ಮುಧೋಳ

ನಗರಸಭೆಯ 2022-23 ನೇ ಸಾಲಿನ ಬಜೆಟ್ ಮಂಡನೆ: 9,28,838 ಉಳಿತಾಯ ಬಜೆಟ್

ನಗರಸಭೆಯ 2022-23 ನೇ ಸಾಲಿನ ಬಜೆಟ್ ಮಂಡನೆ: 9,28,838 ಉಳಿತಾಯ ಬಜೆಟ್

ಮುಧೋಳ ; ನಗರದ ಅಭಿವೃದ್ಧಿಗಾಗಿ ಸಿದ್ಧಪಡಿಸಲಾಗಿರುವ ಸನ್ 2022-23 ನೇ ಸಾಲಿನ ಆಯ-ವ್ಯಯ ಅಂದಾಜುಪಟ್ಟಿಯಂತೆಯಂತೆ ಮಂಡಿಸಲಾಗಿದ್ದು ನಗರಸಭೆಯ ಆಯ-ವ್ಯಯದಲ್ಲಿನ ಎಲ್ಲಾ ಮೂಲಗಳಿಂದ ಪ್ರಸ್ತುತ ಆರಂಭಿಕ ಶಿಲ್ಕು ಸೇರಿ 2981.14 ಲಕ್ಷರೂಗಳ  ಆದಾಯ ಹಾಗೂ ಎಲ್ಲಾ ತರಹದ  ಖರ್ಚು ವೆಚ್ಚಗಳು ಸೇರಿ ರೂ. 2971.86 ಲಕ್ಷಗಳ ವೆಚ್ಚವನ್ನು ಅಳವಡಿಸಿಕೊಂಡು ರೂ. 9.28 ಲಕ್ಷಗಳ ನೀರೀಕ್ಷಿತ ಉಳಿತಾಯವನ್ನು ಹೊಂದಿರುತ್ತದೆ ಎಂದು ನಗರಸಭೆ ಅಧ್ಯಕ್ಷೆ ಸ್ವಾತಿ ಕುಲಕರ್ಣಿ ಹೇಳಿದರು. 

