ಜಮಖಂಡಿ

ಸರಕಾರದ ಕೈಗೊಂಡಿರುವ ನೀತಿ ವಿರೋಧಿಸಿ ಪ್ರತಿಭಟನೆ

ಸರಕಾರದ ಕೈಗೊಂಡಿರುವ ನೀತಿ ವಿರೋಧಿಸಿ ಪ್ರತಿಭಟನೆ
ಜಮಖಂಡಿ ನಗರದ ಸರಕಾರಿ ರಮಾನಿವಾಸ ನಡೆದ ಪತ್ರಿಕಾಗೋಷ್ಠಿಯಲ್ಲಿ ಜೈನ ಸಮಾಜದ ವರ್ಧಮಾನ ನ್ಯಾಮಗೌಡ ಮಾತನಾಡಿದರು

ಜಮಖಂಡಿ04: ಅಹಿಂಸೆ ತಳಪಾಯದ ಮೇಲೆ ಸಂಯಮವೇ ಉಸಿರಾಗಿರಿಸಿಕೊಂಡು ಮೂತ ರೂಪ ಪಡೆದ ಜೈನ ಧರ್ಮದ ಶ್ರೀಮಂತ ಪರಂಪರೆ ಭರತ ವರ್ಷಕ್ಕೆ ಸುಭದ್ರ ಇತಿಹಾಸ ತಂದುಕೊಟ್ಟಿರುವ ಸುಕ್ಷೇತ್ರಗಳಿಗೆ ಧಕ್ಕೆ ತರುವ ರೀತಿಯಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರದ ಕೈಗೊಂಡಿರುವ ನೀತಿ ವಿರೋಧಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಜೈನ ಸಮಾಜದ ಪ್ರಮುಖರಾದ ವರ್ಧಮಾನ ನ್ಯಾಮಗೌಡ ಹೇಳಿದರು.

ನಗರದ ಸರಕಾರಿ ರಮಾನಿವಾಸ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಸೆಂಬರ್ 5ರಂದು ಮುಂಜಾನೆ 9 ಗಂಟೆಗೆ ಹಳೇತಹಶೀಲದಾರ ಕಛೇರಿಯಿಂದ ಎ.ಜಿ.ದೇಸಾಯಿ ವೃತ್ತದವರೆಗೆ ಪಾದಯಾತ್ರೆ ಮೂಲಕ ಶಾಂತಯುತವಾಗಿ ಪ್ರತಿಭಟನೆ ನಡೆಯಲಿದೆ. ಎ.ಜಿ.ದೇಸಾಯಿ ವೃತ್ತದಲ್ಲಿ ಜೈನ ಮನಿಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದರು.

