ಪ್ರೊ.ಬಸವರಾಜ ಕಡ್ಡಿಯವರಿಗೆ ಕಸಾಪದಿಂದ ಸನ್ಮಾನ
ಜಮಖಂಡಿ12: ಡಿ.25ರಂದು ಜರುಗಲಿರುವ ಜಮಖಂಡಿ ತಾಲ್ಲೂಕು 8ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸವರ್ಾಧ್ಯಕ್ಷರಾಗಿ ಆಯ್ಕೆಯಾಗಿರುವ ಸಾಹಿತಿ ಪ್ರೊ.ಬಸವರಾಜ ಕಡ್ಡಿ ಅವರನ್ನು ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಪದಾಧಿಕಾರಿಗಳು ಅವರ ನಿವಾಸಕ್ಕೆ ತೆರಳಿ ಅಧಿಕೃತವಾಗಿ ಆಹ್ವಾನಿಸಿ ಸನ್ಮಾನಿಸಿದರು.
ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಸಂತೋಷ ತಳಕೇರಿ ಮಾತನಾಡಿ, ಕನ್ನಡ ನಾಡು, ನುಡಿ, ನೆಲ, ಜಲ ಕುರಿತು ಕೃತಿ ಹಾಗೂ ಮಾತುಗಳ ಮೂಲಕ ಪ್ರೊ.ಬಸವರಾಜ ಕಡ್ಡಿ ಅವರು ಜನಜಾಗೃತಿ ಮೂಡಿಸಿದ್ದಾರೆ. ಅವರ ಸೇವೆ ಮತ್ತು ಸಾಧನೆಯನ್ನು ಗುರುತಿಸಿ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಅವರ ಆಯ್ಕೆಯಿಂದ ಸಮ್ಮೇಳನದ ಘನತೆ, ಗೌರವ ಹೆಚ್ಚಲಿದೆ ಎಂದರು.
ಶಾಸಕ ಆನಂದ ನ್ಯಾಮಗೌಡ ಅವರು ಪ್ರೊ.ಬಸವರಾಜ ಕಡ್ಡಿ ಅವರನ್ನು ಅಭಿನಂದಿಸಿ ಸಮ್ಮೇಳನದ ಯಶಸ್ಸಿಗೆ ಶುಭ ಕೋರಿದರು. ಸಾಹಿತಿ ಪ್ರೊ.ಬಸವರಾಜ ಕಡ್ಡಿ ಮಾತನಾಡಿ, ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಹೆಮ್ಮೆ ಮತ್ತು ಸಂತಸದ ಸಂಗತಿಯಾಗಿದೆ. ಎಲ್ಲರೂ ಸೇರಿ ಸಮ್ಮೇಳನವನ್ನು ಅದ್ಧೂರಿಯಾಗಿ ಮತ್ತು ವಿಜೃಂಭಣೆಯಿಂದ ಜರುಗಿಸೋಣ ಎಂದರು.
ಸಮ್ಮೇಳನದ ಕಾರ್ಯಾಧ್ಯಕ್ಷ, ವಕೀಲ ಎನ್.ಎಸ್. ದೇವರವರ, ನಗರಸಭೆ ಅಧ್ಯಕ್ಷ ದಾನೇಶ ಘಾಟಗೆ, ವಿನೋದ ಲೋಣಿ, ಭ.ನಿಂ. ಅಸ್ಕಿ, ಶ್ರೀನಿವಾಸ ಅಪರಂಜಿ, ಬಾಹುಬಲಿ ಬಿರಾದಾರ, ಚಂದ್ರಕಲಾ ಜನಗೌಡ, ಪಿ.ಆರ್. ರಾಮತಾಳ, ನರಸಿಂಹ ಕಲ್ಲೋಳ್ಳಿ, ಸಂಗಮೇಶ ಉಟಗಿ, ಪ್ರಶಾಂತ ಕುಲಕರ್ಣಿ, ಮಹಾದೇವ ಪೋತರಾಜ, ಶಿವಾನಂದ ಯಾದವಾಡ, ಡಾ.ಟಿ.ಪಿ. ಗಿರಡ್ಡಿ ಇದ್ದರು.