ಧಾರ್ಮಿಕ ಕಾರ್ಯಗಳಿಂದ ಶಾಂತಿ, ನೆಮ್ಮದಿ ಜೀವನ : ಗುರಪ್ಪ
ಕುಕನೂರು 17: ಗ್ರಾಮೀಣ ಪ್ರದೇಶಗಳಲ್ಲಿ ಜಾತ್ರೆ, ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವದರಿಂದ ಮಾನಸಿಕ ಒತ್ತಡ ಕಡಿಮೆಯಾಗುವುದರ ಜೊತೆಗೆ ಶಾಂತಿ, ನೆಮ್ಮದಿ ಸಿಗುತ್ತದೆ ಎಂದು ಗ್ರಾಪಂ ಸದಸ್ಯ ಗುರ್ಪ ಪಂತರ ಹೇಳಿದರು.
ತಾಲೂಕಿನ ಬಿನ್ನಾಳ ಗ್ರಾಮದಲ್ಲಿ ಗುರುವಾರ ಭರತ ಹುಣ್ಣಿಮೆ ಪ್ರಯುಕ್ತ ಭಕ್ತರು ಹಮ್ಮಿಕೊಂಡ ಶ್ರೀಮೈಲಾರಲಿಂಗೇಶ್ವರ ಜಾತ್ರಾಮಹೋತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಶ್ರೀಮೈಲಾರಲಿಂಗೇಶ್ವರ ಜಗತ್ತಿಗೆ ಅಂಟಿಕೊಂಡ ಮಹಾಮಾರಿ ಕೊರಾನವನ್ನು ನಿರ್ಮೂಲನೆ ಮಾಡಲಿ, ಪ್ರತಿಯೊಬ್ಬರ ಬಾಳಲ್ಲಿ ಸುಖ ಶಾಂತಿ ನೆಮ್ಮದಿ ಕರುಣಸಲಿ ಎಂದು ಪ್ರಾರ್ಥಿಸುತ್ತೇನೆ, ಇಡೀ ಲೋಕಕ್ಕೆ ಒಳ್ಳೆಯದಾಗಲಿ, ಗ್ರಾಮದ ಭಕ್ತರು ಒಗ್ಗಟ್ಟಾಗಿ ಜಾತ್ರೆ ಯಶಸ್ವಿಯಾಗಿ ಮುನ್ನಡೆಸುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ. ಧಾಮಿಖ ಕಾರ್ಯಗಳಿಂದ ಪ್ರತಿಯೊಬ್ಬರಿಗೂ ಪುಣ್ಯಪ್ರಾಪ್ತಿಯಾಗುತ್ತದೆ ಎಂದರು.
ಪತ್ರಕರ್ತ ಮಲ್ಲು ಮಾಟರಂಗಿ ಮಾತನಾಡಿ ಬಿನ್ನಾಳ ಗ್ರಾಮ ಧಾರ್ಮಿಕತೆಗೆ ಹೆಸರುವಾಸಿಯಾಗಿದೆ. ಇಲ್ಲಿನ ಜನತೆ ಸದಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿರುತ್ತಾರೆ. ಸದಾ ಸಮನ್ವಯತೆ, ಸಹಬಾಳ್ವೆಗೆ ಹೆಸರುವಾಸಿಯಾಗಿದೆ. ಗ್ರಾಮದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಮೇಲಿಂದ ಮೇಲೆ ನಡೆಯುವದರಿಂದ ಸುಖ,ಶಾಂತಿ ಪ್ರಾಪ್ತಿಯಾಗುತ್ತದೆ. ಬಿನ್ನಾಳ ಇದೊಂದು ಧಾರ್ಮಿಕ ಕ್ಷೇತ್ರವಾಗಿದೆ. ಶೈಕ್ಷಣಿಕ, ರಾಜಕೀಯ, ಸಾಹಿತ್ಯ ಕ್ಷೇತ್ರದಲ್ಲಿ ಸದಾ ಮುಂಚೂಣಿ ಸ್ಥಾನದಲ್ಲಿದೆ. ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು ಎಂದು ಕರೆ ನೀಡಿದರು.
