ರಮ ಕೈಗೊಳ್ಳಲು ಪ್ರಾರಂಭವಾಗಿದೆ ರೈತರ ಮತ್ತು ಕಾರ್ಮಿಕರ ಹಿತ ದೃಷ್ಟಿಯಿಂದ ಪ್ರಾರಂಭಿಸದಿದ್ದರೆ ರಾಜ್ಯಮಟ್ಟದಲ್ಲಿ ಉಗ್ರ ಹೋರಾಟ ನಡೆಸಲು ತಿರ್ಮಾನಿಸಲಾಗಿದೆ ಎಂದರು.
ರೈತ ಸಂಘದ ಜಿಲ್ಲಾ ಅಧ್ಯಕ್ಷ ಬಸವಂತ ಕಾಂಬಳೆ ಮಾತನಾಡಿ ಸಂಕಷ್ಟ ರೈತರಿಗೆ ಹಾಗೂ ನೌಕರರಿಗೆ ಬಂದಿದ್ದು ಅವರ ನೆರವಿಗೆ ಬರದಿದ್ದರೆ ಊಘ್ರ ಹೋರಾಟ ಮಾಡಲು ಸಿದ್ದ ಇವತ್ತು ಊಟ ಹಾಗು ನಿದ್ರೆ ಸಹ ಇಲ್ಲೆ ಮಾಡಲಾಗುವದು ಎಂದರು ಮಾಜಿ ಜಿ.ಪಂ ಉಪಾಧ್ಯಕ್ಷ ಮುತ್ತಪ್ಪ ಕೋಮಾರ ಉತ್ತರ ಕರ್ನಾಟಕ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ನಾಗೇಶ ಗೋಲಶೆಟ್ಟಿ, ಜಿ.ಪಂ ಮಾಜಿ ಉಪಾಧ್ಯಕ್ಷ ಮುತ್ತಪ್ಪ ಕೋಮಾರ, ವಿಠ್ಠಲ ತುಂಬರಮಟ್ಟಿ. ಯಲ್ಲಪ್ಪ ಹೆಗಡೆ.ಗಣೇಶ ಭೋವಿ, ಕಾರ್ಮಿಕ ಮುಖಂಡ ಪ್ರಕಾಶ್ ಕಬ್ಬೂರ ಸೇರಿ ಇತರರು ಇದ್ದರು.ನಂತರ ಊಟ ಸಹ ಇಲ್ಲೆ ಪ್ರಾರಂಭ ಮಾಡಿದರು ತಹಸೀಲ್ದಾರ ಸಂಗಮೇಶ ಬಾಡಗಿ ಮಾತನಾಡಿ ಎರಡು ದಿನದಲ್ಲಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ವಸ್ತುಸ್ಥಿತಿಯ ನ್ನು ತಿಳಿಸಲಾಗುವದು ಅವಕಾಶ ನೀಡಿ ಸಹಕರಿಸಿ ಎಂದರು ಪ್ರತಿಭಟನೆ ಮುಂದುವರೆಯಿತು.