ಸರ್ಕಾರಿ ಹೈಸ್ಕೊಲ್ ಮುಖ್ಯಶಿಕ್ಷಕನಿಂದ ಅವ್ಯವಹಾರ-ಶಾಸಪ್ಪ
ಜಮಖಂಡಿ 14: ಕಳೆದ ನಾಲ್ಕು ವರ್ಷದಿಂದ ತಾಲೂಕಿನ ಕುಂಚನೂರು ಸರ್ಕಾರಿ ಹೈಸ್ಕೊಲ್ ಮುಖ್ಯ ಶಿಕ್ಷಕನೊಬ್ಬ ಸುಮಾರು 4 ಲಕ್ಷ ರು, ಗಳಷ್ಟು ಶಾಲಾ ಆನುದಾನ ದುರ್ಬಳಕೆ ಮಾಡಿಕೊಂಡಿದ್ದು, ಜಾತಿ ಪ್ರಭಾವ ಮತ್ತು ಅಧಿಕಾರ ದುರುಪಯೋಗ ನಡೆಸಿ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದ ಶಾಲೆಯನ್ನು ಅಂತ:ಪತನದ ದಾರಿಗೆ ತಂದು ನಿಲ್ಲಿಸಿದ್ದಾರೆಂದು ತಾಲೂಕಿನ ಕುಂಚನೂರ ಸಕರ್ಾರಿ ಪ್ರೌಡಶಾಲೆ ಎಸ್ಡಿಎಂಸಿ ಅಧ್ಯಕ್ಷ ಶಾಸಪ್ಪ ನ್ಯಾಮಗೌಡ ಆರೋಪ ಮಾಡಿದರು.
ನಗರದ ರಮಾ ನಿವಾಸದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕುಂಚನೂರ ಪ್ರೌಡಶಾಲೆಗೆ ಬಂದ ನಂತರ ಎಸ್ಡಿಎಂಸಿ ಅಧ್ಯಕ್ಷ ಮತ್ತು ಮುಖ್ಯಶಿಕ್ಷಕರ ಜಂಟಿ ಬ್ಯಾಂಕ ಖಾತೆ ಸ್ಥಗಿತಗೊಳಿಸಿ ಸ್ವಂತಕ್ಕೆ ಹಣ ಬಳಿಸಿಕೊಂಡಿದ್ದಾರೆ. 2018-19ನೇ ಶೈಕ್ಷಣಿಕ ಸಾಲಿನ ಅನುದಾನ ಹಣದಲ್ಲಿ ಗೋಲಮಾಲ ಆಗಿದೆ. 2 ಲಕ್ಷ ರು,ಗಳಿಗೆ ಖರೀದಿಸಿದ ಪ್ರತಿಯೊಂದು ವಸ್ತುವಿನ ಬೆಲೆಯನ್ನು ಹೆಚ್ಚಿಗೆ ಬಿಲ್ ಪಡೆದು 4 ಲಕ್ಷ ರು, ಬಿಲ್ ಪಡೆದು 2 ಲಕ್ಷ ರು, ವಂಚಿಸಿದ್ದಾರೆ. ಮುಖ್ಯಶಿಕ್ಷಕರು ಖರೀಸಿದ ಅಂಗಡಿಯಲ್ಲಿ ಖರೀದಿಸಿದ ವಸ್ತುವಿನ ವಿಚಾರಿಸಿದಾಗ ನಿಮ್ಮ ಶಾಲಾ ಮುಖ್ಯಶಿಕ್ಷಕರೇ ಹೆಚ್ಚಿಗೆ ಬಿಲ್ ಪಡೆದುಕೊಂಡಿದ್ದಾರೆ. ನಡೆದ ಭ್ರಷ್ಟಾಚಾರದಲ್ಲಿ ಮುಖ್ಯಶಿಕ್ಷಕರು ನೇರವಾಗಿ ಭಾಗಿಯಾಗಿದ್ದಾರೆಂದು ಆರೋಪ ವ್ಯಕ್ತಪಡಿಸಿದರು.
