ಜಮಖಂಡಿ

ವರ್ಣಸಿಂಧು ಚಿತ್ರಕಲಾ ಪ್ರದರ್ಶನದ ಕಾರ್ಯಕ್ರಮ

ವರ್ಣಸಿಂಧು ಚಿತ್ರಕಲಾ ಪ್ರದರ್ಶನದ ಕಾರ್ಯಕ್ರಮ

ಲೋಕದರ್ಶನ ವರದಿ, 

ಜಮಖಂಡಿ 27: ಕಲಾವಿದರ ಕುಂಚದಿಂದ ಬಿಡಿಸಿದ ಕಲೆಯಲ್ಲಿ ನಿಸರ್ಗದ ಜೊತೆ ವಿವಿಧ ಬಗ್ಗೆಯ ಕಲೆಗಳು ಕಲಾಕೃತಿಯಲ್ಲಿ ಅಡಗಿರುತ್ತವೆ. ಅವರು ಬಿಡಿಸಿದ ಕಲಾಕೃತಿಗಳಿಗೆ ಬಹಳ ಬೇಡಿಕೆಗಳು ದೊರೆಯುತ್ತವೆ ಎಂದು ರಾಯಲ್ ಪ್ಯಾಲೇಸ್ ಶಾಲೆಯ ಆಡಳಿತಾಧಿಕಾರಿ ಬಸವರಾಜ ನ್ಯಾಮಗೌಡ ಹೇಳಿದರು. 

ಮಹೇಶ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ನಡೆದ ವಿಶ್ವಕರ್ಮ ಆರ್ಟ್‌ ಕ್ರಿಯೇಶನ್ಸ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ವರ್ಣಸಿಂಧು  ಚಿತ್ರಕಲಾ ಪ್ರದರ್ಶನದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 

ನಮ್ಮ ತಂದೆ ದಿ.ಸಿದ್ದು ನ್ಯಾಮಗೌಡರು ಸಹ ಒಬ್ಬ ಕಲಾವಿದರು. ಅವರು ಬಿಡಿಸಿರುವ ಕಲಾಕೃತಿಗಳು ಬಿಎಲ್‌ಡಿ ಶಿಕ್ಷಣ ಸಂಸ್ಥೆಯಲ್ಲಿ ಇಡಲಾಗಿದೆ. ಮತ್ತು ನನ್ನ ಧರ್ಮಪತ್ನಿಯು ಕೂಡಾ ಕಲಾವಿದರು. ಅವರು ಸಹ ಮನೆಯಲ್ಲಿ ಚಿತ್ರಕಲೆಯನ್ನು ಬಿಡಿಸುತ್ತಿದ್ದಾರೆ. ರಾಯಲ್ ಪ್ಯಾಲೇಸ್ ಶಾಲೆಯಲ್ಲಿ ಮಕ್ಕಳು ಚಿತ್ರವನ್ನು ಬಿಡಿಸಿದ್ದಾರೆ. ಅವುಗಳನ್ನು ಪೋಟೋ ಪ್ರೇಂ ಹಾಕಿಡಲಾಗಿದೆ. ಶಾಲೆಯಲ್ಲಿ ಮಕ್ಕಳಿಗೆ ಚಿತ್ರಕಲೆಯ ಮಹತ್ವವನ್ನು ತಿಳಿಸಬೇಕಾಗಿದೆ ಎಂದರು. 

