ಮದಮಕ್ಕನಾಳ ಗ್ರಾಮಕ್ಕೆ ಮಹಾಲಕ್ಷ್ಮಿ ದ್ಯಾಮವ್ವಾದೇವಿ ನೂತನ ಮೂರ್ತಿಗೆ ಸ್ವಾಗತ

ಮದಮಕ್ಕನಾಳ ಗ್ರಾಮಕ್ಕೆ ಮಹಾಲಕ್ಷ್ಮಿ ದ್ಯಾಮವ್ವಾದೇವಿ ನೂತನ ಮೂರ್ತಿಗೆ ಸ್ವಾಗತ New idol of Mahalakshmi Dyamvvadevi welcomed in Madamakkanal village

ಹುಕ್ಕೇರಿ 23 : ತಾಲೂಕಿನ  ಮದಮಕ್ಕನಾಳ ಗ್ರಾಮದಲ್ಲಿ  ಮಹಾಲಕ್ಷ್ಮಿ ದ್ಯಾಮವ್ವಾ ದೇವಿ ನೂತನ ಮೂರ್ತಿಗೆ ಭವ್ಯಸ್ವಾಗತ ಕುಂಭವತ್ತ ಮಹಿಳೆಯರು ವಿವಿಧ ವಾದ್ಯ ಮೇಳದೊಂದಿಗೆ ಗ್ರಾಮಕ್ಕೆ ಬರಮಾಡಿಕೊಂಡರು. ಗ್ರಾಮದ ಹಿರಿಯರಾದ ಮಲ್ಲಪ್ಪ ಬಡಿಗೇರ ಮಾತನಾಡಿ ಕಳೆದ ನೂರಾರು ವರ್ಷದ ಇತಿಹಾಸ ವಿರುವ  ಮಹಾಲಕ್ಷ್ಮಿ ದ್ಯಾಮವ್ವಾ ದೇವಿಯ ಮಂದಿರದಲ್ಲಿ ಮೂರ್ತಿ ಇಲ್ಲದೆ ಪೂಜೆ ನೆರವೆರಿಸಲಾಗುತ್ತಿತ್ತು, ಊರಿನ ಹಿರಿಯರು ಸೇರಿ ನೂತನ ಮೂರ್ತಿ ನಿರ್ಮಾಣ ಮಾಡಿ ಇಂದು ಗ್ರಾಮಕ್ಕೆ ಬರಮಾಡಿಕೊಳ್ಳಲಾಗಿದೆ. ಈ ದಿನ ನಮ್ಮ ಗ್ರಾಮ ಸುವರ್ಣಾಕ್ಷರಗಳಿಂದ ಬರೆದ ದಿನವಾಗಿದೆ ಎಂದರು. ಯುವಕರು ಬಂಢಾರದಲ್ಲಿ ಮಿಂದು ಮೆರವಣೆಗೆಯಲ್ಲಿ ಭಾಗವಹಿಸಿದರು. ಸಂತೋಷದಿಂದ ಕುಣಿದು ಕುಪ್ಪಳಿಸಿದರು. 

ಹಿರಣ್ಯಕೇಶಿ ನದಿ ದಡದಲ್ಲಿರುವ ಮದಮಕ್ಕನಾಳ ಗ್ರಾಮದಲ್ಲಿ ಹಲವಾರು ದೇವರ ದೇವಸ್ಥಾನಗಳು ಇವೆ ಆದರೆ ಮಹಾಲಕ್ಷ್ಮಿ ದ್ಯಾಮವ್ವಾ ಮಂದಿರವನ್ನು ಇತ್ತೀಚಿಗೆ ಗ್ರಾಮದ ಹಿರಿಯರು ನಿರ್ಮಿಸಿದ್ದಾರೆ. ಇಂದು ನೂತನ ಮೂರ್ತಿ ಯನ್ನು ಗ್ರಾಮಸ್ಥರು ಹಬ್ಬದ ಸಡಗರ ದೊಂದಿಗೆ ಅತಿ ಉತ್ಸಾಹದಿಂದ ಆಚರಿಸಲಾಗುತ್ತಿದೆ ಎಂದರು.  ಈ ಸಂದರ್ಭದಲ್ಲಿ ಉದಯ್ ಮಗದುಮ್  ಮಲ್ಲಪ್ಪ ಬಡಿಗೇರ, ಪೂಜೇರಿಗಳಾದ ರತ್ನವ್ವ ಬಡಿಗೇರ್  ಕೆ.ಎಸ್ ಪಾಟೀಲ, ನಾಗಪ್ಪ ನಾಯಿಕ ಎಸ್‌.ಕೆ ಪಾಟೀಲ, ಬಸಯ್ಯಾ ಹಿರೇಮಠ, ಬಸವಣ್ಣಿ ಮಗದುಮ್ ಆನಂದ್ ಪಾಟೀಲ್ ಪ್ರಕಾಶ್ ಮಗದುಮ್ ಶಿವಾನಂದ್ ನಾಯಿಕ  ಹಾಗೂ ಮದಮಕ್ಕನಾಳ ಗ್ರಾಮದ ಗುರುಹಿರಿಯರು, ಮುಖಂಡರು ಯುವಕರು, ಮಹಿಳೆಯರು ಮಕ್ಕಳು ಉಪಸ್ಥಿತರಿದ್ದರು.