ಸಂಗೀತವೆಂಬುದು ಅಗಾಧ ಶಕ್ತಿ ಯಿದ್ದಂತೆ: ಮಹದೇವ್ ದೇವರು
ಕುಕನೂರು: ಸಂಗೀತವೆಂಬುದು ಒಂದು ಅಗಾಧಶಕ್ತಿಯಾಗಿದ್ದು ಮಾನವ ಮಾನವನಿಗೆ ಚೈತನ್ಯ ತುಂಬ ಶಕ್ತಿ ಸಂಗೀತದಲ್ಲಡಗಿದೆ ಎಂದು ಕುಕನೂರಿನ ಅನ್ನದಾನಿಶ್ವರ ಶಾಖ ಮಠದ ಪೂಜ್ಯರಾದ ಡಾ. ಮಹಾದೇವ ದೇವರು ತಿಳಿಸಿದರು.
ಕುಕನೂರು ಪಟ್ಟಣದ ಇಟಗಿ ಮಸ್ಜಿದ್ ಸಮೀಪದ ಬಯಲು ರಂಗ ಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಪ್ಪಳ, ಕನ್ನಡ ಸಾಹಿತ್ಯ ಸಂಸ್ಕೃತಿ ಅಭಿವೃದ್ಧಿ ಟ್ರಸ್ಟ್ ಕುಕನೂರು ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲ್ಪಟ್ಟ ಗಾನ ಲಹರಿ 2022 ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಪ್ರತಿಯೊಬ್ಬರ ಸಂಗೀತಕ್ಕೆ ಮನಸೋಲುವ ವ್ಯಕ್ತಿತ್ವ ಹೊಂದಿದ್ದು ಸಂಗೀತಕ್ಕೆ ಮನಸೋಲದ ವ್ಯಕ್ತಿ ಸಿಗುವ ಸಾಧ್ಯತೆಗಳೆ ಇಲ್ಲ ಆದ್ದರಿಂದ ಪ್ರತಿಯೊಬ್ಬರೂ ಸಂಗೀತದ ಹವ್ಯಾಸ ಬೆಳೆಸಿಕೊಳ್ಳಬೇಕೆಂದು ಮತ್ತು ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಇಂತಹ ಕಾರ್ಯಕ್ರಮಗಳು ಪದೇಪದೇ ಜರುಗಬೇಕೆಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಅಧ್ಯಕ್ಷ ಹಾಗೂಹಿರಿಯ ಪತ್ರಕರ್ತರಾದ ರುದ್ರ್ಪ ಭಂಡಾರಿ ಮಾತನಾಡುತ್ತ ರಾಜ ಮಹಾರಾಜರ ಕಾಲದಿಂದಲೂ ಸಂಗೀತ ವಿದ್ಯೆಯು ತನ್ನದೇ ಆದ ವೈಶಿಷ್ಟ್ಯತೆಯನ್ನು ಉಳಿಸಿಕೊಂಡು ಬಂದಿರುತ್ತದೆ ಕರ್ನಾಟಕ ಹಾಗೂ ಭಾರತದಲ್ಲಿ ಸಂಗೀತದ ದೊಡ್ಡ ಪರಂಪರೆ ಸಿಗುತ್ತದೆ, ಪ್ರಪಂಚದಲ್ಲಿ ಸಂಗೀತ ಒಂದು ಅದ್ಭುತ ಕಲೆಯಾಗಿದ್ದು ಕಲಾವಿದರನ್ನು ಗೌರವಿಸಿ ಕಲೆಯನ್ನು ಪ್ರೋತ್ಸಾಹಿಸಿ ಬೆಳೆಸಬೇಕಾದ ಅನಿವಾರ್ಯತೆ ನಮ್ಮೆಲ್ಲರದ್ದಾಗಿದೆ , ಮುಂದುವರಿದ ಭಾಗ ವಾಗೀ ನಮ್ಮ ಸಂಸ್ಥೆಯ ವತಿಯಿಂದ ಹೆಚ್ಚು ಕಾಯ9ಕ್ರಮ ರೂಪಿಸಲು ಉದ್ದೇಶಿದೆಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಗಾಯಕ ರಾದ ಮುರಾರಿ ಭಜಂತ್ರಿ ರವರ ತಂಡದಿಂದ ಸುಗಮ ಸಂಗೀತ, ಸುಮತಿ ಮಂಜುನಾಥ್ ಭಜಂತ್ರಿ ಅವರ ತಂಡದಿಂದ ಹಿಂದುಸ್ತಾನಿ ಗಾಯನ, ಮುಕುಂದ ಶಿವಕುಮಾರ್ ಭಜಂತ್ರಿ ಅವರು ತಂಡದಿಂದ ಜಾನಪದ ಸಂಗೀತ ಕಾರ್ಯಕ್ರಮಗಳು ಯಶಸ್ವಿಯಾಗಿ ಜರುಗಿದವು. ಸಂಗೀತ ಶಿಕ್ಷಕ ಮಾರುತಿ ಮೇನೇದಾಲ್ , ಹಾಗೂ ರಾಮು ಕಂಪ್ಲಿ ಸಂಗೀತ ಸಾಥ್ ನೀಡಿದರು. ಮುಖಂಡರಾದ ಶೇಖರ್ಪ ಕಂಬಳಿ, ಶಿವಪ್ಪ ಸಂದಿಮನಿ, ಕಳಕಪ್ಪ ಭೋರಣವರ, ಹುಸೇನಸಾಬ ಜೋಕಾಲಿ,ಮಲ್ಲು ಚೌದ್ರಿ, ಮಹಾಂತೇಶ್ ಹೂಗಾರ್, ಬಸವರಾಜ್ ದಿವತಾರ್, ರಾಮಣ್ಣ ಮುಂದಲ್ ಮನಿ, ಈರ್ಪ ಸಬರದ, ವಕೀಲರಾದ ಬಸವರಾಜ್ ಜಂಗಲಿ,. ಆ ಡಿವೆಪ್ಪ ಬೊರನ್ನವಾರ್, ಇನ್ನಿತರರು ವೇದಿಕೆಯಲ್ಲಿದ್ದರು.