ಗುರುವಾರ ನಗರಸಭೆಯ ಸಭಾಭವನದಲ್ಲಿ ಬಜೆಟ್ ಮಂಡನೆ ಮಾಡಿ ಮಾತನಾಡುತ್ತಾ ನಗರಸಭೆಯ ವ್ಯಾಪ್ತಿಯಲ್ಲಿ ನಗರವನ್ನು ಸ್ವಚ್ಚಹಾಗೂ ಸುಂದರವಾಗಿ ನಿರ್ಮಾಣ ಮಾಡಲು ಪ್ರಯತ್ನ ಮಾಡಲು ಹೆಚ್ಚಿನ ಕಾರ್ಯಕ್ಷಮತೆಯಲ್ಲಿ ನಿರ್ವಹಣೆ ಮಾಡಲಾಗುವದು ಈ ನಿಟ್ಟಿನಲ್ಲಿ ನಮ್ಮ ನಗರಸಭೆಗೆ ಪ್ರಮುಖ ಆದಾಯಗಳಲ್ಲಿ ನಗರಸಭೆಯ ಆಯ-ವ್ಯಯದಲ್ಲಿ ಪ್ರಮುಖವಾಗಿ ಕಟ್ಟಡದ ಆಸ್ತಿ ತೆರಿಗೆಯ ಮೂಲಕ ರೂ. 278.00 ಲಕ್ಷಗಳು, ಆಸ್ತಿ ತೆರಿಗೆಯ ದಂಡದಿಂದ ರೂ. 42.00 ಲಕ್ಷಗಳು, ಉದ್ದಿಮೆ ಪರವಾನಿಗೆ ಶುಲ್ಕದಿಂದ ಹಾಗೂ ದಂಡದಿಂದ ರೂ. 6.00 ಲಕ್ಷಗಳು, ಅಂಗಡಿ ಮಳಿಗೆಗಳ ಬಾಡಿಗೆಯಿಂದ ರೂ. 52.72 ಲಕ್ಷಗಳು, ಕಟ್ಟಡ ಪರವಾನಿಗೆ ಶುಲ್ಕದಿಂದ ರೂ. 25.00 ಲಕ್ಷಗಳು, ನಿವೇಶನ ಅಭಿವೃದ್ಧಿ ಶುಲ್ಕದಿಂದ ರೂ. 25.00 ಲಕ್ಷಗಳು, ಸಂಗ್ರಹಣಾ ಹಾಗೂ ಮೇಲ್ವಿಚಾರಣಾ ಶುಲ್ಕಗಳಿಂದ ರೂ. 58.00 ಲಕ್ಷಗಳು, ಇತರೇ ಕರಗಳ ಸಂಗ್ರಹಣಾ ಶುಲ್ಕದಿಂದ ರೂ. 23.40 ಲಕ್ಷಗಳು, ಅಂಗಡಿ ಬಾಡಿಗೆ ಬಡ್ಡಿ ಹಾಗೂ ಸಮುದಾಯ ಭವನ ಬಾಡಿಗೆ ಮತ್ತು ಶುಲ್ಕದಿಂದ ರೂ. 12.05 ಲಕ್ಷಗಳು, ಖಾತಾ ಬದಲಾವಣೆ ಉತಾರ ಫೀ ಶುಲ್ಕದಿಂದ ರೂ. 3.50 ಲಕ್ಷಗಳು, ಇತರೆ ಪ್ರಮಾಣ ಪತ್ರಗಳ ಶುಲ್ಕದಿಂದ ರೂ. 3.25 ಲಕ್ಷಗಳು, ಟೆಂಡರ್ ಫಾರಂಗಳ ಮತ್ತು ನಿರುಪಯುಕ್ತ ವಸ್ತು ಮಾರಾಟದಿಂದ ರೂ. 3.00 ಲಕ್ಷಗಳು, ಜನನ ಮತ್ತು ಮರಣ ಪ್ರಮಾಣ ಪತ್ರಗಳ ಶುಲ್ಕದಿಂದ ರೂ. 0.80 ಲಕ್ಷಗಳು ನೀರೀಊಕ್ಷೆಮಾಡಲಾಗಿದೆ 

