ನಗರಸಭೆಯ ಅಧ್ಯಕ್ಷ ಕುಸ್ತಿ ಅಖಾಡಕ್ಕೆ ಇಳಿದರೆ ಜಯ ಕಟ್ಟಿಟ್ಟ ಬುತ್ತಿ
ವಿಶೇಷ ವರದಿ : ವಿಜಯ ಪವಾರ
ಮುಧೋಳ : ಕಳೆದ ಬಾರಿ ನಗರಸಭೆಯ ಚುನಾವಣೆ ನಡೆದರು ಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿಯ ಪಟ್ಟಿ ಬಿಡುಗಡೆಯಾಗದ ಕಾರಣ ಸುಮಾರು ಎರಡು ವರ್ಷಗಳ ನಂತರವೇ ಅಧ್ಯಕ್ಷ ಗಾದಿಯನ್ನು ಸದಸ್ಯರು ಏರಬೇಕಾಯಿತು ರನ್ನನ ನಾಡು ಎಂದು ಕರೆಯಲಾಗುವ ಡಿಸಿಎಂ ಗೋವಿಂದ ಕಾರಜೋಳರ ಮತಕ್ಷೇತ್ರದಲ್ಲಿ ಬಿಜೆಪಿಯೇ ಅಧ್ಯಕ್ಷ ಗಾದಿಯನ್ನು ಏರಿದ್ದು ಒಂದೆಡೆಯಾದರೆ ಈ ಅಧ್ಯಕ್ಷರ ಸಾಲಿನಲ್ಲಿ ಬೇರೆ ಬೇರೆ ಸದಸ್ಯರ ಹೆಸರುಗಳು ಕೇಳಿಬಂದಿದ್ದವೂ ಗುರುಪಾದ ಕುಳಲಿಯವರು ಅಧ್ಯಕ್ಷರಾಗುತ್ತಾರೆ ಎಂಬ ಮಾತುಗಳ ಮಧ್ಯೆಯೇ ಅಧ್ಯಕ್ಷರಾದವರು ಮುಧೋಳದ ಪ್ರತಿಭಾನ್ವಿತ ಸಾಧಕ.
ಕುಸ್ತಿಯಲ್ಲಿ ಜಗಜಟ್ಟಿ ಮಲ್ಲನಾಗಿ ಮುಧೋಳದ ಕೀರ್ತಿ ಪತಾಕೆಯನ್ನು ಹಾರಿಸಿದ ಸಾಧಕ ಕಡಿಮೆ ವಯಸ್ಸಿನಲ್ಲಿಯೇ ಮುಧೋಳದ ನಗರಸಭೆಯ ಅಧ್ಯಕ್ಷರಾಗಿದ್ದಾರೆ ಬಿಜೆಪಿಯ ತತ್ವ ಸಿದ್ಧಾಂತ ಜೊತೆಗೆ ಕಟ್ಟಾ ಬಿಜೆಪಿಯ ಕಾರ್ಯಕರ್ತನಾಗಿ ತಮ್ಮ ತಂದೆ ಹೇಳಿದ ಮಾತು ನುಡಿಗಳನ್ನು ಚಾಚು ತಪ್ಪದೇ ಮಾಡುವ ಕರ್ನಾಟಕ ಕಂಠೀರವ ಕರ್ನಾಟಕ ಕೇಸರಿ ಬಿರುದುಗಳನ್ನು ಕುಸ್ತಿಯಲ್ಲಿ ಪಡೆದಂತಹ ಮುಧೋಳ ಸೇರಿದಂತೆ ಕರ್ನಾಟಕವೇ ಹೆಮ್ಮೆ ಪಡುವ ಕುಸ್ತಿ ಪಟು ಸಿದ್ದನಾಥ (ಸಂಜು) ದಾದಾಸಾಹೇಬ ಮಾನೆ.
