ಪಡಿತರ ಅಕ್ಕಿ ಅಕ್ರಮ: ಪೊಲೀಸರಿಂದ ದಾಳಿ
ಜಮಖಂಡಿ 08: ನಗರದ ವಿಜಯಪೂರ ರಸ್ತೆಯ ಪಕ್ಕದಲ್ಲಿ ಬಳಿಯ ಗೋದಾಮಿನಲ್ಲಿ ಅನ್ನಭಾಗ್ಯ ಯೋಜನೆಯ ಬಡವರಿಗೆ ಪೂರೈಕೆ ಮಾಡಿದ್ದ. ಪಡಿತರ ಅಕ್ಕಿಯನ್ನು ಅಕ್ರಮವಾಗಿ ಗೋದಾಮಿನಲ್ಲಿ ಸಂಗ್ರಹಿಸಿದ್ದನ್ನು 205,50 ಕ್ವಿಂಟಲ್ ತೂಕವುಳ್ಳ ಲಕ್ಷಾಂತರ ರೂ.ಗಳ ಬೆಲೆಯ ಅಕ್ಕಿಯ ಮೂಟೆಗಳನ್ನು ತಹಶೀಲ್ದಾರ ಸದಾಶಿವ ಮಕ್ಕೋಜಿ ಅವರ ನೇತೃತದಲ್ಲಿ ಪೊಲೀಸರು ಜಂಟಿಯಾಗಿ ದಾಳಿ ನಡೆಸಿ ಜಪ್ತ ಮಾಡಲಾಗಿದೆ.
ತಹಶೀಲ್ದಾರ. ಶಹರ ಠಾಣೆಯ ನೇತೃತ್ವದಲ್ಲಿ ದಾಳಿ ನಡೆಸಿ. ಆರೋಪಿ ಹಾಜಿಲಾಲ ಹಾಜಿಅನ್ವರಸಾಬ ಪೈಲವಾನಗೆ ಸಂಬಂಧಿಸಿದ ಸುಮಾರು 205,50 ಕ್ವಿಂಟಲ್ ಕೆಜಿಯ ತೂಕವುಳ್ಳ 388 ಅಕ್ಕಿಯ ಮೂಟೆಗಳು. 2ಲಕ್ಷದ ಕಿಮ್ಮತಿನ ವಾಹನ ಸೇರಿ ಸುಮಾರು 3 ಲಕ್ಷ.8 ಸಾವಿರ 250 ರೂ. ಬೆಲೆಯ ಅಕ್ಕಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು. ಈ ಹಿಂದೆ ಇತನ ಮೇಲೆ 5 ಪ್ರಕರಣಗಳು ಇದ್ದು, ಇವಾಗ ಮೊತ್ತೊಂದು ಪ್ರಕರಣವನ್ನು ದಾಖಲು ಮಾಡಿ. ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಹಶೀಲ್ದಾರ ಸದಾಶಿವ ಮಕ್ಕೋಜಿ ತಿಳಿಸಿದ್ದಾರೆ.
ದಾಳಿಯಲ್ಲಿ ಆಹಾರ ನೀರಿಕ್ಷಕ ಆನಂದ ರಾಠೋಡ, ಆಹಾರ ಶೀರೆಸ್ಥದಾರ ಎಸ್.ಡಿ.ದಳವಾಯಿ. ಗ್ರಾಮಲೆಕ್ಕಾಧಿಕಾರಿ, ಶಹರ ಠಾಣೆ ಪೊಲೀಸರು ಸೇರಿ ದಾಳಿ ವೇಳೆಯಲ್ಲಿ ಭಾಗಿದ್ದರು.