ಕುಂಚುನುರ ಶಾಲಾ ಮುಖ್ಯಶಿಕ್ಷಕರ ಅವ್ಯವಹಾರ ಬಗ್ಗೆ ಬಿಈಓ,ಡಿಡಿಪಿಐ ಮತ್ತು ಉಪವಿಭಾಗಾಧಿಕಾರಿಗೆ ಮನವಿ, ದೂರು ಸಲ್ಲಿಸಿದರು ಕ್ರಮ ಕೈಗೊಂಡಿಲ್ಲ.ಶಿಕ್ಷಣ ಇಲಾಖೆ ವ್ಯವಹಾರ ಮಾಡಿಕೊಂಡಿರುವ ಅವರು ವಿದ್ಯಾಥರ್ಿಗಳಿಂದ ಪ್ರವೇಶ ಶುಲ್ಕಕ್ಕಿಂತ ಹೆಚ್ಚು ಹಣ,ವಗರ್ಾವಣೆ ಪತ್ರ ನೀಡಲು ಹಣ, ಪರೀಕ್ಷಾ ನೆಪದಲ್ಲಿ ವಿದ್ಯಾಥರ್ಿಗಳಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದಾರೆ ಎಂದರು.
ಮಾಜಿ ಶಾಸಕ ಶ್ರೀಕಾಂತ ಕುಲಕಣರ್ಿ ಮಾತನಾಡಿ, ಮುಖ್ಯಶಿಕ್ಷಕನ ಅವ್ಯವಹಾರ ಬಗ್ಗೆ ದಾಖಲೆ ನೀಡಿದರೂ ಯಾವ ಅಧಿಕಾರಿಗಳು ಯಾವುದೇ ರೀತಿಯ ಕ್ರಮಕೈಗೊಂಡಿಲ್ಲ. ಈ ಬಗ್ಗೆ ಶಾಸಕರು ಗಮನ ಹರಿಸಲಿ.ಇಲ್ಲವಾದಲ್ಲಿ ಒಬ್ಬ ಭ್ರಷ್ಟ ಅಧಿಕಾರಿಯಿಂದ ಉಳಿದ ನ್ಯಾಯಯುತ ಅಧಿಕಾರಿಗಳ ಹೆಸರಿಗೆ ಕಳಂಕ ಬರಲಿದೆ.ಶಿಕ್ಷಣದಿಂದ ನಾಡಿಗೆ ಉತ್ತಮ ನಾಗರೀಕರನ್ನು ನಿಮರ್ಿಸುವ ಶಿಕ್ಷಕ ಭ್ರಷ್ಠನಾದರೇ ಮುಂದಿನ ಗತಿಯೇನು. ಎಂದು ಪ್ರಶ್ನಿಸಿದರು. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದಲ್ಲಿ ತಕ್ಕಪಾಠ ಕಲಿಸಲಾಗುವದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಹಾದೇವ ನ್ಯಾಮಗೌಡ, ಪ್ರಕಾಶ ಕಾಳೆ,ಎಸ್ಡಿಎಂಸಿ ಸದಸ್ಯ ಶಶಿಕಾಂತಯ್ಯ ಕೋಲೂರಮಠ, ಮಹಾದೇವ ಸಂಗಾಪೂರ, ಮಹಾದೇವ ಪಡಸಲಗಿ, ಮಹಾವೀರ ಪಾಟೀಲ, ವೆಂಕಣ್ಣ ನ್ಯಾಮಗೌಡ, ಜಯಪಾಲ ಶಿರಹಟ್ಟಿ, ಸದಾಶಿವ ಕಲೂತಿ, ಶ್ರೀಧರ ಕಂಬಿ, ಮಹಾದೇವ ಕದಂ ಇದ್ದರು.