ಗದಗ 13: ಸಮಾಜದಲ್ಲಿನ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲಿಸ ಇಲಾಖೆ ಮಹತ್ವದ ಕಾರ್ಯ ನಿರ್ವಹಿಸುತ್ತಿದೆ. ಇಂತಹ ಒತ್ತಡದ ಕಾರ್ಯನಿರ್ವಹಣೆಯಲಿ ಮಾನಸಿಕ ನೆಮ್ಮದಿಗಾಗಿ ಪ್ರತಿಯೊಬ್ಬರು ಕ್ರೀಡೆಗಳಲ್ಲಿ ಭಾಗವಹಿಸಬೇಕು ಎಂದು ಗದಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ನುಡಿದರು.
ಗದಗ-ಬೆಟಗೇರಿ ನಗರದ ಕೆ.ಎಚ್.ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗಿದ ಗದಗ ಜಿಲ್ಲಾ ಪೋಲಿಸ ವಾಷರ್ಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜಿಲ್ಲಾ ಪೊಲೀಸ ಇಲಾಖೆಯು ನೆರೆ, ಚುನಾವಣೆಯಂತಹ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಜಿಲ್ಲಾಡಳಿತದೊಂದಿಗೆ ಸಹಕರಿಸಿ ಯಶಸ್ವಿಯಾಗಿದೆ. ಗದಗ ಜಿಲ್ಲಾ ಪೊಲೋಸ ಇಲಾಖೆಯ ಕಾರ್ಯವೈಖರಿಯು ಜನಮೆಚ್ಚುಗೆ ಜೊತೆಗೆ ಸರಕಾರದ ಮಟ್ಟದಲ್ಲೂ ಪ್ರಶಂಸಗೆ ಪಾತ್ರವಾಗಿರುವದು ಸಂತಸದ ವಿಷಯ. ಪೊಲೀಸ ಅಧಿಕಾರಿ, ಸಿಬ್ಬಂದಿಗಳ ಮಾನಸಿಕ ಹಾಗೂ ಆರೋಗ್ಯ ಕಾಪಾಡಿಕೊಳ್ಳಬೇಕು. ಕ್ರೀಡಾಕೂಟಗಳಲ್ಲಿ ಭಾಗವಹಿಸಿಸುವ ಸ್ಪಧರ್ಾಳುಗಳು ಕ್ರೀಡಾ ಸ್ಪೂತರ್ಿಯೊಂದಿಗೆ ಭಾಗವಹಿಸಿ ಜಿಲ್ಲಾ ಪೊಲೀಸ ಕ್ರೀಡಾಕೂಟವನ್ನು ಯಶಸ್ವಿಗೊಳಿಸಲು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಕರೇ ನೀಡಿದರು.
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಶ್ರೀನಾಥ ಜೋಶಿ ಮಾತನಾಡಿ ಪೋಲಿಸ ಇಲಾಖೆಯು ಮಹಿಳೆಯರ ಸುರಕ್ಷತೆಗಾಗಿ ರಾತ್ರಿ ವೇಳೆ ವಾಹನದ ವ್ಯವಸ್ಥೆ ಮಾಡಿರುವದು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ ಎಂದರು. ಜಿಲ್ಲೆಯ ನೆರೆ ಸಂದರ್ಭದಲ್ಲಿ ಇಲಾಖೆಯ ಸಿಬ್ಬಂದಿಗಳು ಅವಿರತವಾಗಿ ಶ್ರಮಿಸಿ ನೆರೆ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೂರು ದಿನಗಳ ಜಿಲ್ಲಾ ಪೊಲೀಸ ಕ್ರೀಡಾಕೂಟದಲ್ಲಿ ಪ್ರತಿಯೊಬ್ಬರು ಸಂತೋಷದಿಂದ ಭಾಗವಹಿಸಲು ಜಿಲ್ಲಾ ಪೋಲಿಸ ವರಿಷ್ಠಾಧಿಕಾರಿ ಶ್ರೀನಾಥ ಜೋಶಿ ತಿಳಿಸಿದರು.
ಗದಗ, ಡಿ.ಸಿಆರ್.ಬಿ. ಡಿ.ಎ.ಆರ್.ಪೋಲಿಸ್ ಉಪ ಅಧೀಕ್ಷಕರುಗಳಾದ ಎಸ್.ಕೆ.ಪ್ರಹ್ಲಾದ, ವಾಯ್.ಎಸ್. ಈಗನಗೌಡರ, ವಿದ್ಯಾನಂದ ನಾಯ್ಕ, ಪೋಲಿಸ ವರಿಷ್ಠಾಧಿಕಾರಿಗಳ ಕಚೇರಿಯ ಸಹಾಯಕ ಆಡಳಿತಾಧಿಕಾರಿ ಎನ್.ಎ.ಹಿಪ್ಪರಗಿ, ಪೋಲಿಸ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು. ನರಗುಂದ ಪೋಲಿಸ ಉಪ ಅಧೀಕ್ಷಕ ಶಿವಾನಂದ ಕಟಗಿ ವಂದಿಸಿದರು. ಎಂ.ಟಿ.ಭಟ್ ಕಾರ್ಯಕ್ರಮ ನಿರೂಪಿಸಿದರು.
ಇದಕ್ಕೂ ಮುನ್ನ ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಗದಗ ಶಹರ, ಬೆಟಗೇರಿ ವೃತ್ತ, ಗದಗ ಗ್ರಾಮೀಣ ವೃತ್ತ, ರೋಣ, ನರಗುಂದ ಜಿಲ್ಲಾ ವಿಶೇಷ ಘಟಕ ಹಾಗೂ ಶಿರಹಟ್ಟಿ ವೃತ್ತದ ತಂಡಗಳು ಕ್ರೀಡಾಕೂಟದ ಪ್ರತಿಜ್ಞಾವಿಧಿ ಸ್ವೀಕರಿಸಿ ಆಕರ್ಷಕ ಪಥ ಸಂಚಲನ ಮಾಡಿದವು.