ಮುಂಡರಗಿ ಶ್ರೀಗಳಿಗೆ ಕರ್ನಾಟಕ ರತ್ನ ಪ್ರಶಸ್ತಿ ಸಿಗಲಿ
ಕುಕನೂರ 05: ಕನ್ನಡ ನಾಡಿನ ಅಕ್ಷರ ಸಂತ ಮುಂಡರಗಿಯ ಶ್ರೀ ಜಗದ್ಗುರು ಅನ್ನದಾನೀಶ್ವರ ಮಹಾಶಿವಯೋಗಿಗಳಿಗೆ ಕರ್ನಾಟಕ ಸರ್ಕಾರ ತನ್ನ ಅತ್ಯುನ್ನತ ಪ್ರಶಸ್ತಿಯಾದ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಬೇಕೆಂದು ಪಟ್ಟಣದ ಮುಸ್ಲಿಂ ಸಮಾಜದ ಹಿರಿಯ ಅಬ್ದುಲ್ ಸಾಬ್ ತಳಕಲ್ ಹೇಳಿದರು.
ಪಟ್ಟಣದ ಅನ್ನದಾನೀಶ್ವರ ಮಠದಲ್ಲಿ ಬಸವ ಜಯಂತಿ, ಶ್ರೀಮಠದ ಪೂಜ್ಯರಾದ ಶ್ರೀ ಮನಿಪ್ರ ಜಗದ್ಗುರು ಡಾ. ನಾಡೋಜ ಅನ್ನದಾನೀಶ್ವರ ಮಹಾಶಿವಯೋಗಿಗಳ 81ನೇ ಹುಟ್ಟುಹಬ್ಬ ಮತ್ತು 171ನೇ ಶಿವಾನುಭವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಮುಂಡರಗಿ ಶ್ರೀಗಳು ಈ ನಾಡು ಕಂಡ ಶ್ರೇಷ್ಸಾಹಿತಿಗಳು ಮತ್ತು ಸಮಾಜ ಸುದಾರಕರಾಗಿ ಸರ್ವ ಜನಾಂಗವನ್ನ ಅಪ್ಪಿಕೊಂಡ ಆಧುನಿಕ ಬಸವಣ್ಣ, ಇಂತಹ ಪೂಜ್ಯರನ್ನ ಸರ್ಕಾರ ಗುರುತಿಸಿ ಗೌರವಿಸಬೇಕೆಂದರು.
ನಂತರ ಮಾತನಾಡಿದ ಕಸಾಪ ಕುಕನೂರ ತಾಲೂಕ ಅಧ್ಯಕ್ಷ ಕಳಕಪ್ಪ ಕುಂಬಾರ ಬಸವಣ್ಣನವರ ವಿಚಾರದಾರೆಗಳನ್ನ ಎಲ್ಲಾರು ಒಪ್ಪಿಕೊಂಡು ಅದರಂತೆ ನಡೆದಾಗ ಮಾತ್ರ ನಮ್ಮ ಬದುಕು ಸುಂದರವಾಗಲಿದೆ, ಸಮಾನತೆ ಸಂದೇಶವನ್ನ ಈ ನಾಡಿಗೆ ಸಾರಿದ ಬಸವಣ್ಣ ಸರ್ವ ಸಮಾಜದ ಅಭಿವೃದ್ದಿಗೆ ಶ್ರಮಿಸಿದವರು ಮತ್ತು ಮುಂಡರಗಿ ಶ್ರೀಗಳು ಕೂಡ ಈ ನಾಡಿಗೆ ಅಮೂಲ್ಯವಾದ 250 ಕ್ಕೂ ಹೆಚ್ಚು ಗ್ರಂಥಗಳನ್ನ ನೀಡಿ ಅಕ್ಷರ ಸಂತರಾದವರು ಎಂದರು.
ಪೂಜ್ಯ ಮಹಾದೇವ ದೇವರು ಮಾತನಾಡಿ ಶ್ರೀಗಳ ಹುಟ್ಟುಹಬ್ಬ ಅಂಗವಾಗಿ ಒಂದು ಜೋಡಿ ಮದುವೆ ಮದುವೆ ಕೂಡ ಮಾಡಿದ್ದು ಅತ್ಯಂತ್ಯ ಸಂತೋಷ ತಂದಿದೆ ಶ್ರೀ ಭಕ್ತರ ಪ್ರೀತಿ ದೊಡ್ಡದು ಅವರ ಮಾಡುವ ದಾನ ಧರ್ಮದ ಕಾರ್ಯಗಳನ್ನ ಕಂಡಾಗ ಇನ್ನಷ್ಟು ಅಭಿವೃದ್ದಿ ಕಾರ್ಯಗಳನ್ನ ಮಾಡಲಿಕ್ಕೆ ಹರ್ಷವೆನಿಸುತ್ತದೆ ಮತ್ತು ಒಂದು ವರ್ಷದಿಂದ ನಿಂತಿದ್ದ ಶಿವಾನುಭ ಕಾರ್ಯಕ್ರಮವನ್ನ ಮತ್ತೇ ಚಾಲನೆ ನೀಡಲಿಕ್ಕೆ ಕಾರಣೀಭೂತರಾದವರೆಗೆ ಅಭಿನಂದನೆಗಳು ಎಂದರು.
ಈ ಸಂಧರ್ಭದಲ್ಲಿ ಬೆಳಿಗ್ಗೆ ಶ್ರೀಮಠದ ಗದ್ಗುಗೆಗೆ ರುದ್ರಾಭೀಷೇಕವನ್ನ ಜಗದೀಶಯ್ಯ ಕಳ್ಳಿಮಠ, ನೀಲಕಂಠಯ್ಯ ಕಾಶೀಮಠ ನೇರವೇರಿಸಿದವರು, ನಂತರ ಮಹಾದಾಸೋಹ ಜರುಗಿತು.
ವೀರಯ್ಯ ತೋಂಟದಾರ್ಯಮಠ, ಗದಿಗೆಪ್ಪ ಪವಾಡಶೆಟ್ಟಿ, ವಿ ಜಿ ಬಳಗೇರಿ, ಈರಪ್ಪ ಮ್ಯಾಳಿ, ರಾಮಣ್ಣ ಬೆದವಟ್ಟಿ, ಮೇಘರಾಜ ಜಿಡಗಿ, ಶೇಖಪ್ಪ ಶೀರೂರ, ಪ್ರಭಯ್ಯ ಸೊಪ್ಪಿಮಠ, ಖಾದರಸಾಬ್, ವೀರಭದ್ರಪ್ಪ ಸುಂಕದ, ಸಿದ್ದಮ್ಮ, ಪಾರಮ್ಮ ಕಲ್ಲೂರು, ಶರಣಪ್ಪ ಮಳಿಗಿ ಮತ್ತು ಇತರರು ಇದ್ದರು.