ಮುಧೋಳ

ರಾಷ್ಟ್ರ ಮಟ್ಟದ ಕುಸ್ತಿ ಪಟು ನಗರಸಭೆ ಅಧ್ಯಕ್ಷ ಸಿದ್ದನಾಥ ಕೊರೊನಾಕ್ಕೆ ಬಲಿ

ರಾಷ್ಟ್ರ ಮಟ್ಟದ ಕುಸ್ತಿ ಪಟು ನಗರಸಭೆ ಅಧ್ಯಕ್ಷ ಸಿದ್ದನಾಥ ಕೊರೊನಾಕ್ಕೆ ಬಲಿ

ಮುಧೋಳ :ಮೈಸೂರು ದಸರಾ ಸೇರಿದಂತೆ ಹಲವಾರು ರಾಷ್ಟ್ರೀಯ ಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಬಹುಮಾನ ಪಡೆದು ಮುಧೋಳ ನಗರದ ಅಭಿವೃದ್ಧಿ ಕನಸು ಹೊತ್ತ ನಗರಸಭೆಯ ಅಧ್ಯಕ್ಷ ಸಿದ್ದನಾಥ (ಸಂಜು)ದಾದಾಸಾಹೇಬ್ ಮಾನೆ(32) ಭಾನುವಾರ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಕಳೆದ ಕೆಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು.    ಇವರ ನಿಧನಕ್ಕೆ ಡಿಸಿಎಂ ಗೋವಿಂದ ಕಾರಜೋಳ ಸೇರಿದಂತೆ ಹಲವಾರು ಮುಖಂಡರು ಕಂಬನಿ ಮಿಡಿದಿದ್ದರಾರೆ.  ಸಿದ್ದನಾಥ (ಸಂಜು) ದಾದಾ ಸಾಹೇಬ ಮಾನೆ ಅವರು ಯುವ  ಹಾಗೂ ಕ್ರೀಯಶೀಲ ಜನಪ್ರತಿನಿಧಿಯಾಗಿದ್ದರು. ಅತ್ಯುತ್ತಮ ಕುಸ್ತಿಪಟುವಾಗಿದ್ದು, ಕನರ್ಾಟಕ ಕೇಸರಿ,   ಕನರ್ಾಟಕ ಕಂಠೀರವ ಪ್ರಶಸ್ತಿ ಸೇರಿದಂತೆ ವಿವಿಧ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಯುವಕರನ್ನು ಕ್ರೀಡಾ ಚಟುವಟಿಗಳಿಗೆ ಉತ್ತೇಜಿಸುತ್ತಿದ್ದರು. ಜನರ ಆಶಯಗಳಿಗೆ ಸಕ್ರಿಯವಾಗಿ ಸ್ಪಂದಿಸುತ್ತಿದ್ದರು. ಅವರ ನಿಧನದಿಂದ ಭತಿಸಲಾರದ  ನಷ್ಟ ಉಂಟಾಗಿದೆ. ಭಗವಂತನು ಅವರ ಆತ್ಮಕ್ಕೆ ಚಿರಶಾಂತಿ ನೀಡಿ, ಅವರ ಕುಟುಂಬವರ್ಗದವರಿಗೆ ದು:ಖ ಭರಿಸುವ ಶಕ್ತಿ ನೀಡಲಿ ಎಂದು ಡಿಸಿಎಂ ಪ್ರಾಥರ್ಿಸಿದ್ದಾರೆ 

ಸುದ್ದಿ ಓದಿ