ಮುಧೋಳ

ಪಲ್ಸ್‌ ಪೋಲಿಯೋ ಲಸಿಕೆ ಕಾರ್ಯಕ್ರಮಕ್ಕೆ ಸಚಿವ ಕಾರಜೋಳ ಚಾಲನೆ

ಪಲ್ಸ್‌ ಪೋಲಿಯೋ ಲಸಿಕೆ ಕಾರ್ಯಕ್ರಮಕ್ಕೆ  ಸಚಿವ ಕಾರಜೋಳ ಚಾಲನೆ


      ಮುಧೋಳ:ನಗರದ ತಾಲ್ಲೂಕಾ ಆಸ್ಪತ್ರೆಯಲ್ಲಿ ಆರೋಗ್ಯ ಇಲಾಖೆಯಿಂದ ಪಲ್ಸ್‌ ಪೋಲಿಯೋ ಲಸಿಕೆ ಕಾರ್ಯಕ್ರಮಕ್ಕೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಭಾನುವಾರ ಐದು ವರ್ಷದ ಒಳಗಿನ ಮಗುವಿಗೆ ಪೋಲಿಯೋ ಲಸಿಕೆ ಹಾಕುವ ಮೂಲಕ ಚಾಲನೆ ನೀಡಿದರು. 

    ಈ ಸಂದರ್ಭದಲ್ಲಿ ಮಾತನಾಡಿದ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮಾತನಾಡಿ ಆರೋಗ್ಯ ಇಲಾಖೆಯ ವತಿಯಿಂದ ಇಂದಿನಿಂದ ನಡೆಯಲಿರುವ ಅಭಿಯಾನದಲ್ಲಿ ಐದು ವರ್ಷದೊಳಗಿನ ಎಲ್ಲಾ ಮಕ್ಕಳೂ ಲಸಿಕೆ ಪಡೆದುಕೊಳ್ಳಬೇಕು. ಆರೋಗ್ಯ ಇಲಾಖೆಯ ಕಾರ್ಯಕರ್ತರನ್ನು ಬಳಸಿಕೊಂಡು ರಾಜ್ಯದಾದ್ಯಂತ 5 ವರ್ಷದೊಳಗಿನ 64.77 ಲಕ್ಷ ಮಕ್ಕಳಿಗೆ ಪೋಲಿಯೋ ಹನಿ ಹಾಕುವ ಗುರಿಯನ್ನು ಹೊಂದಿದೆ. ಕೊರೋನಾ ಮೂರನೇ ಅಲೆಯಿಂದಾಗಿ ಕಳೆದ ಜನವರಿ ತಿಂಗಳಿನಲ್ಲಿ ನಡೆಯಬೇಕಾದ ಪೋಲಿಯೋ ಅಭಿಯಾನವನ್ನು ಮುಂದೂಡಲಾಗಿತ್ತು.ಈಗ ಅಗತ್ಯ ವ್ಯವಸ್ಥೆ ಮಾಡಿಕೊಂಡು ರಾಜ್ಯದ ಎಲ್ಲಾ ಆಸ್ಪತ್ರೆಗಳು, ಗ್ರಾಮೀಣ ಪ್ರದೇಶ, ಗುಡ್ಡಗಾಡು ಪ್ರದೇಶ ಸೇರಿದಂತೆ ವಿವಿಧೆಡೆ ಲಸಿಕೆ ಹಾಕಲು ಸರ್ಕಾರ ವ್ಯವಸ್ಥೆ ಮಾಡಲಾಗಿದೆ ರಾಜ್ಯಾದ್ಯಂತ ಅಗತ್ಯ ಬೂತ್‌ಗಳನ್ನು ತೆರೆದಿದೆ. ಮನೆ ಮನೆಗೆ ಭೇಟಿಗೆ ತಂಡಗಳು, ರೈಲ್ವೇ ನಿಲ್ದಾಣ, ಬಸ್ ನಿಲ್ದಾಣ ಸೇರಿದಂತೆ ವಿವಿಧ ಸಾರ್ವಜನಿಕ ಪ್ರದೇಶಗಳಲ್ಲಿ ಪೋಲಿಯೋ ಹನಿ ಹಾಕಲು  ಸಂಚಾರಿ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಹೇಳಿದರು. 

