ಜಮಖಂಡಿ

ವಾರ್ಷಿಕ ಸ್ನೇಹ ಸಮ್ಮೇಳನ ಪಾಲಕರ ಪೂರ್ವಭಾವಿ ಸಭೆ

ವಾರ್ಷಿಕ ಸ್ನೇಹ ಸಮ್ಮೇಳನ  ಪಾಲಕರ ಪೂರ್ವಭಾವಿ ಸಭೆ

ಜಮಖಂಡಿ 04: ಬಸವಜೋತಿ ಆಂಗ್ಲ ಮಾಧ್ಯಮ ಶಾಲೆಯ 5ನೇ ವರ್ಷದ ವಾರ್ಷಿಕ ಸ್ನೇಹ ಸಮ್ಮೇಳನವು ಜ.7ರಂದು  ಸಾಯಂಕಾಲ 4,30 ಗಂಟೆಗೆ ಕಾರ್ಯಕ್ರಮ ಜರುಗಲಿದೆ ಎಂದು ಪ್ರಾಚಾರ್ಯ ಡಾ.ಟಿ.ಪಿ ಗಿರಡ್ಡಿ ಹೇಳಿದರು.  

ಬಸವ ಜೋತಿ ಆಂಗ್ಲ ಮಾಧ್ಯಮ ಶಾಲೆಯ 5 ವರ್ಷದ ವಾರ್ಷಿಕ ಸ್ನೇಹ ಸಮ್ಮೇಳನದ ಪಾಲಕರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. 

 ಅಂದು ಪಾಲಕರು ಸರಿಯಾದ ಸಮಯಕ್ಕೆ ಕನಿಷ್ಠ ಸಾಯಂಕಾಲ 5 ಗಂಟೆ ತಮ್ಮ ಮಕ್ಕಳನ್ನು ಶಾಲೆಗೆ ಕರೆತರಬೇಕು. ಚಿಕ್ಕಮಕ್ಕಳು ಇದ್ದ ಕಾರಣ ವಾರ್ಷಿಕ ಸ್ನೇಹ ಸಮ್ಮೇಳನವನ್ನು ರಾತ್ರಿ 9 ಗಂಟೆಗೆ ಮುಕ್ತಾಯ ಮಾಡಲಾಗುತ್ತದೆ. ಮಕ್ಕಳ ಡ್ಯಾನ್ಸ್‌ ಕಲಿಯಲಿಕೆ ವಿಶೇಷ ತರಬೇತಿ ಮೂಲಕ ತರಬೇತಿಯನ್ನು ನೀಡಲಾಗಿದೆ. ಕಾರ್ಯಕ್ರಮ ಪ್ರಾರಂಭವಾದ ಸಮಯದಲ್ಲಿ ಪಾಲಕರು ಪೋಟೋ, ವಿಡಿಯೋವನ್ನು ಮಾಡಬಾರದು. ತಮ್ಮ ಮಕ್ಕಳ ಪ್ರತಿಯೊಂದು ವಿಡಿಯೋಗಳು ಹಾಗೂ ಪೋಟೋ ನೀಡಲು ಪೋಟೋ ಗ್ರಾಫರ್ ಅವರಿಗೆ ಹೇಳಲಾಗಿದೆ. ಅವರ ಮೋಬೈಲ್ ನಂ, ಪಾಲಕರಿಗೆ ನೀಡಲಾಗುತ್ತದೆ. 2023-24 ರಂದು ಹೈಸ್ಕೂಲ್ ಶಾಲೆಯನ್ನು ಪ್ರಾರಂಭ ಮಾಡಲಿಕ್ಕೆ ಸರಕಾರ ಆದೇಶವನ್ನು ನೀಡಿದ್ದಾರೆ. ಬರುವ ದಿನಗಳಲ್ಲಿ ಎಸ್,ಎಸ್,ಎಲ್,ಸಿ ಕ್ಲಾಸ್‌ಗಳು ಸಹ ಪ್ರಾರಂಭವಾಗುತ್ತವೆ ಎಂದರು. 