ಯುವ ಮುಖಂಡ ಶಿವಪುತ್ರ್ಪ ಕಂಬಳಿ ಮಾತನಾಡಿ ಭಕ್ತಿ ಎಂಬುದು ಮನುಷ್ಯನಲ್ಲಿ ಇದ್ದರೇ ಸಾಕು. ನಿತ್ಯ ಒಳ್ಳೆಯ ಮನಸ್ಸಿನಿಂದ ಪೂಜಿಸಿದರೇ, ದೇವರೊ ಒಲಿಯುತ್ತಾನೆ. ನಾವು ಒಳ್ಳೆಯತನ ರೂಡಿಸಿಕೊಂಡರೇ ಇತರರಿಗೂ ನಮ್ಮಿಂದ ಒಳ್ಳೆಯತನ ರವನೆಯಾದರೇ ಉತ್ತಮ ಸಮಾಜ ನಿರ್ಮಿಸಲು ಸಾಧ್ಯ, ಜಾತ್ರಾ ಮಹೋತ್ಸವಗಳು ಎಲ್ಲ ಸಮುದಾಯದವರನ್ನು ಒಗ್ಗೂಡಿಸುವ ಸಾಮರಸ್ಯದ ಸಂಕೇತಗಳಾಗಿವೆ. ಪ್ರತಿಯೊಬ್ಬರು ಧರ್ಮದ ಹಾದಿಯಲ್ಲಿ ಮುನ್ನಡೆಯಬೇಕಿದೆ ಎಂದರು.
ಧಾರ್ಮಿಕ ಕಾರ್ಯಕ್ರಮ:ಶ್ರೀಮೈಲಾರಲಿಂಗೇಶ್ವರನಿಗೆ ಅಭಿಷೇಕ, ದೋಣಿ ತುಂಬಿಸುವುದು, ಗೊರವಪ್ಪನವರ ಕುಣಿತ, ಅನ್ನಸಂರ್ತಪಣೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಈ ಸಂದರ್ಭದಲ್ಲಿ ತಾಪಂ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ, ಗ್ರಾಪಂ ಸದಸ್ಯರಾದ ಸಂಗಪ್ಪ ತಹಸೀಲ್ದಾರ, ಮಮ್ಮುಸಾಬ ವಾಲಿಕಾರ, ಲಕ್ಷ್ಮಣ್ಣ ಚಲವಾದಿ, ವೀರ್ಪ ಮುತ್ತಾಳ, ಕಮಲಾಕ್ಷಿ ಕಂಬಳಿ, ಮುಖಂಡರಾದ ಸಂಗಪ್ಪ ಮನ್ನಾಪೂರ, ಸಿದ್ದಲಿಂಗಪ್ಪ ನಾಯ್ಕರ, ಬಸವರಾಜ ಬನ್ನಿಕೊಪ್ಪ. ರಾಮಣ್ಣ ನಾಯ್ಕರ, ನೀಲಪ್ಪ ಹಳ್ಳಿಗುಡಿ, ವೀರಣ್ಣ ಬಡಿಗೇರ, ಗ್ಯಾನಪ್ಪ ಬಡಿಗೇರ, ಬಸವಂತಪ್ಪ ಮನ್ನಾಪೂರ, ಜುಂಜಪ್ಪ ನಾಯ್ಕರ, ಸಂತೋಷ ಮೆಣಸಿನಕಾಯಿ, ಮಾಲತೇಶ ಮನ್ನಾಪೂರ, ಕೊಟೇಶ ಮೆಣಸಿನಕಾಯಿ, ಬಸವರಾಜ ಭಜೆಂತ್ರಿ ಸೇರಿದಂತೆ ಗ್ರಾಮದ ಗುರು-ಹಿರಿಯರು ಮುಖಂಡರು ಇತರರು ಇದ್ದರು.