ಮಹೇಶ ಚಿತ್ರಕಲಾ ಮಹಾವಿದ್ಯಾಲಯಕ್ಕೆ ಅವಶ್ಯಕತೆಯಾದ ಆರ್ಟ ಗ್ಯಾಲರಿಯ ಬೇಡಿಕೆಗೆ ವ್ಯವಸ್ಥೆಯನ್ನು ಮಾಡುತ್ತೇನೆ. ಬೇರೆ ಜಿಲ್ಲೆಯರು ಅದನ್ನು ನೋಡಲು ಬರುವಂತೆ ಆಕರ್ಷಣೆಯ ಹೊಂದಿದ ಗ್ಯಾಲರಿಯನ್ನು ನಿರ್ಮಿಸುವ ಕೆಲಸ ಮಾಡುತ್ತೇನೆ. ಪ್ರತಿ ವರ್ಷವು ಕೂಡಾ ಚಿತ್ರಕಲೆಯ ಕಲಾಕೃತಿಗಳ ಪ್ರದರ್ಶನ ನಡೆಯಬೇಕು. ಅದಕ್ಕೆ ರಾಯಲ್ ಪ್ಯಾಲೇಸ್ ಶಾಲೆಯಿಂದ ಸಹಾಯ,ಸಹಕಾರ ನೀಡಲಾಗುತ್ತದೆ. ಪ್ರತಿ ವರ್ಷದಲ್ಲಿ ಸಾಕಷ್ಟು ಡಾಕ್ಟರ್‌ಗಳು, ಇಂಜೀನೀಯರಗಳು ತಮ್ಮ ವ್ಯಾಸಂಗ ಮುಗಿಸಿಕೊಂಡು ಹೋರಬರುತ್ತಾರೆ. ಅವರು ಉದ್ಯೋಗದ ಕಡೆಗೆ ಗಮನ ಹರಿಸುತ್ತಾರೆ. ಆದರೆ ಕಲಾವಿದರು ಹಾಗಲ್ಲ. ಅವರು ಬಿಡಿಸಿದ ಕಲೆಗೆ. ಸಾವಿರಾರು ರೂ,ಗಳ ಸಂಪಾದನೆ ಮಾಡುವ ಶಕ್ತಿ ಅವರಲ್ಲಿ ಇರುತ್ತದೆ ಎಂದರು. 

ಬಿಇಒ ಅಶೋಕ ಬಸನ್ನವರ ಮಾತನಾಡಿ, ಎಲ್ಲದಕ್ಕೂ ಭಾಷೆಗಳು ಇರುತ್ತವೆ. ಆದರೆ ಚಿತ್ರಕಲೆಗೆ ಭಾಷೆಯೇ ಇರುವುದಿಲ್ಲ. ಭಾವಣೆ, ಸಂಸ್ಕೃತಿ, ನಿಸರ್ಗಗಳು ಕಲೆಯಲ್ಲಿ ಅಡಗಿರುತ್ತದೆ. ಚಿತ್ರಕಲೆಯಲ್ಲಿ ಸೂಕ್ಷ್ಮವಾದ ಸಂಗತಿಗಳು ಸಹ ಅದರಲ್ಲಿ ಅಡಗಿರುತ್ತವೆ. ಬುದ್ದ, ಮಹಾವೀರ ಅವರ ಶತಮಾನದ ಕಲೆಗಳನ್ನು ನೋಡಬೇಕಾದರೆ. ಅದು ಕಲಾವಿದರು ಬಿಡಿಸಿದ ಕಲೆಯಿಂದ ನೋಡಲು ಸಾಧ್ಯ. ಚಿತ್ರಕಲೆಯಿಂದ ಮನಸಿಗೆ ನೆಮ್ಮದಿ, ಆನಂದ ದೊರೆಯುತ್ತದೆ. ಕಲೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದರು. 

ಇದೇ ಸಂದರ್ಭದಲ್ಲಿ ವಿಶ್ವಕರ್ಮ ಆರ್ಟ್‌ ಕ್ರಿಯೇಶನ್ಸ್‌ ಅಧ್ಯಕ್ಷ ಮಂಜುನಾಥ ಕಂಬಾರ, ಮಹೇಶ ಚಿತ್ರಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಜಿ.ವಿ.ಹಂಪಣ್ಣವರ, ಬಿ,ವಾಯ್,ನಾಯ್ಕರ ಉಪಸ್ಥಿತರಿದರು. ಬಿ,ಜಿ, ಚೌಧರಿ ಪ್ರಾಸ್ತಾವಿಕ ಮಾತನಾಡಿದರು. 


ಸುದ್ದಿ ಓದಿ