ಇರುವಷ್ಟು ದಿವಸ ದೇವರು ಮೆಚ್ಚುವ ಕೆಲಸ ಮಾಡಬೇಕು: ಮೌ.ಝಕ್ರೀಯಾ ಸಾಹಬ
One should do what pleases God as long as one has life: Maw. Zakriya Sahab
ಮಹಾಲಿಂಗಪುರ 07: ಈ ಜಗತ್ತಿನಲ್ಲಿ ನಾವು ಇರುವಷ್ಟು ದಿವಸ ದೇವರು ಮೆಚ್ಚುವಂತಹ ಕೆಲಸ ಮಾಡಿದರೆ, ನಮ್ಮ ಬದುಕು ಯಾವತ್ತೂ ನೆಮ್ಮದಿಯಿಂದ ಕೂಡಿರುತ್ತದೆ ಎಂದು ಮೌ.ಝಕ್ರೀಯಾಸಾಹಬ ಹೇಳಿದರು.
ಪಟ್ಟಣದ ಇದ್ಘಾ ಮೈದಾನದಲ್ಲಿ ಇದುಲ್ ಅಧಾ (ಬಕ್ರೀದ್) ಹಬ್ಬದ ಪ್ರಯುಕ್ತ ವಿಶೇಷ ಪ್ರಾರ್ಥನೆಯ ಮುನ್ನ ಪ್ರವಚನ ನೀಡುತ್ತ ಮಾತನಾಡಿದ ಅವರು, ಈ ಹಬ್ಬವು ತ್ಯಾಗ ಬಲಿದಾನದ ಸಂಕೇತ ಮತ್ತು ನಮ್ಮ ಅರಿಷಡ್ವರ್ಗಗಳನ್ನು ಸರಿಯಾದ ದಿಕ್ಕಿನಲ್ಲಿ ಬಳಸಿಕ್ಕೊಂಡು ಸ್ವರ್ಗವನ್ನು ಪ್ರಾಪ್ತಿ ಮಾಡಿಕ್ಕೊಳ್ಳುವುದಾಗಿದೆ ಎಂದರು.ಶನಿವಾರ ಮುಂಜಾನೆ 9 ಗಂಟೆಗೆ ಹತ್ತು, ಹಲವು ಮಸ್ಜಿದ್ ಗಳು ಮತ್ತು ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ಮುಸ್ಲಿಂ ಬಾಂಧವರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಈದ್ಗಾ ಸ್ಥಳಕ್ಕೆ ಆಗಮಿಸಿ ಪ್ರಾರ್ಥನೆ ಸಲ್ಲಿಸಿದರು.ನಂತರ ಹಿಂದೂ ಮುಸ್ಲಿಂರು ಸೇರಿ ಮೃಷ್ಟಾನ್ನ ಸವಿದರು.
ಈ ವಿಶೇಷ ಪ್ರಾರ್ಥನೆಯನ್ನು ಖಾರಿ ಜುಬೇರಸಾಹೇಬ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಸಮಾಜದ ಹಿರಿಯರಾದ ಸಜನಸಾಬ್ ಪೆಂಡಾರಿ, ನಜೀರ್ ಅತ್ತಾರ, ದಾವಲಸಾಬ ನಗಾರ್ಚಿ, ನಜೀರ್ ಝಾರೆ, ಜಮೀರ ಯಕ್ಸಂಬಿ, ಹಾಸಿಂ ಪೆಂಡಾರಿ, ಉಸ್ಮಾನ್ ಪೆಂಡಾರಿ, ಮಹ್ಮದ್ ಪೆಂಡಾರಿ, ಸಿರಾಜ ಪಾಂಡು, ದಾದಾ ಕರೋಶಿ, ಮೇಹಬೂಬ ಜೀರಗಾಳ ಮುಂತಾದವರಿದ್ದರು.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 