ಕುಕನೂರ್

ಬದುಕಿನಲ್ಲಿ ಒಮ್ಮೆಯಾದರು ಕಾಶೀ ಯಾತ್ರೆ ಮಾಡಿ: ಕುಕನೂರ ಶ್ರೀ

ಬದುಕಿನಲ್ಲಿ ಒಮ್ಮೆಯಾದರು ಕಾಶೀ ಯಾತ್ರೆ ಮಾಡಿ: ಕುಕನೂರ ಶ್ರೀ

ಕುಕನೂರ:: ಕಾಶಿಯ ಶ್ರೀ ವಿಶ್ವೇಶ್ವರ ಲಿಂಗವು ಹನ್ನೆರಡು ಜ್ಯೋತಿಲಿರ್ಂಗಗಳಲ್ಲಿ ಒಂದು, ಭಾರತದ ಪುಣ್ಯ ಕ್ಷೇತ್ರಗಳಲ್ಲಿ ಅತ್ಯಂತ ಪ್ರಸಿದ್ಧವಾದ ಬಹಳ ಪ್ರಾಚೀನ ಮತ್ತು ಶ್ರೀಮಂತವಾದುದು. ಕಾಶಿಯು ಭಾರತ ಸಂಸ್ಕೃತಿಯ ಪ್ರತೀಕವೂ ಆಗಿದೆ ಶ್ರೀಮಠದ ಪೂಜ್ಯ ಮಹಾದೇವ ದೇವರು ಹೇಳಿದರು. 

     ಅವರು ಕುಕನೂರ ಪಟ್ಟಣದ ಅನ್ನದಾನೀಶ್ವರ ಮಠದಲ್ಲಿ ಕಾರ್ತಿ ಕೋತ್ಸವ ಸಮಾರೋಪ ಸಮಾರಂಭ ಮತ್ತು ಕಾಶೀ ಯಾತ್ರೆ ಮಾಡಿದ ಯಾತ್ರಿಗಳಿಗೆ ಸನ್ಮಾನ ಸಮಾರಂಭದ ನೇತೃತ್ವ ವಹಿಸಿ ಮಾತನಾಡುತ್ತಾ ವಾರಣಾಸಿ, ಕಾಶಿ, ಬನಾರಸ್ ಎಂಬ ಹೆಸರಿನಿಂದ ಖ್ಯಾತವಾದ ಈ ನಗರವನ್ನು ಎಲ್ಲ ಹಿಂದೂಗಳು ಅತ್ಯಂತ ಪವಿತ್ರ ಸ್ಥಾನವನ್ನಾಗಿ ಪರಿಗಣಿಸುತ್ತಾರೆ. ಪ್ರಪಂಚದ ಅತ್ಯಂತ ಹಳೆಯ ಮತ್ತು ಇಂದಿಗೂ ಜನ ವಸತಿಯಿಂದ ಕೂಡಿದ ನಗರಗಳಲ್ಲಿ ಇದೂ ಒಂದು. ಗಂಗಾ ನದಿಯ ತಟದಲ್ಲಿರುವ ಈ ನಗರವನ್ನು ವರುಣಾ ಮತ್ತು ಅಸಿ ಎಂಬ ನದಿಗಳು ಸುತ್ತುವರೆದಿವೆ. ಈ ನಗರಕ್ಕೆ ಹಲವಾರು ಸಂತರು ಭೇಟಿನೀಡಿದ್ದಾರೆ ಎಂದರು.

    ಸನ್ಮಾನ ಸ್ವೀಕರಿಸಿ ಮಾತನಾಡಿದ ಕಾಶೀ ಯಾತ್ರೆ ಮಾಡಿದ ವೀರಯ್ಯ ತೋಂಟದಾರ್ಯಮಠ ಹನ್ನೆರಡು ಜ್ಯೋತಿಲಿರ್ಂಗಗಳಲ್ಲಿ ಕಾಶೀ ವಿಶ್ವನಾಥನ ನೋಡುವುದೇ ಸೌಭಾಗ್ಯ, ಬದುಕಿನಲ್ಲಿ ಒಮ್ಮೆಯಾದರು ಕಾಶೀ ಯಾತ್ರೆ ಮಾಡಬೇಕು, ಶ್ರೀಮಠದ ಪೂಜ್ಯ ಮಹಾದೇವ ದೇವರ ನೇತೃತ್ವದಲ್ಲಿ ಕೊಪ್ಪಳ ಜಿಲ್ಲೆಯ 68 ಜನರು ಕಾಶೀ ಯಾತ್ರೆಯನ್ನ ಅತ್ಯಂತ್ಯ ಯಶಸ್ವಿಯಾಗಿ ಪೂರೈಸಿದ್ದು ಸಂತೋಷ ತಂದಿದೆ ಎಂದರು. 

   ಗದಿಗೆಪ್ಪ ಪವಾಡಶೆಟ್ಟಿ ಮಾತನಾಡಿ ದೀಪ ಹಚ್ಚುವ ಮೂಲಕ ಮನದ ಕತ್ತಲೆಯನ್ನು ದೂರಮಾಡಿಕೊಳ್ಳಬೇಕು, ಕಾರ್ತಿಕ ಮಾಸ ಅತ್ಯಂತ ಶ್ರೇಷ್ಟ ಮಾಸ ಈ ಮಾಸದಲ್ಲಿ ದೀಪ ಬೆಳಗುವುದರಿಂದ ಬದುಕಿನ ಕಷ್ಟಗಳು ದೂರವಾಗಿ ಸುಖದಿಂದ ಜೀವನ ನಡೆಸಲು ಸಾಧ್ಯವಾಗುತ್ತದೆ, ದೀಪ ಶ್ರೀಮಂತನ ಮನೆಯಲ್ಲಿ ಹಚ್ಚಿದರೂ ಅದೇ ಬೆಳಕನ್ನ ನೀಡುತ್ತದೆ, ಬಡವನ ಮನೆಯಲ್ಲಿ ಹಚ್ಚಿದರೂ ಅದೇ ಬೆಳಕನ್ನ ನೀಡುತ್ತದೆ ಆದ್ದರಿಂದ ನಾವೂ ದೀಪದಂತೆ ಎಲ್ಲಾರನ್ನು ಸಮಾನವಾಗಿ ಕಾಣಬೇಕು ಎಂದರು.  

 ಪ್ರಭು ಶಿವಶಿಂಪರ, ಸಂಗಮೇಶ ಕಲ್ಮಠ, ವೀರಯ್ಯ ಹಿರೇಮಠ, ಕಲ್ಲಪ್ಪ ಅಳವಂಡಿ, ಬಸಪ್ಪ ಬಂಗಿ, ಪಾಂಡುರಂಗ ವಿಠಲ, ಬಾಳಪ್ಪ, ರಾಮಣ್ಣ ಬೆದವಟ್ಟಿ, ಗುದ್ನಪ್ಪ ಹೊಸಮನಿ, ಶರಣಪ್ಪ ಮಳಿಗಿ, ಕಳಕಪ್ಪ ಬೋರಣ್ಣನವರು, ನೀಲಕಂಠಯ್ಯ ಕಾಶೀಮಠ ಮತ್ತು ಇತರರು ಇದ್ದರು.

ಸುದ್ದಿ ಓದಿ