ಮೇ10ಕ್ಕೆ ಪಂಚಪೀಠಾಧೀಶ್ವರರ ಅಡ್ಡಪಲ್ಲಕ್ಕಿ ಮಹೋತ್ಸವ : ಎಸ್‌.ವಿ.ಸಂಕನೂರ

ಮೇ10ಕ್ಕೆ ಪಂಚಪೀಠಾಧೀಶ್ವರರ ಅಡ್ಡಪಲ್ಲಕ್ಕಿ ಮಹೋತ್ಸವ : ಎಸ್‌.ವಿ.ಸಂಕನೂರ Panchapeethadhieswarar's Addapallakhi Mahotsava on May 10: S.V. Sankanura

ಲೋಕದರ್ಶನ ವರದಿ 

ಗದಗ 31: ಜಿಲ್ಲೆಯ ಗಜೇಂದ್ರಗಡ ತಾಲೂಕು ಸೂಡಿ ಗ್ರಾಮದಲ್ಲಿ ​‍​‍್ರಥಮ ಬಾರಿಗೆ ಪಂಚಪೀಠಾಧೀಶ್ವರರ ಅಡ್ಡಪಲ್ಲಕ್ಕಿ ಮಹೋತ್ಸವ, 50ನೇ ವರ್ಷದ ರಥೋತ್ಸವದ ನಿಮಿತ್ತ ನೂತನ ರಥ ಲೋಕಾರೆ​‍್ಣ ಹಾಗೂ ಧರ್ಮ ಸಮಾರಂಭವನ್ನು ಮೇ 6 ರಿಂದ 10 ರವರೆಗೆ ಬೃಹತ್ ಪ್ರಮಾಣದಲ್ಲಿ ಶ್ರೀಸೂಡಿ ಜುಕ್ತಿಹಿರೇಮಠ ಆಯೋಜಿಸುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯರಾದ ಎಸ್‌.ವಿ. ಸಂಕನೂರ ಹೇಳಿದರು. ನಗರದ ಎಪಿಎಂಸಿ ಬಳಿಯ ಶರಣಬಸವ (ರಾಜು) ಗುಡಿಮನಿ ಅವರ ಕಚೇರಿಯಲ್ಲಿ ನಡೆದ ಭಕ್ತರ ಪೂರ್ವಭಾವಿ ಸಿದ್ಧತೆ ಸಭೆಯಲ್ಲಿ ಅವರು ಮಾತನಾಡಿದರು. 

ವೀರಶೈವ ಧರ್ಮ ಪರಂಪರೆಯ ಮೂಲ ಆಚಾರ್ಯರೇ ಪಂಚಪೀಠದ ಪರಮಾಚಾರ್ಯರು. ಕಾಶೀ ಪೀಠದ ಶಾಖಾ ಮಠವೇ ಸೂಡಿಯ ಶ್ರೀಜುಕ್ತಿಹಿರೇಮಠ. ಪ್ರಸ್ತುತ ಮಠಾಧ್ಯಕ್ಷರಾದ ಡಾ.ಕೊಟ್ಟೂರ ಬಸವೇಶ್ವರ ಶಿವಾಚಾರ್ಯರು 14ನೇಯವರು. ಇವರ ಅವಧಿಯಲ್ಲಿ ಅಂದರೆ, 2017ರಲ್ಲಿ ನೂತನ ಮಠ ಲೋಕಾರೆ​‍್ಣಗೊಂಡಿದೆ. ಈಗ ನೂತನ ರಥ ಲೋಕಾರೆ​‍್ಣಯ ಕಾರ್ಯ ನಡೆಯುತ್ತಿರುವುದು ಸಂತಸದ ಸಂಗತಿ. ಘಟದಿಂದ ಮಠ ಎಂಬುದಕ್ಕೆ ನಮ್ಮ ಜುಕ್ತಿಹಿರೇಮಠವೇ ಸಾಕ್ಷಿ ಎಂದು ವಿಪ ಸದಸ್ಯರಾದ ಎಸ್‌.ವಿ. ಸಂಕನೂರ ಹೇಳಿದರು. 

