ಶಾಂತಿಯುತವಾಗಿ ನಡೆದ ಎನ್ಎಮ್ಮ್ಎಸ್ ಪರೀಕ್ಷೆ
ಮುಧೋಳ;ಪ್ರತಿ ವರ್ಷ 8ನೇ ತರಗತಿಯ ವಿದ್ಯಾರ್ಥಿಗಳೀಗೆ ಶಿಷ್ಯವೇತನಕ್ಕಾಗಿ ನಡೆಯುವ ಎನ್ಎಮ್ಮ್ಎಸ್ ಪರೀಕ್ಷೆಯು ಒಟ್ಟು ಆರು ಪರೀಕ್ಷಾ ಕೇಂದ್ರದಲ್ಲಿ ಭಾನುವಾರ ಶಾಂತಿಯುವಾಗಿ ನಡೆದವು
ಈ ಪರೀಕ್ಷೆಗೆ 1757 ವಿದ್ಯಾರ್ಥಿಗಳಲ್ಲಿ 1699 ವಿದ್ಯಾರ್ಥಿಗಳು ಹಾಜರಾಗಿದ್ದರು.58 ವಿದ್ಯಾರ್ಥಿಗಳು ಗೈರು ಆಗಿದ್ದರು.ಕ್ಷೇತ್ರ ಶಿಕ್ಷಣಾಧಿಕಾರಿ ಸಮೀರ ಮುಲ್ಲಾ ನೇತೃತ್ವದ ತಂಡ ಎಲ್ಲ ಪರೀಕ್ಷಾ ಕೇಂದ್ರಕ್ಕೆ ಬೇಟಿ ನೀಡಿ ಸುದ್ದಿಗಾರರ ಜೊತೆಗೆ ಮಾತನಾಡಿ ಕಳೆದ ಬಾರಿ ಕರೋನಾ ಕಾರಣದಿಂದ ಸಾಕಷ್ಟು ಜನ ಗೈರು ಉಳಿದಿದ್ದರು ಆದರೆ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು ಸಂತಸ ತಂದಿದೆ ಎಲ್ಲ ಕೇಂದ್ರದಲ್ಲಿ ಸೂಕ್ತ ಭದ್ರತೆಯಿಂದ ಕೂಡಿದ್ದು ಪೋಲಿಸರು ವ್ಯವಸ್ಥಿತವಾಗಿ ಸಹಕಾರ ನೀಡಿದ್ದಾರೆ ಎಂದು ಹೇಳಿದರು
ನಗರದ ಆರ್.ಎಂ.ಜಿ ಕಾಲೇಜು ಕೇಂದ್ರದಲ್ಲಿ 400 ವಿದ್ಯಾರ್ಥಿಗಳಲ್ಲಿ 393 ವಿದ್ಯಾರ್ಥಿಗಳು ಹಾಜರಾಗಿದ್ದು ಏಳು ವಿದ್ಯಾರ್ಥಿಗಳು ಗೈರಾಗಿದ್ದರು.ಸಾಯಿನಿಕೇತನ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ 300 ವಿದ್ಯಾರ್ಥಿಗಳಲ್ಲಿ 291 ವಿದ್ಯಾರ್ಥಿಗಳು ಹಾಜರಿದ್ದು 9 ವಿದ್ಯಾರ್ಥಿಗಳು ಗೈರಾಗಿದ್ದರು.ಬಿಲ್ ಮೆಮೋರಿಲ್ ಇಂಗೀಷ್ ಮಿಡಿಯಮ್ ಸ್ಕೂಲ್ ದಲ್ಲಿ 300 ವಿದ್ಯಾರ್ಥಿಗಳಲ್ಲಿ 284 ವಿದ್ಯಾರ್ಥಿಗಳು ಹಾಜರಾಗಿದ್ದು 16 ವಿದ್ಯಾರ್ಥಿಗಳು ಗೈರಾಗಿದ್ದರು.ಶ್ರೀ ಸಂಗಮನಾಥ ಕನ್ನಡ ಮಾಧ್ಯಮ ಶಾಲೆಯಲ್ಲಿ 300 ವಿದ್ಯಾರ್ಥಿಗಳಲ್ಲಿ 293 ವಿದ್ಯಾರ್ಥಿಗಳು ಹಾಜರಾಗಿದ್ದು 7 ವಿದ್ಯಾರ್ಥಿಗಳು ಗೈರಾಗಿದ್ದರು.ನೂತನ ಮಾಧ್ಯಮಿಕ ಶಾಲೆಯಲ್ಲಿ 220ವಿದ್ಯಾರ್ಥಿಗಳಲ್ಲಿ 121 ವಿದ್ಯಾರ್ಥಿಗಳು ಹಾಜರಾಗಿದ್ದು 8 ವಿದ್ಯಾರ್ಥಿಗಳು ಗೈರಾಗಿದ್ದರು ಕೆ.ಆರ್.ಲಕ್ಕಂ ಶಾಲೆಯಲ್ಲಿ 137 ವಿದ್ಯಾರ್ಥಿಗಳಲ್ಲಿ 226 ವಿದ್ಯಾರ್ಥಿಗಳು 11 ವಿದ್ಯಾರ್ಥಿಗಳು ಗೈರಾಗಿದ್ದರು.ಒಟ್ಟಾರೆಯಾಗಿ ಆರು ಪರೀಕ್ಷಾ ಕೇಂದ್ರದಿಂದ 1757 ವಿದ್ಯಾರ್ಥಿಗಳಲ್ಲಿ 1699 ವಿದ್ಯಾರ್ಥಿಗಳು ಹಾಜರಾಗಿದ್ದರು.58 ವಿದ್ಯಾರ್ಥಿಗಳು ಗೈರು ಆಗಿದ್ದರು. ಒಟ್ಟು ಶೇ 96.69 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಮೀರ ಮುಲ್ಲಾ ತಿಳಿಸಿದ್ದಾರೆ.
ಸಂಗಮನಾಥ ಕನ್ನಡ ಮಾಧ್ಯಮ ಶಾಲಾ ಕೇಂದ್ರಕ್ಕೆ ಬೇಟಿ ನೀಡಿದ ಬಿಇಓ ಸಮೀರ ಮುಲ್ಲಾ ನೇತೃತ್ವದ ತಂಡ,ಪರೀಕ್ಷಾ ಮುಖ್ಯ ಮೇಲ್ವಿಚಾರಕ ಅಡಿವೆಪ್ಪ ಛಬ್ಬಿ ಎಸ್.ಎಸ್.ನಂದಿ ವೆಂಕಟೇಶ ಗುಡೆಪ್ಪನವರ ಸೇರಿದಂತೆ ಇತರರು ಇದ್ದರು