ಮನೆ ಮನೆ ಭೇಟಿ ನೀಡಿ ಇ ಕೆವೈಸಿ ಪ್ರಕ್ರಿಯೆ ನಡೆಸಿದ ಮುಂಡರಗಿ ತಾಪಂ
Mundaragi Municipal Corporation conducted e-KYC process through door-to-door visits
ಮನೆ ಮನೆ ಭೇಟಿ ನೀಡಿ ಇ ಕೆವೈಸಿ ಪ್ರಕ್ರಿಯೆ ನಡೆಸಿದ ಮುಂಡರಗಿ ತಾಪಂ
ಮುಂಡರಗಿ 08 : ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿ ಕೆಲಸ ಮಾಡುತ್ತಿರುವ ಕೂಲಿಕಾರರಿಗೆ ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದಿಂದ ಇ-ಕೆವೈಸಿ ಕಡ್ಡಾಯವಾಗಿರುವ ಹಿನ್ನೆಲೆ ಇಂದು ತಾಪಂ ಇಓ ವಿಶ್ವನಾಥ ಹೊಸಮನಿ ಕೊರ್ಲಹಳ್ಳಿ ಗ್ರಾಪಂ ವ್ಯಾಪ್ತಿಯ ಬೆಣ್ಣಿಹಳ್ಳಿ ಗ್ರಾಮದ ಮನೆಮನೆಗಳಿಗೆ ಭೇಟಿ ನೀಡಿ ಇ-ಕೆವೈಸಿ ಪ್ರಕ್ರಿಯೆಯನ್ನು ಖುದ್ದು ಅವರೇ ನಿರ್ವಹಿಸಿದರು. ನರೇಗಾ ಯೋಜನೆಯ ವಿಶ್ವಾಸಾರ್ಹತೆ ಹಾಗೂ ಪಾರದರ್ಶಕತೆ ಹೆಚ್ಚಿಸುವ ನಿಟ್ಟಿನಲ್ಲಿ ಇ ಕೆವೈಸಿ ಪ್ರಕ್ರಿಯೆ ಪೂರ್ಣಗೊಂಡರೆ ಕೂಲಿ ಪಾವತಿಗೆ ವೇಗ ಸಿಗಲಿದೆ.
ಈ ಪ್ರಕ್ರಿಯೆಯಲ್ಲಿ ಫೇಸ್ ಅಥೆಂಟಿಕೇಶನ್ ಮೂಲಕ ಮಾಹಿತಿಯನ್ನು ನಿಖರವಾಗಿ ದಾಖಲಿಸಬಹುದು. ಕಾಮಗಾರಿ ನಂತರ ಕೂಲಿಕಾರರ ಪೋಟೊ ಮತ್ತವರ ಆಧಾರ್ ಸಂಖ್ಯೆಯೊಂದಿಗೆ ಹಾಜರಾತಿ ದೃಢೀಕರಣವು ನಡೆಯಲಿದೆ.ಎನ್ ಎಂಎಂಎಸ್ (ನ್ಯಾಷನಲ್ ಮೋಬೈಲ್ ಮಾನಿಟರಿಂಗ್ ಸಿಸ್ಟಂ) ಇ ಕೆವೈಸಿ ಪ್ರಕ್ರಿಯೆ ನರೇಗಾ ಕೂಲಿಕಾರರಿಗೆ ಕಡ್ಡಾಯವಾಗಿದ್ದು, ಮುಂಡರಗಿ ತಾಲೂಕಿನಲ್ಲಿ ಈ ಪ್ರಕ್ರಿಯೆ ಜಾರಿಯಲ್ಲಿದೆ. ಇದನ್ನು ತೀವ್ರತರದಲ್ಲಿ ಪ್ರಗತಿ ಸಾಧಿಸುವ ನಿಟ್ಟಿನಲ್ಲಿ ತಾಪಂ ಇಓ ವಿಶ್ವನಾಥ ಅವರು, ಬೆಣ್ಣಿಹಳ್ಳಿ ಗ್ರಾಮದ ನರೇಗಾ ಕೂಲಿಕಾರರ ಮನೆಮನೆಗೆ ಭೇಟಿ ನೀಡಿ ಖುದ್ದು ತಾವೇ ಮೋಬೈಲ್ ಮೂಲಕ ಪ್ರಕ್ರಿಯೆಯನ್ನು ನಿರ್ವಹಿಸಿದರು. ನರೇಗಾ ಯೋಜನೆ ಮೂಲಕ ಗ್ರಾಮೀಣ ಜನರಿಗೆ, ಕೂಲಿಕಾರರಿಗೆ 100 ದಿನಗಳ ಉದ್ಯೋಗ ಖಾತ್ರಿಯಾಗಿದ್ದು, ಪಾರದರ್ಶಕತೆಯಿಂದ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಮಹತ್ವಾಕಾಂಕ್ಷಿ ಯೋಜನೆಯ ಕಾಮಗಾರಿಗಳ ಸಮರ್ಕ ಅನುಷ್ಟಾನದ ಜೊತೆಗೆ ಪಾರದರ್ಶಕ ಹಾಜರಾತಿಗೆ ಇ ಕೆವೈಸಿ ವಿಧಾನ ವರದಾನವಾಗಿದೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 