ಮೂಲತಃ ಕುಸ್ತಿ ಕುಟುಂಬದಲ್ಲಿಯೇ ಬೆಳೆದಂತಹ ಸಂಜು ಅವರ ತಂದೆಯವರಾದ ದಾದಾಸಾಹೇಬ ಮಾನೆ ಅವರು ಸಹ ಪೈಲ್ವಾನರು ಇನ್ನೂ ಸಂಜುರವರ ಅಜ್ಜ ಬಾಬುರಾವ್ ಮಾನೆ ಮುತ್ತಜ್ಜ ಅಣ್ಣಪ್ಪ ಮಾನೆ ಚಿಕ್ಕಪ್ಪಂದಿರಾದ ಮಾರುತಿ ಮಾನೆ ಶಿವಾಜಿ ಮಾನೆ ಹೀಗೆ ಕುಸ್ತಿ ಪ್ರೇಮದ ಕುಟುಂಬದಲ್ಲಿ ಬೆಳೆದು ಬಂದ ಬಿಜೆಪಿಯ ನಾಯಕ ಇಂದು ಮುಧೋಳ ನಗರಸಭೆಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಸಿದ್ಧನಾಥ ಮಾನೆಯವರು.
ಈಗಲೂ ಎಲ್ಲಿಯಾದರೂ ಕುಸ್ತಿಗಳು ನಡೆಯುತ್ತಿದರೆ ಅಲ್ಲಿ ಭಾಗವಹಿಸಿ ಬಹುಮಾನವನ್ನು ತರುವ ಸಂಜುಯವರ ಸಹೋದರ ಮಂಜುನಾಥ ಮಾನೆ ಸಹ ಹೆಸರಾಂತ ಕುಸ್ತಿ ಪಟು ಅಂತಾ ಹೇಳಬಹುದು. ಎರಡು ಬಾರಿ ಕರ್ನಾಟಕ ಕೇಸರಿ ಒಂದು ಬಾರಿ ಕರ್ನಾಟಕ ಕಂಠೀರವ 5 ಬೆಳ್ಳಿಯ ಗದೆ 50ಕ್ಕೂ ಹೆಚ್ಚು ಪದಕಗಳನ್ನು ಕುಸ್ತಿಯಲ್ಲಿ ಗೆದ್ದಿರುವ ಸಿದ್ಧನಾಥ ಮಾನೆಯವರಿಗೆ ಕ್ರೀಡಾಸಕ್ತಿ ಎಂದರೆ ಎಲ್ಲಿಲ್ಲದ ಪ್ರೀತಿ ಅಭಿಮಾನ ಗೌರವ ಅದೇ ರೀತಿಯಾಗಿ ಕ್ರೀಡಾ ಹುಡುಗರಿಗೂ ತಮಗೆ ತಿಳಿದಂತಹ ಮಾರ್ಗದರ್ಶನವನ್ನು ಸಹ ಮಾಡುತ್ತಾರೆ ಸದ್ಯ ರಾಜಕೀಯ ನಗರಸಭೆ ಅಧ್ಯಕ್ಷ ಹೀಗೆ ಜಂಜಾಟಗಳಲ್ಲಿ ಸಿಲುಕಿದಾಗ ಕುಸ್ತಿಯ ತಾಲಿಮು ಕಡಿಮೆಯಾಗುತ್ತದೆ ಆದರೆ ಎಲ್ಲೇ ಕುಸ್ತಿ ಇರಲಿ ಅಲ್ಲಿ ಹೋಗಿ ಭಾಗವಹಿಸುತ್ತೇನೆ ಎಂದು ಮೃದು ಮಾತುಗಳೊಂದಿಗೆ ಸಂಜುರವರು ಭಾರತ ವೈಭವ ಪತ್ರಿಕೆಗೆ ಕುಸ್ತಿಯಲ್ಲಿ ಅವರು ನಡೆದು ಬಂದ ದಾರಿಯನ್ನು ವಿವರಿಸುತ್ತಾರೆ.
