ಅಂತಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಕುರಿತು ಪೂರ್ವಭಾವಿ ಸಭೆ
ಮುಂಡರಗಿ 4: ರಾಜ್ಯ ಸರ್ಕಾರ ನಿರ್ದೇನದಂತೆ ಸೆಪ್ಟೆಂಬರ್ 15ರಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಗದಗ ಜಿಲ್ಲೆಯ ಮುಂಡರಗಿ ಭಾಗದಲ್ಲಿ ಬೃಹತ್ ಮಾನವ ಸರಪಳಿಯನ್ನು ನಿರ್ಮಿಸಲು ಪುರಸಭೆ ಆವರಣದಲ್ಲಿರುವ ಗಾಂದೀ ಭವನದಲ್ಲಿ ಬುಧವಾರ ಗದಗ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ಜರುಗಿತು.
ಈ ವೇಳೆ ಗದಗ ಜಿಲ್ಲಾಧಿಕಾರಿ ಗೋವಿಂದರೆಡ್ಡಿಯವರು ಮಾತನಾಡಿ, ಸೆಪ್ಟೆಂಬರ್ 15ರಂದು ರಾಜ್ಯದ ತುಂಬಾ ಏಕಕಾಲದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ಬೀದರ್ನಿಂದ ಚಾಮರಾಜನಗರದವರೆಗೆ ಬೃಹತ್ ಮಾನವ ಸರಪಳಿಯನ್ನು ನಿರ್ಮಿಸಿ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ದಾರಿಯುದ್ದಕ್ಕೂ ಪಸರಿಸುವ ಕೆಲಸವನ್ನು ಸರ್ಕಾರ ಮಾಡಲಿದೆ. ಆಯಾ ತಾಲೂಕುವಾರು ಹಾಗೂ ಗ್ರಾಮ ಪಂಚಾಯತಿವಾರು ಅಧಿಕಾರಿಗಳು ಮಾನವ ಸರಪಳಿಯ ಜವಾಬ್ದಾರಿಯನ್ನು ವಹಿಸಬೇಕು ಎಂದು ಸೂಚಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಆಯಾ ಗ್ರಾಮದ ಶಾಲಾ ಕಾಲೇಜು, ಗ್ರಾ.ಪಂ ಸದಸ್ಯರು ್ಘ ಸಿಬ್ಬಂದಿ, ಆಶಾ ಕಾರ್ಯಕರ್ತರು ಹಾಗೂ ಗ್ರಾಮದ ಎಲ್ಲಾ ಪ್ರಜೆಗಳು ತಾವು ತಮ್ಮ ಗ್ರಾಮದ ಪ್ರಜೆಗಳ ಕೈಹಿಡಿದು ಚೈನ್ಲಿಂಕ್ ಸೃಷ್ಟಿಸುವ ಮೂಲಕ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವ ಪ್ರಜ್ಞೆಯನ್ನು ಮೂಡಿಸಬೇಕು. ಈ ಕಾರ್ಯಕ್ರಮದಲ್ಲಿ ಸುಮಾರು 50ಸಾವಿರ ಜನರು ಪಾಲ್ಗೊಳ್ಳುವ ನೀರೀಕ್ಷೆ ಇದೆ. ಮುಂದಿನ ಪೀಳಿಗೆಯು ಪ್ರಜಾಪ್ರಭುತ್ವದ ಮೌಲ್ಯಾನುಸಾರ ತಿಳಿಯಬೇಕಾದರೆ ಪ್ರಜಾಪ್ರಭುತ್ವದ ಮೌಲ್ಯಗಳ ಕುರಿತು ಅರಿವಿನ ಜಾಗೃತಿ ಅತ್ಯಂತ ಅಗತ್ಯವಾಗಿದೆ. ಹೀಗಾಗಿ ಸೆಪ್ಟೆಂಬರ್ 15ರಂದು ಬೆಳಗ್ಗೆ 8.30ಕ್ಕೆ ಮಾನವ ಸರಪಳಿಯನ್ನು ಆರಂಭಿಸಬೇಕು. ಬೆಳಗ್ಗೆ 9ಕ್ಕೆ ಮಾನವ ಸರಪಳಿಯನ್ನು ಕಟ್ಟಿ ನಂತರ ಸರಿಯಾಗಿ 9.15ಕ್ಕೆ ಸಂವಿಧಾನ ಪೀಠಿಕೆಯನ್ನು ಪಠಣ ಮಾಡಬೇಕು. ನಂತರ ಈ ಕಾರ್ಯಕ್ರಮವನ್ನು ಅಂತ್ಯಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು.
ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ನಿರ್ದೇಶಕ ಮಹೇಶ ಪೋತಗಾರ ಹಾಗೂ ಮುಂಡರಗಿ ತಹಶಿಲ್ದಾರ ಎರಿ್ರಸ್ವಾಮಿ ಪಿ.ಎಸ್ ಮಾತನಾಡಿ, ಬೀದರದಿಂದ ಚಾಮರಾಜನಗರದವರೆಗೆ ಮಾನವ ಸರಪಳಿಯ ಲಿಂಕ್ ಇರುತ್ತದೆ. ಮುಂಡರಗಿ ಭಾಗದಲ್ಲಿ ಮಲ್ಲಿಕಾರ್ಜುನಪುರ ಗ್ರಾಮದಿಂದ ಪ್ರಾರಂಬಿಸಿ ಕೊಪ್ಪಳ ತಾಲೂಕಿನ ಬೆಳಗಟ್ಟಿ ಗ್ರಾಮದವರೆಗೆ ಮುಂಡರಗಿ ಬಾರ್ಡ್ರ್ ಅಂತ್ಯದವರೆಗೆ ಮಾನವ ಸರಪಳಿ ಇರುತ್ತದೆ. ಆದ್ದರಿಂದ ರಾಜ್ಯದಲ್ಲಿ ಮಾನವ ಸರಪಳಿ ಏಕಕಾಲದಲ್ಲಿ ನಿರ್ಮಾಣವಾಗುವ ದೃಷ್ಟಿಯಿಂದ ಸಾರ್ವಜನಿಕರು ಎಲ್ಲರೂ ಸಹಬಾಗಿತ್ವವನ್ನು ವಹಿಸುವ ಮೂಲಕ ಸಂವಿದಾನವನ್ನು ಗೌರವಿಸೋಣ ಎಂದು ಹೇಳಿದರು.
ಶಿರಹಟ್ಟಿ ತಹಶಿಲ್ದಾರ ಅನಿಲ್ ಬಳಿಗಾರ, ಲಕ್ಷ್ಮೇಶ್ವರ ತಹಶಿಲ್ದಾರ ವಾಸುದೇವ ಸ್ವಾಮಿ, ಡಿ.ವೈ.ಎಸ್.ಪಿ ಸುಂಕದ್, ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ ಮಾತನಾಡಿದರು. ಈ ಕಾರ್ಯಕ್ರಮವನ್ನು ಶ್ರೀಕಾಂತ ಅರಹುಣಸಿ ನಿರೂಸಿದರು. ಈ ವೇಳೆ ರೈತ ಸಂಘ, ಕಾರ್ಮಿಕ ಸಂಘ, ದಲಿತ ಸಂಘದವರು ಹಾಗೂ ಇತರರು ಎಲ್ಲರು ಈ ಕಾರ್ಯಕ್ರಮಕ್ಕೆ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ತಾ.ಪಂ ಇಓ ವಿಶ್ವನಾಥ ಹೊಸಮನಿ, ಪುರಸಭೆ ಅಧ್ಯಕ್ಷೆ ನಿರ್ಮಲಾ ಕೊರ್ಲಹಳ್ಳಿ, ಪುರಸಭೆ ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ, ಕೃಷ್ಣಪ್ಪ ಡಂಬಳ, ಯಲ್ಲಪ್ಪಗೌಡ, ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು, ತಾಲೂಕಿನ ಗ್ರಾ.ಪಂ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಪಾಲ್ಗೊಂಡಿದರು.