ಸಂಸ್ಥೆಯ ಅಧ್ಯಕ್ಷ ಬಸವರಾಜ ಕಡ್ಡಿ ಮಾತನಾಡಿ. ನಮ್ಮ ಶಾಲೆಯಲ್ಲಿ ಮಕ್ಕಳಿಗೆ ಬೇಕಾಗುವಷ್ಟು ಅಭ್ಯಾಸವನ್ನು ಚನ್ನಾಗಿ ನೀಡಲಾಗುತ್ತಿದೆ. ಮಕ್ಕಳಿಗೆ ಹೊರೆಯಾಗದ ಹಾಗೆ ಮನೆಯಲ್ಲಿನ ಅಭ್ಯಾಸವನ್ನು ನೀಡಲಾಗುತ್ತಿದೆ. ಒಂದು ಕ್ಲಾಸನಲ್ಲಿ 25 ಮಕ್ಕಳು ಇರುತ್ತಾರೆ. ಅವರ ವಿದ್ಯಾಭ್ಯಾಸದ ಕಡೆಗೆ ಶಿಕ್ಷಕರು ಹೆಚ್ಚು ಗಮನವನ್ನು ಹರಿಸುತ್ತಿದ್ದಾರೆ. ಆದರೂ ಸಹ ಚಿಕ್ಕಮಕ್ಕಳನ್ನು ಸಂಬಾಳಿಸುವುದು ಸ್ವಲ್ಪ ಕಷ್ಟವಾಗುತ್ತದೆ. ಕೇವಲ ಶಿಕ್ಷಕರ ಮೇಲೆ ಜವಾಬ್ದಾರಿಯನ್ನು ಹಾಕದೆ ಮನೆಯಲ್ಲಿ ಪಾಲಕರ ಜವಾಬ್ದಾರಿಯು ಬಹಳ ಇರುತ್ತದೆ. ಶಾಲೆಗೆ ಬರುವ ಎಲ್ಲ ಮಕ್ಕಳು ದೇವರ ಸಮಾನವಾಗಿ ಶಿಕ್ಷಕರ ವೃಂದ  ನೋಡಿಕೊಳ್ಳುತ್ತಾರೆ. ಪಾಲಕರು ಸಣ್ಣಪುಟ್ಟ ವಿಷಯಗಳನ್ನು ದೊಡ್ಡದು ಮಾಡದೆ. ಮಕ್ಕಳ ಶಿಕ್ಷಣದ ಕಡೆಗೆ ಗಮನಹರಿಸಬೇಕು. ಪಾಲಕರ ಸಲಹೆ ಸೂಚನೆ ಮೇರೆಗೆ ಮಕ್ಕಳನ್ನು ತಿದ್ದುವ ಕೆಲಸ ಶಿಕ್ಷಕರ ಕೆಲಸವಾಗಿತ್ತದೆ. ಮಕ್ಕಳ ಶಿಕ್ಷಣದ ಬಗ್ಗೆ ವಿದ್ಯಾಭ್ಯಾಸದ ಕಡೆ ಗಮನಹರಿಸುತ್ತೇವೆ. ಬರುವ ದಿನಗಳಲ್ಲಿ  ಕ್ರೀಡೆ, ಆಟ, ಭರತ ನಾಟ್ಯ, ಕರಾಟೆ ಕಲಿಸುವ ಕ್ಲಾಸ್‌ಗಳನ್ನು ಪ್ರಾರಂಭಿಸುವ ಪ್ರಯತ್ನ ಮಾಡುತ್ತಿದೆವೆ ಎಂದರು. 

ಶಾಲಾ ಮಕ್ಕಳ ಪಾಲಕರು ತಮ್ಮ ಸಲಹೆ, ಸೂಚನೆ, ಅನಿಸಿಕೆ, ಅಭಿಪ್ರಾಯವನ್ನು ವ್ಯಕ್ತ ಪಡಿಸಿದರು. ಇದೇ ಸಂದರ್ಭದಲ್ಲಿ ಶಾಲಾ ಆಡಳಿತ ಅಧಿಕಾರಿ ಗೀರೀಶ ಕಡ್ಡಿ ಉಪಸ್ಥಿತರಿದರು.   ಜಮಖಂಡಿ ನಗರದ ಬಸವ ಜೋತಿ ಆಂಗ್ಲ ಮಾಧ್ಯಮ ಶಾಲೆಯ 5 ವರ್ಷದ ವಾರ್ಷಿಕ ಸ್ನೇಹ ಸವೆ್ಮುಳನದ ಪಾಲಕರ ಪೂರ್ವಭಾವಿ ಸಭೆಯಲ್ಲಿ ಸಂಸ್ಥೆಯ ಅಧ್ಯಕ್ಷ ಬಸವರಾಜ ಕಡ್ಡಿ ಮಾತನಾಡುತ್ತಿರುವುದು, 


ಸುದ್ದಿ ಓದಿ