ಜಮಖಂಡಿ

ನ.14 ಮತ್ತು 15 ರಂದು ನಾನಾನೆಂಬುದು ನಾನಲ್ಲ ನಾಟಕ ಪ್ರದರ್ಶನ

ನ.14 ಮತ್ತು 15 ರಂದು ನಾನಾನೆಂಬುದು ನಾನಲ್ಲ ನಾಟಕ ಪ್ರದರ್ಶನ

ಜಮಖಂಡಿ 13: ಸಮೀಪದ ಬನಹಟ್ಟಿಯ ವಾತ್ಸಲ್ಯ ವಿಚಾರ ವೇದಿಕೆ ಹಾಗೂ ಇಲ್ಲಿನ ಬಿಈಡಿ ಕಾಲೇಜಿನ ಸಹಯೋಗದಲ್ಲಿ ನ.14 ಮತ್ತು 15 ರಂದು ಸಂಜೆ 7 ಕ್ಕೆ ರಂಗ ಕಾಯರ್ಾಗಾರ ಮುಕ್ತಾಯ ಮತ್ತು ನಾನಾನೆಂಬುದು ನಾನಲ್ಲ ಎಂಬ ನಾಟಕ ಪ್ರದರ್ಶನವು ಜಿಜಿ ಹೈಸ್ಕೂಲ್ ಮೈದಾನದಲ್ಲಿ ನಡೆಯಲಿದೆಂದು ಹಿರಿಯ ಸಾಹಿತಿ ಬಿ.ಆರ್.ಪೋಲಿಸ್ಪಾಟೀಲ ರಮಾ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಾಟಕ ಪ್ರದರ್ಶನದ ಸಮಾರಂಭದ ಸಾನಿಧ್ಯವನ್ನು ಓಲಿಮಠದ ಡಾ.ಚೆನ್ನಬಸವ ಮಹಾಸ್ವಾಮಿಜಿ ವಹಿಸುವರು.ಬೆಂಗಳೂರು ಗಾಂಧಿ ಸ್ಮಾರಕ ನಿಧಿ ಸಂಸ್ಥೆ ಕಾರ್ಯದಶರ್ಿ ಇಂದಿರಾ ಕೃಷ್ಣಪ್ಪ ಉದ್ಘಾಟಿಸಲಿದ್ದಾರೆ. ಎಸಿ ಡಾ.ಸಿದ್ದು ಹುಲ್ಲೋಳ್ಳಿ ಅಧ್ಯಕ್ಷತೆ ವಹಿಸುವರು. ಸಿಟಿಇ ಪ್ರಾಂಶುಪಾಲ ಬಿ.ಹೆಚ್.ಗೋನಾಳ, ಕನ್ನಡ ಮತ್ತು ಸಂಸೃತಿ ಇಲಾಖೆ ಸಹಾಯಕ ನಿದರ್ೇಶಕ ಕರ್ಣಕುಮಾರ ಜೈನಾಪೂರ, ಕಸಾಪ ತಾಲೂಕಾಧ್ಯಕ್ಷ ಸಂತೋಷ ತಳಕೇರಿ, ಅಶೋಕ ತುಂಗಳ, ಪ್ರಾಚಾರ್ಯ ಮಹಾಂತೇಶ ನರಸನಗೌಡ, ನಾಟಕಕಾರ ಸಂಗಮೇಶ ಗುರವ ಆಗಮಿಸಲಿದ್ದಾರೆಂದು ತಿಳಿಸಿದರು. ಗೋಷ್ಠಿಯಲ್ಲಿ ಪ್ರಭು ಹಿಡಕಲ್, ಸದಾಶಿವ ಮೇತ್ರಿ ಇದ್ದರು. 


 

ಸುದ್ದಿ ಓದಿ