ಇನ್ನು  ರಸ್ತೆ ಅಗೆತದ ಹಾಗೂ ಯು.ಜಿ.ಡಿ. ಜೋಡಣಾ ಫೀ ದಿಂದ ರೂ. 7.50 ಲಕ್ಷಗಳು, ನೀರಿನ ದರಗಳ ವಸೂಲಾತಿಯಿಂದ ರೂ. 58.30 ಲಕ್ಷಗಳು, ನೀರಿನ ಸಂಪರ್ಕದ ರೂ. 2.50 ಸಂತೆಕರ ರೂ. 7.50 ಲಕ್ಷಗಳು, ನಗರಸಭೆಯ ಅಧಿಕಾರಿ ಮತ್ತು ನೌಕರರ ವೇತನಕ್ಕಾಗಿ ಸರ್ಕಾರದಿಂದ ಬರುವ ಅನುದಾನ ರೂ. 280.00 ಲಕ್ಷಗಳು, ಸರ್ಕಾರದಿಂದ ಎಸ್‌.ಎಫ್‌.ಸಿ. ಅಭಿವೃದ್ಧಿ ಅನುದಾನ ರೂ. 185.00 ಲಕ್ಷಗಳು, 15ನೇ ಹಣಕಾಸು ಯೋಜನೆ ಹಾಗೂ ಸರ್ಕಾರದಿಂದ ಇತರೆ ಅನುದಾನ ರೂ. 600.00 ಲಕ್ಷಗಳು, ನಲ್ಮ್‌ ಯೋಜನೆಗಾಗಿ ಅನುದಾನ   ರೂ. 15.00 ಲಕ್ಷಗಳು, ಪ್ರಧಾನ ಮಂತ್ರಿ ಆವಾಸ ಯೋಜನೆ ಅನುದಾನದಿಂದ ರೂ. 10.00 ಲಕ್ಷಗಳು, ಕುಡಿಯುವ ನೀರು ಅಥವಾ ಬರಪರಿಹಾರ ಅನುದಾನದಿಂದ ರೂ. 15.00 ಲಕ್ಷಗಳು, ಸ್ವಚ್ಚ ಭಾರತ ಯೋಜನೆಯ ಅನುದಾನದಿಂದ ರೂ. 25.00 ಲಕ್ಷಗಳು, ನೀರುಸರಬರಾಜು ಮತ್ತು ಬೀದಿ ದೀಪಗಳ ವಿದ್ಯುತ್ ಬಿಲ್ ಪಾವತಿಗಾಗಿ ಎಸ್‌.ಎಫ್‌.ಸಿ ವಿದ್ಯುತ್ ಅನುದಾನ ರೂ. 300.00 ಲಕ್ಷಗಳು ಹಾಗೂ ಎಸ್‌.ಎಫ್‌.ಸಿ, ಎಸ್‌.ಡಬ್ಲೂ.ಎಮ್‌. ಆಶ್ರಯ, ಎಸ್‌.ಸಿ.ಪಿ. ಟಿ.ಎಸ್‌.ಪಿ, ಅನುದಾನ ರೂ.60.00 ಲಕ್ಷಗಳು ಇತರೆ ಆದಾಯಗಳು ಸೇರಿದಂತೆ ನಗರಸಭೆಯ  ಆಯ-ವ್ಯಯದಲ್ಲಿ ಎಲ್ಲಾ ಮೂಲಗಳಿಂದ ಒಟ್ಟು  ರೂ. 2059.82 ಲಕ್ಷಗಳ ಆದಾಯವನ್ನು ನೀರೀಕ್ಷಿಸಲಾಗಿದೆ ಎಂದರು 