ನೂರಾರು ಕುಸ್ತಿಯಲ್ಲಿ ಎದುರಾಳಿಗೆ ಮಣ್ಣು ಮುಕ್ಕಿಸಿ ಬಂದಂತಹ ಕೀರ್ತಿ ಸಿದ್ಧನಾಥ ಮಾನೆಯವರಿಗೆ ಸಲ್ಲುತ್ತದೆ ಮ್ಯಾಟ್ ಮೇಲಿನ ಕುಸ್ತಿ ಮಣ್ಣಿನ ಕುಸ್ತಿಯಲ್ಲಿ ಸೈ ಎನಿಸಿಕೊಂಡ ಸಿದ್ಧನಾಥರವರು ಕರ್ನಾಟಕ ಮಹಾರಾಷ್ಟ್ರ ಹರಿಯಾಣ ಸೇರಿದಂತೆ ಹಲವಾರು ಕಡೆಗಳಲ್ಲಿ ತಮ್ಮಯ ಸಾಧನೆಯನ್ನು ತೋರಿದ್ದಾರೆ ಕೋಲ್ಹಾಪೂರದ ಗಂಗಾವೇಸ್ ನಲ್ಲಿ ಕುಸ್ತಿಯ ತಾಲೀಮು ತರಬೇತಿ ಪಡೆದು ಹೊರಹೊಮ್ಮಿದ ಕುಸ್ತಿ ಪಟು ಸಂಜು ಅಖಾಡಕ್ಕೆ ಇಳಿದರೆ ಜಯ ನಿಶ್ಚಿತ.
ಮುಧೋಳ ನಾಯಿಗೆ ಜನಪ್ರೀಯತೆ ಹೇಗೆ ಪಡೆದಿದೆಯೋ ಹಾಗೇ ಕುಸ್ತಿ ಅಖಾದ ಪ್ರತಿಭೆಗಳಿಂದಲೂ ರಾಜ್ಯದ ಉದ್ದಗಲಕ್ಕೂ ಹೆಸರುವಾಸಿಯಾಗಿದೆ ಒಟ್ಟಾರೆಯಾಗಿ ಮುಧೋಳ ನಗರಸಭೆಯ ನನ್ನ ಅಧ್ಯಕ್ಷ ಅವಧಿಯಲ್ಲಿ ನಗರಕ್ಕೆ ಏನಾದರೂ ಹೊಸತನವನ್ನು ಬಡವರ ಕಷ್ಟಗಳಿಗೆ ಸ್ಪಂಧಿಸುವದರೊಂದಿಗೆ ಜನುಪಯೋಗಿ ಹೊಸ ಯೋಜನೆಗಳನ್ನು ಬಡವರಿಗೆ ನೀಡುವ ಭರವಸೆಯ ಮಾತುಗಳನ್ನಾಡುವ ಪೈಲ್ವಾನ್ ಸಂಜು ದಾದಾರವರ ಎಲ್ಲಾ ಕನಸ್ಸುಗಳು ಈಡೇರಲಿ ಅವರಲ್ಲಿನ ಕುಸ್ತಿಯ ಪ್ರೇಮ ಕುಸ್ತಿಯ ಕಲೆಯಲ್ಲಿ ಇನ್ನೂ ಹೆಚ್ಚಿನ ಸಾಧನೆಗಳನ್ನು ಮಾಡಲಿ ಇನ್ನಷ್ಟೂ ಕುಸ್ತಿಗಳಲ್ಲಿ ಜಯಶಾಲಿಯಾಗಲಿ ಸಂಜು ರವರು ಮತ್ತೇ ಪೈಲ್ವಾನ ಅಖಾಡಕ್ಕೆ ಇಳಿಯಲಿ ಅವರ ಸಾಧನೆ ಉತ್ತುಂಗವಾಗಲಿ ಎಂಬುವುದೇ ಮುಧೋಳ ಕುಸ್ತಿ ಪ್ರೇಮಿಗಳ ಆಶಯವಾಗಿದೆ ಇವರ ಒಟ್ಟಾರೆಯ ಸಾಧನೆಗೆ ನಾವೂ ಕೂಡ ಶುಭ ಹಾರೈಸುತ್ತಾ ತೊದಲು ಬರಹದೊಂದಿಗೆ ವಿಜಯ ಪವಾರ - ಹುನ್ನೂರ.
