ಜಮಖಂಡಿ

ಜಮಖಂಡಿಗೆ ವಿಶ್ವವಿದ್ಯಾಲಯ ಆದೇಶ ತಡೆಹಿಡಿದಿರುವುದನ್ನು ಖಂಡಿಸಿ ಪ್ರತಿಭಟನೆ

ಜಮಖಂಡಿಗೆ ವಿಶ್ವವಿದ್ಯಾಲಯ ಆದೇಶ ತಡೆಹಿಡಿದಿರುವುದನ್ನು ಖಂಡಿಸಿ ಪ್ರತಿಭಟನೆ

ಜಮಖಂಡಿ 13: ರಾಜ್ಯ ಸಕರ್ಾರ  ಜಮಖಂಡಿಗೆ ವಿಶ್ವವಿದ್ಯಾಲಯ ಸ್ಥಾಪಿಸಿರುವುದಾಗಿ ಆದೇಶ ಹೊರಡಿಸಿ ಮತ್ತೇ ಆ ಆದೇಶವನ್ನು ತಡೆಹಿಡಿದಿರುವುದನ್ನು ಖಂಡಿಸಿ ಭಾರತೀಯ ರಾಷ್ಟ್ರೀಯ ವಿದ್ಯಾಥರ್ಿ ಒಕ್ಕೂಟದ ನೂರಾರು ಶಾಲಾ, ಕಾಲೇಜಿನ ವಿದ್ಯಾಥರ್ಿಗಳು ಇಲ್ಲಿನ ಎ.ಜಿ.ದೇಸಾಯಿ ವೃತ್ತದಲ್ಲಿ ರಸ್ತೆತಡೆ ನಡೆಸಿ ತೀವ್ರ ಪ್ರತಿಭಟನೆ ನಡೆಸಿ, ತಹಸೀಲ್ದಾರ ಸದಾಶಿವ ಮಕ್ಕೋಜಿ ಅವರಿಗೆ ಮನವಿ ಸಲ್ಲಿಸಿದರು.

ರಾಜ್ಯ ಸಕರ್ಾರವು ನ.5 ರಂದು ಜಮಖಂಡಿಗೆ ಸ್ನಾತಕೊತ್ತರ ಕೇಂದ್ರಕ್ಕೆ ವಿಶ್ವ ಮಹಾವಿದ್ಯಾಲಯವನ್ನು ನೀಡಿದ್ದು, ಬಾಗಲಕೋಟೆಯ ಕೆಲ ರಾಜಕಾರಣಿಗಳ ಒತ್ತಡದಿಂದ ಜಮಖಂಡಿಗೆ ನೀಡಿದ್ದ ವಿಶ್ವವಿದ್ಯಾಲಯ ಆದೇಶವನ್ನು ರಾಜ್ಯ ಸಕರ್ಾರ ಹಿಂಪಡೆದಿರುವುದು ದುರದುಷ್ಠಕರ ಸಂಗತಿ. ರಾಜ್ಯ ಸಕರ್ಾರ ಕೂಡಲೇ ವಿಶ್ವ ಮಹಾವಿದ್ಯಾಲಯವನ್ನು ಮರುನೇಮಕ ಮಾಡಿ ಈ ಭಾಗದ ಬಡ ಮತ್ತು ಪ್ರತಿಭಾವಂತ ವಿದ್ಯಾಥರ್ಿಗಳಿಗೆ ಅನೂಕುಲ ಮಾಡಿ ಕೊಡಬೇಕು. ಇಲ್ಲದಿದ್ದರೆ ಸಕರ್ಾರ ವಿರುದ್ಧ ರಾಜ್ಯದಾದ್ಯಂತ ಉಗ್ರ ಹೋರಾಟ-ಪ್ರತಿಭಟನೆ ನಡೆಸುಗುವುದು ಎಂದು ಎಬಿವಿಪಿ ವಿಜಯ ಶಿರಬೂರ ಹಾಗೂ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ. 

 

ಸುದ್ದಿ ಓದಿ