ಇನ್ನು ವೆಚ್ಚಗಳಾಗಿ ಮುಧೋಳ ನಗರದಲ್ಲಿನ ರಸ್ತೆ ಹಾಗೂ ಚರಂಡಿಗಳ ನಿರ್ಮಾಣಕ್ಕಾಗಿ 15ನೇ ಹಣಕಾಸು, ಎಸ್‌.ಎಫ್‌.ಸಿ ಮುಕ್ತ ನಿಧಿ ಹಾಗೂ ಇತರೆ ಪ್ರಮುಖ ಅನುದಾನದಡಿ ರೂ. 910.00 ಲಕ್ಷಗಳಲ್ಲಿ, ಕಛೇರಿಗೆ ಗಣಕಯಂತ್ರಗಳು ಹಾಗೂ ಇತರೆ ಉಪಕರಣಗಳ ಖರೀದಿ ್ಘ ಇತರೆ ರೂ. 34.50 ಲಕ್ಷಗಳು, ಹೈಮಾಸ್ಟ್‌ ವಿದ್ಯುತ್‌ದೀಪ, ಸೋಲಾರ್ ಮತ್ತು ಬೀದಿ ದೀಪಗಳ ಖರೀದಿಗಾಗಿ ರೂ. 69.25 ಲಕ್ಷಗಳು, ಸಾರ್ವಜನಿಕರ ಸಾಮೂಹಿಕ  ಶೌಚಾಲಯ  ನಿರ್ಮಾಣಕ್ಕೆ ರೂ. 25.00 ಲಕ್ಷಗಳು, ವಾಹನ ಖರೀದಿಗೆ ರೂ. 15.00 ಲಕ್ಷಗಳು ಕಟ್ಟಡ ದುರಸ್ತಿ ಮತ್ತು ನಿರ್ವಹಣೆಗಾಗಿ ರೂ. 10.00 ಲಕ್ಷಗಳು, ವಾಣಿಜ್ಯ ಮಳಿಗೆಗಳು, ಮಾರುಕಟ್ಟೆ   ಹಾಗೂ ಇತರೆ   ನಿರ್ಮಾಣಕ್ಕಾಗಿ  ರೂ. 55.00 ಲಕ್ಷಗಳು, ಇತರೆ ಸ್ಥಿರಾಸ್ತಿ ನಿರ್ಮಾಣಕ್ಕಾಗಿ  (ಪಟ್ಟಣದಲ್ಲಿ ಸ್ವಾಗತ ಕಮಾನು, ಮಾರ್ಗಸೂಚಿ ಫಲಕಗಳು, ಹಾಗೂ ಬಸ್ ಶೆಲ್ಟರ್‌ಗಳ, ಇತ್ಯಾದಿಗಳ ನಿರ್ಮಾಣಕ್ಕಾಗಿ) ರೂ22.50 ಲಕ್ಷಗಳು, ಘನತ್ಯಾಜ್ಯ ವಿಲೇವಾರಿ ಘಟಕ, ಶೂನ್ಯ ತ್ಯಾಜ್ಯ ಹಾಗೂ ಎರೆಹುಳು ಗೊಬ್ಬರ ಘಟಕಗಳ ನಿರ್ಮಾಣಕ್ಕಾಗಿ ರೂ. 115.00 ಲಕ್ಷಗಳು, ರಸ್ತೆ ಮತ್ತು ಚರಂಡಿ ದುರಸ್ಥಿ ಹಾಗೂ ನಿರ್ವಹಣೆಗಾಗಿ ರೂ. 50.00 ಲಕ್ಷಗಳು, ಬೀದಿ ದೀಪಗಳ ನಿರ್ವಾಹಣೆ ವೆಚ್ಚಕ್ಕಾಗಿ ರೂ. 42.00 ಲಕ್ಷಗಳು, ಬೀದಿ ದೀಪಗಳ ಸಾಮಗ್ರಿ ಖರೀದಿಗಾಗಿ ರೂ. 3.00 ಲಕ್ಷಗಳು, ವಾಹನಗಳಿಗೆ ಇಂಧನ ಹಾಗೂ ದುರಸ್ತಿ ವೆಚ್ಚ ರೂ 60.50 ಲಕ್ಷಗಳು, ಹೊರಗುತ್ತಿಗೆ ನೈರ್ಮಲೀಕರಣ ನಿರ್ವಹಣೆಗಾಗಿ ರೂ. 210.00 ಲಕ್ಷಗಳು, ಸ್ವಚ್ಚ ಭಾರತ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ರೂ. 25.00 ಲಕ್ಷಗಳು, ಹೊರಗುತ್ತಿಗೆ ನೀರು ಸರಬರಾಜು ನಿರ್ವಹಣೆ ಮತ್ತು ಇತರೆ ದುರಸ್ಥಿ ಕಾಮಗಾರಿಗಳಿಗೆ ರೂ. 122.00 ಲಕ್ಷಗಳು ಹಾಗೂ ನೀರು ಸರಬರಾಜು ಸಾಮಾಗ್ರಿಗಳನ್ನು ಖರೀದಿಸಲು ರೂ. 65.00 ಲಕ್ಷಗಳು, ನಗರದ ವಿವಿಧ ವಾರ್ಡಗಳಲ್ಲಿ ಕೋಬಲ್ ಸ್ಟೋನ್ ರಸ್ತೆ, ಆರ್‌.ಸಿ.ಸಿ. ರಸ್ತೆ, ಡಾಂಬರೀಕರಣ ರಸ್ತೆ, ರೂ. 350.00 ಲಕ್ಷಗಳು ಖರ್ಚು ಮಾಡಲಾಗುವದು 

