ಅಂತರರಾಷ್ಟ್ರೀಯ

ಅಮೆರಿಕದಲ್ಲಿ ಮೊದಲ ಬಾರಿಗೆ ಮಕ್ಕಳಲ್ಲಿ ಮಂಕಿಪಾಕ್ಸ್! ಇದುವರೆಗೆ ವಿಶ್ವದಾದ್ಯಂತ 13 ಸಾವಿರಕ್ಕೂ ಹೆಚ್ಚು ಕೇಸ್

ಅಮೆರಿಕದಲ್ಲಿ ಮೊದಲ ಬಾರಿಗೆ ಮಕ್ಕಳಲ್ಲಿ ಮಂಕಿಪಾಕ್ಸ್! ಇದುವರೆಗೆ ವಿಶ್ವದಾದ್ಯಂತ 13 ಸಾವಿರಕ್ಕೂ ಹೆಚ್ಚು ಕೇಸ್

ವಾಷಿಂಗ್ಟನ್: ಜುಲೈ 23: ಭಾರತದ ನಂತರ ಅಮೆರಿಕದಲ್ಲಿ ಮೊದಲ ಬಾರಿಗೆ ಮಂಕಿಪಾಕ್ಸ್ ದೃಢಪಟ್ಟಿದೆ. ಇಲ್ಲಿನ ಇಬ್ಬರು ಮಕ್ಕಳಲ್ಲಿ ಸೋಂಕು ಪತ್ತೆಯಾಗಿದೆ. ಕ್ಯಾಲಿಫೋರ್ನಿಯಾದಲ್ಲಿ ಒಂದು ಮಗು, ಶಿಶುವಿನಲ್ಲಿ ಮಂಕಿಪಾಕ್ಸ್ ಅನ್ನು ಗುರುತಿಸಲಾಗಿದೆ ಎಂದು ಯುಎಸ್ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಇಬ್ಬರೂ ಅಮೆರಿಕದ ನಿವಾಸಿಗಳಲ್ಲ.

ಭಾರತದಲ್ಲಿ ಇದುವರೆಗೆ 3 ಪ್ರಕರಣ:
ಕೇರಳದಲ್ಲಿ ಮಂಕಿಪಾಕ್ಸ್ ಮೂರನೇ ಪ್ರಕರಣ ವರದಿಯಾಗಿದೆ. ಈ ಹಿಂದೆ ಪತ್ತೆಯಾದ ಸೋಂಕಿತರಂತೆ ಈ ವ್ಯಕ್ತಿಯೂ ಯುಎಇಯಿಂದ ಮರಳಿದ್ದಾರೆ. ದೇಶದಲ್ಲಿ ಈವರೆಗೆ ಪತ್ತೆಯಾದ ಎಲ್ಲಾ ಮೂರು ಪ್ರಕರಣಗಳು ಕೇರಳದಲ್ಲಿ ಮಾತ್ರ ಕಂಡುಬಂದಿವೆ. 35 ವರ್ಷದ ವ್ಯಕ್ತಿ ಈ ತಿಂಗಳ ಆರಂಭದಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್‌ನಿಂದ ಕೇರಳಕ್ಕೆ ಬಂದಿದ್ದರು. ಅವರ ರಕ್ತದ ಮಾದರಿಯಲ್ಲಿ ಮಂಕಿಪಾಕ್ಸ್ ಇರುವುದು ದೃಢಪಟ್ಟಿದೆ. ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಮಲಪ್ಪುರಂ ನಿವಾಸಿಯಾಗಿರುವ ಯುವಕ ಜುಲೈ 6 ರಂದು ಭಾರತಕ್ಕೆ ಆಗಮಿಸಿದರು. ತಿರುವನಂತಪುರಂನ ಮಂಜೇರಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಯುವಕನ ಸ್ಥಿತಿ ಸ್ಥಿರವಾಗಿದೆ. ಸೋಂಕಿತರೊಂದಿಗೆ ಸಂಪರ್ಕದಲ್ಲಿದ್ದವರನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದು ಜಾರ್ಜ್ ತಿಳಿಸಿದ್ದಾರೆ.

65 ರಾಷ್ಟ್ರಗಳಲ್ಲಿ 13 ಸಾವಿರ ಕೇಸ್:  ಕಳೆದ 11 ವಾರಗಳಲ್ಲಿ ಮಂಕಿಪಾಕ್ಸ್ ವೇಗವಾಗಿ ಹರಡಿದೆ, 65 ದೇಶಗಳಲ್ಲಿ 13 ಸಾವಿರ ಪ್ರಕರಣಗಳು ಪತ್ತೆಯಾಗಿವೆ. ಕೋವಿಡ್ ಮಹಾಮಾರಿ ರೀತಿ ಮಂಕಿಪಾಕ್ಸ್ ಸಹ ಒಂದು ಸಾಂಕ್ರಾಮಿಕ ರೀತಿಯಲ್ಲಿ ಹಬ್ಬುತ್ತಾ ಎಂದು ಜನ ಚಿಂತಿತರಾಗಿದ್ದಾರೆ? ಆದರೆ ವೈಜ್ಞಾನಿಕ ಕಾರಣಗಳನ್ನು ಗಣನೆಗೆ ತೆಗೆದುಕೊಂಡಾಗ ಕೋವಿಡ್ ಉಸಿರಾಟದ ವೈರಸ್ ಆಗಿದ್ದು ಸೀನುವಾಗ ಅಥವಾ ಕೆಮ್ಮುವಾಗ ಕಣಗಳು ಮೂಲಕ ಹರಡುತ್ತದೆ, ಆದರೆ ಮಂಕಿಪಾಕ್ಸ್ ಪೀಡಿತ ವ್ಯಕ್ತಿಯೊಂದಿಗಿನ ನೇರ ಚರ್ಮದ ಸಂಪರ್ಕಕ್ಕೆ ಬಂದಾಗ ಈ ಸೋಂಕು ಹರಡಲಿದೆ.

ಸುದ್ದಿ ಓದಿ