ಡಾ.ಕೊಟ್ಟೂರ ಬಸವೇಶ್ವರ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಜರುಗಿದ ಪಂಚಪೀಠಾಧೀಶ್ವರರ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಪೂರ್ವಭಾವಿ ಸಭೆಯಲ್ಲಿ ಹಿರಿಯ ಗಣ್ಯ ಉದ್ಯಮಿದಾರರಾದ ಎಸ್‌.ಪಿ. ಸಂಶಿಮಠ, ಸಿದ್ದಣ್ಣ ಮಾರನಬಸರಿ, ಎಚ್‌.ಎಸ್‌. ಶಿವನಗೌಡರ, ರಾಜು ಕುರಡಗಿ, ಶರಣಪ್ಪ ಕುರಡಗಿ, ಸದಾಶಿವಯ್ಯ ಮದರಿಮಠ, ರಾಜು ಗುಡಿಮನಿ, ಚಂದ್ರು ಬಾಳಿಹಳ್ಳಿಮಠ, ಮಲ್ಲಿಕಾರ್ಜುನ ಸಂತೋಜಿ, ಸೇರಿದಂತೆ ಹಲವಾರು ಜನ ಗಣ್ಯ ಉದ್ದಿಮೆದಾರರನೊಳಗೊಂಡ ಸೂಡಿ ಜುಕ್ತಿಹಿರೇಮಠದ ಬಳಗ ಸಡಗರ, ಸಂಭ್ರಮ ಹಾಗೂ ಅದ್ಧೂರಿಯಿಂದ ಕಾರ್ಯಕ್ರಮವನ್ನು ನೆರವೇರಿಸಲು ನಿರ್ಧರಿಸಿದರು. ವಿಜಯಲಕ್ಷ್ಮೀ ಮಾನ್ವಿ, ಜಯಶ್ರೀ ತಾತನಗೌಡ ಮೊದಲ್ಗೊಂಡು ಬಹು ಸಂಖ್ಯೆಯಲ್ಲಿ ಮಹಿಳೆಯರು ಉಪಸ್ಥಿತರಿದ್ದು, ಕಾರ್ಯಕ್ರಮಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. 

ಸಾನ್ನಿಧ್ಯ ವಹಿಸಿದ್ದ ಡಾ.ಕೊಟ್ಟೂರ ಬಸವೇಶ್ವರ ಶಿವಾಚಾರ್ಯರು ಆಶೀರ್ವಚನ ನೀಡಿ, ನಮ್ಮೂರಲ್ಲಿ ಪಂಚಪೀಠದ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಜರುಗುತ್ತಿರುವುದು ಮೊದಲ ಬಾರಿ. ಹಳ್ಳಿಯಲ್ಲಿ ಏಕಕಾಲದಲ್ಲಿ ಐವರು ಪಂಚ ಪೀಠಾಧೀಶ್ವರ ಜಗದ್ಗುರುಗಳು ಕಾರ್ಯಕ್ರಮಕ್ಕೆ ಆಗಮಿಸುತ್ತಿರುವುದು ಕಳೆದ 25 ವರ್ಷಗಳಲ್ಲಿ ಈ ಭಾಗದಲ್ಲಿ ಮೊದಲು ಎಂದರು. 