ಕಾಲಕಳೆದಂತೆ ಅದೆಷ್ಟೋ ಕ್ಷೇತ್ರಗಳನ್ನು ಕಳೆದುಕೊಂಡಿದ್ದೇವೆ. ಇಂದು ಜಾಖರ್ಂಡದ ಸಮ್ಮೇದಗಿರಿ, ಗುಜರಾತದ ತತ್ಯಂಜಯ (ಗಿರಿನಾರ), ರಾಜಸ್ಥಾನದ ರಾಣಕಮ್ರ ಕ್ಷೇತ್ರಗಳಿಗೆ ಕಂಟಕ ಎದುರಾಗಿದೆ. ಚಾಖರ್ಂಡ ಸರ್ಕಾರದ ಶಿಫಾರಸ್ಸಿನ ಆಧಾರದ ಮೇಲೆ ಕೇಂದ್ರ ಅರಣ್ಯ ಸಚಿವಾಲಯ 2019ರಲ್ಲಿ ಅಧಿಸೂಚನೆ ಹೊರಡಿಸಿ ಸಮ್ಮೇದ ಶಿಖರಜಿ ಕ್ಷೇತ್ರವನ್ನು ವನ್ಯಜೀವಿ ಅಭಯಾರಣ್ಯ, ಪ್ರವಾಸೋದ್ಯಮ ಮತ್ತು ಧಾರ್ಮಿಕೇತರ ಚಟುವಟಿಕೆಗಳಿಗೆ ಅನುಮತಿ ನೀಡಿರುವುದು ಜೈನ ಸಮಾಜ ಮತ್ತು ಧರ್ಮದ ಬಗ್ಗೆ ಮರಣ ಶಾಸನ ಬರೆದಂತಾಗಿದೆ. ಗುಜರಾತದ ಗಿರಿನಾರ ಕ್ಷೇತ್ರ ಕಳೆದ 150 ವರ್ಷಗಳಿಂದ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿದೆ. ರಾಜಸ್ಥಾನ ರಾಣಕಪುರ ಭಗವಾನ ಆದಿನಾಥರ ಮಂದಿರವು ತನ್ನ ಅದ್ಭುತ ಶಿಲ್ಪಕಲೆಯಿಂದ ವಿಶ್ವಮಾನ್ಯ ಕೀರ್ತಿ ಗಳಿಸಿದೆ. ಚತುಮರ್ುಖ ಬಸದಿ 14ನೇ ಶತಮಾನದಲ್ಲಿ ರಾಜಾ ಕುಂಭನ ಮಂತ್ರಿ ಧರಣಠಾ ಸೋರವಾಲನು 50 ವರ್ಷಗಳಲ್ಲಿ ಮಂದಿರ ನಿರ್ಮಿಸಿದನು. ಇದನ್ನು ರಾಜಸ್ಥಾನ ಸರ್ಕಾರ ಅರಣ್ಯ ಸಂರಕ್ಷಣ ಕಾನೂನಿಡಿ ವಶಪಡಿಸಿಕೊಳ್ಳುವ ಅಧಿಸೂಚನೆ ಹೊರಡಿಸಿದೆ. ಲೋಕಪ್ರಿಯ ಮೂಛಾಲಾದ ಮಹಾವೀರಜಿ ಕ್ಷೇತ್ರವೂ ನಮ್ಮಿಂದ ಮರೆಯಾಗಲಿದ್ದು ಪರಿಸ್ಥಿತಿ ಗಂಭೀರತೆ ಅರಿತು ಕೇಂದ್ರ ಮತ್ತು ರಾಜ್ಯ ಸಕರ್ಾರಗಳು ಗಮನಿಸಬೇಕು. ಈಗಾಗಲೇ ಹೊರಡಿಸಿದ ಅಧಿಸೂಚನೆ ಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಲಿದೆ. ದೇಶದ ಮೂಲೆ ಮೂಲೆಗಳಲ್ಲಿ ಜೈನ ಸಮಾಜದ ಸಂಘಟನಾ ಶಕ್ತಿ ಪ್ರದರ್ಶನ ನಡೆಯಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ದೇವಲ ದೇಸಾಯಿ, ಕಿರಣ ದೇಸಾಯಿ, ಅಣ್ಣಪ್ಪ ನಂದಗಾವ, ಆನಂದ ಶೇಠ, ಪದ್ಮಾನಂದ  ಜಕನೂರ, ದಯಾನಂದ ಶಿರಗಾರ, ಪಾಸರಮಲ್ಲ ಜೈನ, ಸಂತುಲಾಲ ಜೈನ, ಬಾಹುಬಲಿ ಕಡಕೋಳ, ಅಜಯ ದೇಸಾಯಿ, ಆರ್..ಪಿ.ನ್ಯಾಮಗೌಡ, ಅಣ್ಣಪ್ಪ ಶಿರಹಟ್ಟಿ ಸಂದೀಪ ಜೈನ, ರಾಕೇಶ ಮೆಹತಾ, ರಾಹುಲ ಜೈನ ಸಹಿತ ಹಲವರು ಇದ್ದರು.



ಸುದ್ದಿ ಓದಿ