ಮಾದರಿ ಹುಟ್ಟುಹಬ್ಬ ಆಚರಿಸಿಕೊಂಡ ಕುಕನೂರ ಶ್ರೀ
ಕುಕನೂರ 01 : ಕುಕನೂರ ಪೂಜ್ಯರ ಸಾಮಾಜಿಕ ಕಳಕಳಿ, ನೊಂದವರ ಬೆಂದವರ ಕಲ್ಯಾಣ ಮಾಡುವ ಮೂಲಕ ಹುಟ್ಟುಹಬ್ಬ ಆಚರಿಸಿಕೊಂಡ ಅವರ ಕಾರ್ಯ ಶ್ಲಾಘನೀಯ ಎಂದು ಹಿರಿಯ ಪತ್ರಕರ್ತ, ಸಾಹಿತಿಗಳಾದ ಜಿ ಎಸ್ ಗೋನಾಳ ಹೇಳಿದರು.
ಅವರು ಪಟ್ಟಣದ ಅನ್ನದಾನೀಶ್ವರ ಮಠದಲ್ಲಿ ಪೂಜ್ಯ ಮಹಾದೇವ ದೇವರ 33 ನೇ ಹುಟ್ಟುಹಬ್ಬ, ಪುನೀತ ರಾಜಕುಮಾರ ಅವರ ಪ್ರಥಮ ಮತ್ತು ರೇಹಮಾನವ್ವ ನವರ 29 ನೇ ಪುಣ್ಯಸ್ಮರಣೆ ಅಂಗವಾಗಿ ಸಾಮೂಹಿಕ ಮದುವೆ, ಅಪ್ಪು ಸಮಾಜ ಸೇವಾ ರತ್ನ ಪ್ರಶಸ್ತಿ ಪ್ರದಾನ ಹಾಗೂ ಕುಕನೂರ ಪತ್ರಿಕೆ ಬಿಡುಗಡೆ ಸಾಂಸ್ಕೃತಿಕದಲ್ಲಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಪೂಜ್ಯರು ತಮ್ಮ ಹುಟ್ಟುಹಬ್ಬದ ನೆನಪಲ್ಲಿ 46 ಜನ ಸಾಧಕರನ್ನ ಗೌರವಿಸಿ, ಬಡ ಮಕ್ಕಳ ಮದುವೆಗಳನ್ನ, ನೂರಾರು ವಿದ್ಯಾರ್ಥಿಗಳಿಗೆ ಪುಸ್ತಕ ಪೆನ್ ನೀಡುವ ಮೂಲಕ ಹಲವಾರು ಕಾರ್ಯಕ್ರಮಳನ್ನ ಆಯೋಜನೆ ಮಾಡಿ ವಿಶಿಷ್ಟ ರೀತಿಯಲ್ಲಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದು ಮಾದರಿಯಾಗಿದೆ ಎಂದರು.
ಉದ್ಘಾಟನೆ ಮಾಡಿ ಮಾತನಾಡಿದ ಮುಖಂಡ ಕಳಕಪ್ಪ ಕಂಬಳಿ ನಮ್ಮ ಬದುಕು ನಾಲ್ಕು ಜನರಿಗೆ ಪ್ರೇರಣೆಯಾಗಬೇಕು, ಇನ್ನೊಬ್ಬರ ಕಷ್ಟ ಸುಖಗಳಿಗೆ ನಾವು ಬಾಗಿಯಾಗಬೇಕು ಧರ್ಮ ಕಾರ್ಯಗಳಿಗೆ ನಾವು ತನು ಮನ ಧನದಿಂದ ಸೇವೆ ಮಾಡಬೇಕು, ಹಣದಿಂದ ಶ್ರೀಮಂತರಾಗುವದಕ್ಕಿಂತ ಸಂಸ್ಕಾರದಿಂದ ಶ್ರೀಮಂತನಾಗಬೇಕು ದಿ ಪುನೀತರಾಜಕುಮಾರ ಅವರ ಸೇವೆಯನ್ನ ನಾವೆಲ್ಲ ಸ್ಮರಣೆ ಮಾಡಬೇಕು ಎಂದರು.
ವೀರಯ್ಯ ತೋಂಟದಾರ್ಯಮಠ ಮಾತನಾಡಿ ನಮ್ಮ ಪೂಜ್ಯರ ಕಾರ್ಯಗಳು ನಮಗೆ ಪ್ರೇರಣೆ, ಅವರಲ್ಲಿರುವ ಬಡವರ ಕಾಳಜಿ, ನಿರಂತರ ಸಾಮಾಜಿಕ ಧಾರ್ಮಿಕ ಕಾರ್ಯಕ್ರಗಳ ಆಯೋಜನೆ ನೋಡಿದಾಗ ಪೂಜ್ಯರ ಬಗ್ಗೆ ಹೆಮ್ಮೆ ಎನಿಸುತ್ತದೆ ಮತ್ತು ನಮ್ಮ ನಾಡಿಗೆ ರೆಹಮಾನವ್ವ ಕಲ್ಮನಿ ಅವರ ಕಲಾ ಸೇವೆಯನ್ನ ನಮ್ಮೂರಿನ ಜನ ಸ್ಮರಣೆ ಮಾಡಬೇಕು ಎಂದರು.
ಗದಿಗೆಪ್ಪ ಪವಾಡಶೆಟ್ಟಿ, ಬಾಬಣ್ಣ ಕಲ್ಮನಿ, ಸಾಧಿಕ್ ಅಲಿ, ಬಸವರಾಜ ಗುಡ್ಲನೂರ, ಅನಿಲ್ ಆಚಾರ, ಈರಪ್ಪ ಕುಡಗುಂಟಿ, ಚಂದ್ರಶೇಖರಯ್ಯ ಬಾನಾಪುರ, ಪ್ರಭಯ್ಯ ಕಲ್ಲೂರು, ಬಿ ಎನ್ ಹೊರಪೇಟೆ, ಅಂದಪ್ಪ ಇಟಗಿ, ಚಿನ್ನಪ್ಪ ಶಿರೂರ, ಬಸವರಾಜ ಕೊಡ್ಲಿ, ಮೇಘರಾಜ ಜಿಡಗಿ, ಸಂಗಮೇಶ ಕಲ್ಮಠ, ಯಲ್ಲಪ್ಪ ಹೊಸಮನಿ, ಜಗದೀಶಯ್ಯ ಕಳ್ಳಿಮಠ ಮತ್ತು ಪ್ರಭು ಶಿವಶಿಂಪರ ಇತರರು ಇದ್ದರು.