ಸಿದ್ಧನಾಥ ಮಾನೆಯವರು ಕುಸ್ತಿಯಲ್ಲಿ ಅನೇಕ ಸಾಧನೆಗಳನ್ನು ಮಾಡಿದಂತಹ ಪ್ರತಿಭಾನ್ವಿತ ಕುಸ್ತಿ ಪಟು ಮುಧೋಳ ತಾಲೂಕಿನ ಕೀರ್ತಿ ಎಲ್ಲೆಡೆ ಪಸರಿಸಿದಂತಹ ಅಪ್ಪಟ್ಟ ಕುಸ್ತಿ ಪ್ರೇಮಿ ಹಾಗೂ ಕಲುಸ್ತಿ ಕುಟುಂಬದಿಂದ ಬಂದಂತಹ ಉತ್ಸಾಹಿ ಯುವಕ ನಮ್ಮ ಭಾಜಪ ಪಕ್ಷದಿಂದ ಇಂದು ನಗರಸಭೆಯ ಅಧ್ಯಕ್ಷರಾಗಿದ್ದು ಸಂತಸವೇನಿಸುತ್ತದೆ ಇವರ ಸಾಧನೆ ಇತರ ಪೈಲ್ವಾನರಿಗೂ ಮಾದರಿದಾಯಕ ಇವರ ಇನ್ನಷ್ಟೂ ಕನಸ್ಸುಗಳು ನನಸಾಗಲಿ.
ಅರುಣ ಗೋವಿಂದ ಕಾರಜೋಳ
ಭಾಜಪ ಯುವ ಧುರೀಣರು
ಸಂಜುರವರು ಅಧ್ಯಕ್ಷರಾದ ನಂತರ ಅನೇಕ ಸಮಸ್ಯೆಗಳಿಗೆ ಬೆಳಕು ಚೆಲ್ಲುವ ಕಾರ್ಯದಲ್ಲಿ ತೊಡಗಿದ್ದಾರೆ ಅವರು ಒಬ್ಬರು ಕುಸ್ತಿ ಪಟು ಎಂಬುವುದು ನಮ್ಮಯ ಹೆಮ್ಮೆ ಕುಸ್ತಿಯ ಬಗ್ಗೆ ಎಷ್ಟು ಹೆಮ್ಮೆ ಅವರಲ್ಲಿ ಇದೇಯೋ ಅಷ್ಟೇ ಮುಧೋಳ ನಗರದ ಬಗ್ಗೆ ಅವರಿಗೆ ಹೆಮ್ಮೆ ಇದೆ ಜೊತೆಗೆ ನಗರ ಅಭಿವೃದ್ಧಿಗೆ ಬಹಳಷ್ಟು ಇತ್ಸುಕರಾಗಿದ್ದಾರೆ. ನಗರಕ್ಕೆ ಸಂಬಂಧಿದಂತೆ ಯಾವುದೇ ಕೆಲಸಗಳಿದ್ದರು ಮುಂದೆ ನಿಂತು ಮಾಡುತ್ತಾರೆ ಯಾವುದೇ ನೌಕರರ ಮೇಲೆ ಸಿಟ್ಟಾಗದೇ ತಿಳಿ ಹೇಳಿ ಜನರ ಕಷ್ಟಗಳಿಗೆ ಕೂಡಲೇ ಸ್ಪಂಧಿಸುವಂತಹ ವ್ಯಕ್ತಿ ಸಿದ್ಧನಾಥ ಮಾನೆ.
ಸುನೀಲ್ ಪಾಟೀಲ್
ನಗರಸಭೆ ಕಮೀಷನರ್ ಮುಧೋಳ