2026ರ ಮೇ 6 ರಂದು ಮುಂಜಾನೆ 11ಕ್ಕೆ ಸೂಡಿ ಜುಕ್ತಿಹಿರೇಮಠದಲ್ಲಿ ಆರೋಗ್ಯ ಸಂವರ್ಧನೆಗಾಗಿ ಉಚಿತ ಆರೋಗ್ಯ ತಪಾಸಣೆ, ಕಣ್ಣಿನ ತಪಾಸಣೆ, ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ. ಸಂಜೆ 6.30ಕ್ಕೆ ಹುಬ್ಬಳ್ಳಿಯ ಜಿ.ವಿ. ಕಲಾಬಳಗದವರಿಂದ ಶ್ರೀಜಗದ್ಗುರು ರೇವಣಸಿದ್ಧೇಶ್ವರ ಮಹಾತ್ಮೆ ನಾಟಕ ಪ್ರದರ್ಶನಗೊಳ್ಳಲಿದೆ. ಮೇ 7ರಂದು ಮುಂಜಾನೆ 11ಕ್ಕೆ ಕೃಷಿ ಋಷಿಯ ನೆನಹು ಕಾರ್ಯಕ್ರಮದಡಿ ಸಾವಯವ ಕೃಷಿ, ಹೈನುಗಾರಿಕೆ ಅಭಿವೃದ್ಧಿ, ಪರಿಸರ ಜಾಗೃತಿಯ ಅರಿವು ಕಾರ್ಯಕ್ರಮ ಜರುಗಲಿದೆ. ಸಂಜೆ 6.30ಕ್ಕೆ ಗ್ರಾಮದ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಕಲಾವಿದರಿಂದ ಜನಪದ ನೃತ್ಯ, ಕಲಾಪ್ರದರ್ಶನ ನಡೆಯಲಿದೆ.

ಮೇ 8 ರಂದು ಮುಂಜಾನೆ 11ಕ್ಕೆ ಮಹಿಳಾ ಜಾಗೃತಿ ಸಮಾರಂಭ ಜರುಗಲಿದ್ದು, ಧರ್ಮ-ಪರಂಪರೆ, ಆರೋಗ್ಯ- ನೆಮ್ಮದಿಯ ಬದುಕಿಗೆ ಮಹಿಳೆಯ ಪಾತ್ರ, ಉಡಿತುಂಬುವುದು, ಸಂಜೆ 6.30ಕ್ಕೆ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿಯವರಿಂದ ದಕ್ಷಯಜ್ಞ ಪ್ರಸಂಗ ಜರುಗಲಿವೆ. ಮೇ 9 ರಂದು ಮುಂಜಾನೆ 11ಕ್ಕೆ ಯುವಕರಿಗಾಗಿ ವ್ಯಸನಮುಕ್ತ ಸಮಾಜದ ಅರಿವು, ಯುವಕರಿಗೆ ಪ್ರೇರಣೆಯ ಶಕ್ತಿ ವರ್ಧನೆಯ ಶಿಬಿರ ಹಮ್ಮಿಕೊಳ್ಳಲಾಗಿದೆ. ಸಂಜೆ 6.30ಕ್ಕೆ ಗಂಗಾವತಿ ಪ್ರಾಣೇಶ ಹಾಗೂ ಸಂಗಡಿಗರಿಂದ ಹಾಸ್ಯೋತ್ಸವ ಜರುಗಲಿದೆ ಎಂದು ಶ್ರೀಗಳು ವಿವರಿಸಿದರು. 

ಮೇ10 ರಂದು ಮುಂಜಾನೆ 9 ಗಂಟೆಗೆ ಪಂಚಪೀಠಾಧೀಶ್ವರ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಜರುಗಲಿದೆ. ಮಧ್ಯಾಹ್ನ 12ಕ್ಕೆ ಧರ್ಮ ಸಂರಕ್ಷಣೆಯ ಸಮಾರಂಭ ಶ್ರೀಮಠದ ಪ್ರಶಸ್ತಿ ಮತ್ತು ನೂತನ ರಥ ಲೋಕಾರೆ​‍್ಣ ಜರುಗಲಿದೆ. ಸಂಜೆ 6.30ಕ್ಕೆ ಬೆಂಗಳೂರಿನ ಕಲಾ ತಂಡದಿಂದ ರಸಮಂಜರಿ ಕಾರ್ಯಕ್ರಮ ಜರುಗಲಿದೆ. ಎಲ್ಲ ಕಾರ್ಯಕ್ರಮಗಳಲ್ಲಿ ಸದ್ಭಕ್ತರು ಪಾಲ್ಗೊಳ್ಳಬೇಕು ಎಂದು ಶ್ರೀಮಠದ ಪೀಠಾಧ್ಯಕ್ಷರಾದ ಕೊಟ್ಟೂರು ಬಸವೇಶ್ವರ ಶಿವಾಚಾರ್ಯರು ಹೇಳಿದರು.