ಕ್ರೀಡೆ, ಸಾಂಸಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ: ಡಾ. ಕುಂಬಾರ
Participate in sports, cultural activities: Dr. Kumbara
ರಾಯಬಾಗ: ವಿದ್ಯಾರ್ಥಿಗಳು ಪಾಠದ ಜೊತೆಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ತಾವು ಕಲಿತ ಶಾಲೆಗೆ ಕೀರ್ತಿಯನ್ನು ತರಬೇಕೆಂದು ಡಾ.ಎಮ್.ಬಿ.ಕುಂಬಾರ ಹೇಳಿದರು. ಬುಧವಾರ ರಾಯಬಾಗ ಗ್ರಾಮೀಣ ಭಾಗದ ರಾಹುಲ ಕನ್ನಡ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸಾಧನೆ ಮಾಡಿದ ವಿದ್ಯಾರ್ಥಿಗಳ ಸತ್ಕಾರ ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನು ಸತ್ಕರಿಸಿ ಮಾತನಾಡಿದರು. ಚೆಸ್ ಕ್ರೀಡೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಅಮರ ಕೊಚೇರಿ, ಟೈಕ್ವಾಂಡೋ ಕ್ರೀಡೆಯಲ್ಲಿ ರಾಜ್ಯಮಟ್ಟದಲ್ಲಿ ಕಂಚಿನ ಪದಕ ಪಡೆದ ಶೋಯಬ ಗುಲಂದಾಸ, ಟೈಕ್ವಾಂಡೋ ಕ್ರೀಡೆಯಲ್ಲಿ 6 ಬಾರಿ ರಾಜ್ಯಮಟ್ಟದಲ್ಲಿ ಚಿನ್ನದ ಪದಕ ಪಡೆದ ಮುಸ್ತಕೀಮ ಮುಲ್ಲಾ, ಫುಟ್ಬಲ್ ಕ್ರೀಡೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ತನ್ನವೀರ ಮೊಮಿನ, ಆಸಿಫ್ ತಾಂಬೊಳೆ ಮತ್ತು 2024-25ರ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 621 ಅಂಕ ಪಡೆದ ಆಲಿಯಾ ಚಿಂಚಲಿಕರ ಅವರನ್ನು ಸತ್ಕರಿಸಲಾಯಿತು.
ಡಾ.ಹಾಜಿ ಐ.ಐ.ಮುಲ್ಲಾ, ಡಾ.ಮುಜಾಯಿದ ಖಾನ, ಅಶೋಕ ಲೋಹಾರ, ಕಮಲಾಕ್ಷೀ ಹಿರೇಮಠ ವೈ.ಎಸ್.ಬಂತೆ, ಯುನುಸ ಮುಲ್ಲಾ, ಮೌಲಾನಾ ರೋಫ್, ಎಮ್.ಎಮ್.ಚಿಂಚಲಿಕರ, ಕಪಿಲ ಚಿಂಚಲಿ, ಪ್ರಧಾನ ಗುರುಮಾತೆ ಎನ್.ಪಿ.ನದಾಫ, ದೀಪಕ ಸಾನೆ ಹಾಗೂ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಇದ್ದರು. ಶಿಕ್ಷಕ ಐ.ಐ.ಮುಲ್ಲಾ ಸ್ವಾಗತಿಸಿದರು, ಎಸ್.ಆರ್.ಬಂತೆ ನಿರೂಪಿಸಿದರು, ಪ್ರೀಯಾ ಕಾಂಬಳೆ ವಂದಿಸಿದರು.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 