ಭೀಮಾ ನದಿಗೆ ನೀರು ಹರಿಸಲು ಬಿಡಿ ಪಾಟೀಲ ಆಗ್ರಹ
Patil demands permission to release water into Bhima river
ಲೋಕದರ್ಶನ ವರದಿ
ಇಂಡಿ 01 : ತಾಲ್ಲೂಕಿನ ಅಗರಖೇಡ,ಭ್ಯೂಯಾರ ನಾಗರಹಳ್ಳಿ ಖ್ಯಾಡಗಿ ರೋಡಗಿ ಮುಂತಾದ ಗ್ರಾಮಗಳಿಗೆ ಜನರಿಗೆ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಸಲುವಾಗಿ ಕೃಷ್ಣ ಕಾಲುವೆಯಿಂದ ಅಥವಾ ಉಜನಿಡ್ಯಾಮ್ ನಿಂದ ನೀರು ಬಿಡುಗಡೆ ಮಾಡಬೇಕೆಂದು ನೂರಾರು ರೈತರಿಂದ ಇಂಡಿ ತಹಶೀಲ್ದಾರ್ ರವರಿಗೆ ಮನವಿ ಸಲ್ಲಿಸಲಾಯಿತು.ಇದೆ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಬಿ ಡಿ ಪಾಟೀಲರು ಹಾಗೂ ರೈತ ಮುಖಂಡರಾದ ಕೃಷ್ಣ ಜಾಗೀರದಾರ, ಮಾತನಾಡುತ್ತಾ ಮಹಾರಾಷ್ಟ್ರ ಸರಕಾರ ಕುಡಿಯುವ ನೀರಿಗಾಗಿ ಸೋಲಾಪುರ ಮತ್ತು ಅಕ್ಕಲಕೋಟ್ ಜನರ ಕುಡಿಯುವ ನೀರಿಗಾಗಿ ಉಜಿನಿ ಜಲಾಶಯ ದಿಂದ ನೀರು ಬಿಡುಗಡೆ ಮಾಡಿದೆ.
ಆದರೆ ಇಂಡಿ ತಾಲೂಕಿನ ಭೀಮಾನದಿ ದಡದಲ್ಲಿ ಬರುವ ಅಗರಖೇಡ, ಭ್ಯೂಯಾರ, ನಾಗರಹಳ್ಳಿ, ಖೇಡಗಿ,ರೋಡಗಿ ,ಮುಂತಾದ ಗ್ರಾಮಗಳಿಗೆ ನೀರಿನ ಹಾಹಾಕಾರ ಉಂಟಾಗಿ ಬೆಳೆಗಳು ಬತ್ತಿ ಹೋಗಿ ಜನಕ್ಕೆ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಹಾಹಾಕಾರ ಉಂಟಾಗಿದೆ ಜನಜಾನವಾರಗಳು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ .ಹಿಂತಾ ಕಠಿಣ ಪರಿಸ್ಥಿತಿಯಲ್ಲಿ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆ , ಉಜನಿ ಜಲಾಶಯದಿಂದ ಅಥವಾ ಕೃಷ್ಣ ಕಾಲುವೆಯಿಂದ ನೀರು ಬಿಡುಗಡೆ ಮಾಡಬೇಕು ಕೇವಲ ಸುಳ್ಳು ಭರವಸೆಗಳನ್ನು ನೀಡಿದೆ ಭೀಮಾ ತೀರದ ವಾಸ್ತವ ಪರಿಸ್ಥಿತಿಯನ್ನು ಗಮನಿಸಿ ಇಂಡಿ ತಾಲೂಕಿನ ರೈತರ ಸಂಕಷ್ಟಕ್ಕೆ ಪರಿಹಾರ ನೀಡಬೇಕು ಎಂದು ಇಂಡಿ ತಹಸಿಲ್ದಾರ್ ಇವರಿಗೆ ನೂರಾರು ರೈತರ ಮುಖಾಂತರ ಮನವಿ ಸಲ್ಲಿಸಲಾಯಿತು
ಇದೆ ಸಂದರ್ಭದಲ್ಲಿ ತಹಶೀಲ್ದಾರ್ ಹಾಗೂ ಉಪವಿಭಾಗ ಅಧಿಕಾರಿಗಳು ಮಾತನಾಡಿ ಜಿಲ್ಲಾಧಿಕಾರಿಗಳು ಹಾಗೂ ಕೆಬಿ ಜನಲ್ ಅಧಿಕಾರಿಗಳ ಜೊತೆ ಚರ್ಚಿಸಿ ನೀರು ಬಿಡಿಸುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿರೈತ ಮುಖಂಡರಾದ ಗಂಗಾಧರ ತಳವಾರ,ಪ್ರಭು.ಗೋಳಸಾರ, ಶ್ರೀನಾಥ್. ಹೊಸಮನಿ, ಶಿವಯೋಗಿ ಪೂಜಾರಿ, ಹಣಮಂತ ತಳವಾರ, ಶಶಿಧರ ಮಠ, ಚಿದಾನಂದ ಆಳೂರ,ಗುರು ಅಜಗೋಂಡ,ಬಾಬು ಚಿಕ್ಕಮಣ್ಣೂರ, ಸಂಗಮೇಶ ಚಿಕ್ಕಮಣೂರ, ಮುಂತಾದವರು ಉಪಸ್ಥಿತರಿದ್ದರು
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 