ಹೊಸಗಟಾರಗಳು ಮತ್ತು ಒಳಚರಂಡಿ ಕಾಮಗಾರಿಗಳಿಗಾಗಿ ರೂ. 196.50 ಲಕ್ಷಗಳು, ಸಾರ್ವಜನಿಕ ಉದ್ಯಾನವನಗಳ ನಿರ್ವಹಣೆ ಮತ್ತು ದುರಸ್ಥಿಗಾಗಿ ರೂ. 10.00 ಲಕ್ಷಗಳು ಮತ್ತು ಹೊಸದಾಗಿ ಉದ್ಯಾನವನಗಳ ನಿರ್ಮಾಣಕ್ಕಾಗಿ ರೂ. 49.50 ಲಕ್ಷಗಳು, ನೈರ್ಮಲ್ಯ ಕಾಮಗಾರಿ ವಿಭಾಗಕ್ಕೆ ಯಂತ್ರೋಪಕರಣಗಳ ಖರೀದಿಗಾಗಿ ರೂ. 15.00 ಲಕ್ಷಗಳು, ನೈರ್ಮಲ್ಯ ವಿಭಾಗಕ್ಕೆ ಭಾರಿವಾಹನಗಳ ಖರೀದಿಗಾಗಿ ರೂ. 65.50 ಲಕ್ಷಗಳು, ಬರಪರಿಹಾರ ಅನುದಾನ ಹಾಗೂ ಇತರೆ ಅನುದಾಗಳಿಂದ ಬೋರ್‌ವೆಲ್, ಹೊಸ ಪೈಪ್‌ಲೈನ್ ಅಳವಡಿಕೆ, ಪಂಪ್‌ಹೌಸ್ ಅಭಿವೃದ್ದಿ ಹಾಗೂ ಕಿರು ನೀರು ಸರಬರಾಜು ವ್ಯವಸ್ಥೆಗಾಗಿ ರೂ. 201.00 ಲಕ್ಷಗಳು ಮತ್ತು ಪಂಪ್‌ಹೌಸ್‌ಗಳಿಗೆ ಯಂತ್ರ ಹಾಗೂ ಇತರೆ ಸಲಕರಣೆಗಳ ಖರೀದಿಗೆ  ರೂ. 10.00 ಲಕ್ಷಗಳು, ಶೇಕಡಾ 24.10ರ ಶೀರ್ಷಿಕೆಯಡಿ ನಗರಸಭಾ ನಿಧಿಯಿಂದ ರೂ. 6.20 ಲಕ್ಷಗಳು, ಸಮುದಾಯ ಭವನಗಳ ನಿರ್ಮಾಣಕ್ಕಾಗಿ ರೂ. 16.00 ಲಕ್ಷಗಳು, ವಾಜಪೇಯಿ ಯೋಜನೆ ಹಾಗೂ ಪ್ರಧಾನ ಮಂತ್ರಿ ಆವಾಸ ಯೋಜನೆಯಡಿ ರೂ. 10.00 ಲಕ್ಷಗಳು, ನಲ್ಮ್‌ ಯೋಜನೆಯಡಿಯಲ್ಲಿನ ಕಾರ್ಯಗಳಿಗೆ ರೂ. 15.00 ಲಕ್ಷಗಳು, ನಗರಸಭಾ ಸದಸ್ಯರುಗಳ ಗೌರವಧನ, ಸರ್ಕಾರದಿಂದ ಆಯೋಜಿಸಿದ ತರಬೇತಿಗಳಿಗೆ  ಮತ್ತು ವಾಹನ ಬಾಡಿಗೆ ವೆಚ್ಚಕ್ಕಾಗಿ ರೂ. 20.75 ಲಕ್ಷಗಳು, ವಿದ್ಯುತ್ ದೀಪ ಹಾಗೂ ನೀರುಸರಬುರಾಜು ವಿಭಾಗದ ವಿದ್ಯುತ್ ಬಿಲ್ಲು ರೂ. 300.00 ಲಕ್ಷಗಳು, ನಗರಸಭೆ ಅಧಿಕಾರಿ ಮತ್ತು ಸಿಬ್ಬಂದಿಗಳ ವೇತನ ಮತ್ತು ಭತ್ಯೆಗಳ ಪಾವತಿಗಾಗಿ ರೂ. 280.00 ಲಕ್ಷಗಳನ್ನು ಅಳವಡಿಸಿಕೊಳ್ಳಲಾಗಿದೆ ಎಂದು ಹೇಳಿದರು. 

ಈ ಸಂದರ್ಭದಲ್ಲಿ ನಗರಸಭೆಯ ಪೌರಾಯುಕ್ತ ಶಿವಪ್ಪ ಅಂಬಿಗೇರ, ಭಾರತಿ ಜೋಶಿ,ಎಂ.ಆರ್‌.ನದಾಫ್,ವಿ.ಎಸ್‌.ನಂದಿ ಸೇರಿದಂತೆ ಇತರರು ಇದ್ದರು.

ಸುದ್ದಿ ಓದಿ