ಆರೋಗ್ಯವಂತರಾಗಲು ಪರಿಸರ ಸಂರಕ್ಷಣೆ ಉಳಿಸಿ : ಶರಣಬಸಪ್ಪ ದಾನಕೈ
Protect the environment to stay healthy: Sharanabasappa Danakai
ಯಲಬುರ್ಗಾ 01: ಸಮಾಜದಲ್ಲಿರುವ ಜನತೆ ಉತ್ತಮ ಆರೋಗ್ಯವಂತರಾಗಲು ನಾವು ಪರಿಸರ ಸಂರಕ್ಷಣೆಯಲ್ಲಿ ನಿರಂತರವಾಗಿ ಗಿಡ ಮರಗಳನ್ನು ನೆಡುವದರ ಜೋತೆಗೆ ಸಂಪೂರ್ಣವಾಗಿ ಬೆಳೆಸಲು ಮುಂದಾಗಬೇಕು ಅಂದಾಗ ಪರಿಸರ ಉಳಿಯಲು ಸಾದ್ಯ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ( ವಾಸುದೇವ ಮೇಟಿ ಬಣ) ಯಲಬುರ್ಗಾ ತಾಲೂಕಾ ಅದ್ಯಕ್ಷ ಶರಬಸಪ್ಪ ದಾನಕೈ ಅವರು ತಮ್ಮ 56 ನೆ ವರ್ಷದ ಹುಟ್ಡು ಹಬ್ಬವನ್ನು ಕೆಕ್ ಕಟ್ಟ ಮಾಡಲಾರದೆ, ಗಿಡ ಮರಗಳನ್ನು ಬೆಳೆಸಬೇಕು ಎಂಬ ಸಂದೇಶದ ಮೂಲಕ ಜೂ.1 ರಂದು ಸರಳವಾಗಿ ಹೊಲದ ಬದುವಿನಲ್ಲಿ ದಾನಕೈ ಕುಟುಂಬದವರು ಸೇರಿ ಗಿಡ ಮರಗಳನ್ನು ಹಚ್ಚುವ ಮೂಲಕ ತಮ್ಮ ಹುಟ್ಟುಹಬ್ಬವನ್ನು ಪರಿಸರ ದಿನಾಚರಣೆ ಎಂದು ಭಾವಿಸಿ ಗಿಡ ಮರಗಳನ್ನು ನೆಡುವ ಮೂಲಕ ಆಚರಿಸಿದರು. ಕೇವಲ ಪರಿಸರ ದಿನಾಚರಣೆ ಅಂಗವಾಗಿ ಗಿಡ ಮರಗಳನ್ನು ನೆಡುವ ಬದಲು ತಮ್ಮ ಮನೆಯಲ್ಲಿರುವ ಕುಟುಂಬದವರ ಹುಟ್ಟು ಹಬ್ಬ,ಮದುವೆ ಇನ್ನಿತರ ಯಾವದೇ ಕಾರ್ಯಕ್ರಮವಿರಲಿ ಅಂದು ಎರಡು ಗಿಡಗಳನ್ನಾದರು ನೆಡುವ ಸಂಪ್ರದಾಯವನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡರೆ ಸುಂದರ ಪರಿಸರವಾಗಲು ಸಾದ್ಯ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ಯಲಬುರ್ಗಾ ತಾಲೂಕು ಅದ್ಯಕ್ಷ ಶರಣಬಸಪ್ಪ ದಾನಕೈ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 