   ಎಂಎಲ್‌ಸಿ ಆರ್‌.ಬಿ ತಿಮ್ಮಾಪೂರ ಮಾತನಾಡಿ ಹೇಳಿ ತಾಲ್ಲೂಕಾಣದ್ಯಂತ ಎಲ್ಲ ಅಂಗನವಾಡಿ ಕೇಂದ್ರಗಳ್ಲಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಾಗೂ ಆರೋಗ್ಯ ಕಾರ್ಯಕರ್ತರು ಲಸಿಕೆ ಹಾಕಲಾಗುತ್ತಿದ್ದು ಎಲ್ಲ ಐದು ವರ್ಷದ ಒಳಗಿನ ಮಕ್ಕಳಿಗೆ ಲಸಿಕೆ ಹಾಕಿಸಿ ಎಂದು ಹೇಳಿದರು. 

       ತಾಲ್ಲೂಕಾ ಆರೋಗ್ಯ ಅಧಿಕಾರಿ ಡಾ.ವೆಂಕಟೇಶ ಮಲಘಾಣ ಪೋಲಿಯೊ ಸೋಂಕು 5 ವರ್ಷದೊಳಗಿನ ಮಕ್ಕಳಲ್ಲಿ ತೀವ್ರತರವಾದ ಅಸ್ವಸ್ಥತೆ ಮತ್ತು ಪಾರ್ಶ್ವವಾಯು ಉಂಟು ಮಾಡುತ್ತದೆ. ಹೀಗಾಗಿ ಮಕ್ಕಳಿಗೆ ಲಸಿಕೆ ಹಾಕಿಸುವುದು ಅನಿವಾರ್ಯ. ರಾಷ್ಟ್ರೀಯ ಲಸಿಕಾ ದಿನದ ಅಂಗವಾಗಿ ರಾಷ್ಟ್ರಾದ್ಯಂತ ಎಲ್ಲ ಆಸ್ಪತ್ರೆ, ಯಲ್ಲೂ ಲಸಿಕೆಹಾಕಲಾಗುತ್ತಿದೆ.  ತಾಲ್ಲೂಕಿನಲ್ಲಿ 246 ಬೂತಗಳಲ್ಲಿ ಲಸಿಕೆ ಹಾಕಲಾಗುತ್ತಿದೆ ಎಲ್ಲ ಮಕ್ಕಳಿಗೆ ಲಸಿಕೆ ಹಾಕಿ ಯಾವೂದೇ ರೀತಿಯಲ್ಲಿ ವಂಚನೆ ಆಗಬಾರದದು ಎಂದು ಹೇಳಿದರು. 

 ನಗರಸಭೆಯ ಅದ್ಯಕ್ಷ ಗುರುಪಾದ ಕುಳಲಿ,ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಜುಗೌಡ ಪಾಟೀಲ, ಬಿಜೆಪಿ ಅದ್ಯಕ್ಷ ಡಾ.ರವಿ ನಂದಗಾಂವ,ಬಂಡು ಘಾಟಗೆ,ಮಹಮದ ಶೇಖ್,ತಾಲ್ಲೂಕಾ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಬಿ.ವಿ.ಪಾಟೀಲ, ಡಾ.ರಾಘವೇಂದ್ರ ನಲವತ್ವಾಡ್, ಡಾ.ಅಜೀತ ಮಾನೆ ಡಾ.ಸುನಿತಾ ಕಾಮರಡ್ಡಿ, ಡಾ.ಶ್ರೇಣಿ ನಾವಲಗಿ ಇದ್ದರು. 

ಪೋಟೋ;ಎಮ್‌ಡಿಎಲ್‌-27-2; ಮುಧೋಳ ನಗರದ ತಾಲ್ಲೂಕಾ ಆಸ್ಪತ್ರೆಯಲ್ಲಿ ಆರೋಗ್ಯ ಇಲಾಖೆಯಿಂದ ಪಲ್ಸ್‌ ಪೋಲಿಯೋ ಲಸಿಕೆ ಕಾರ್ಯಕ್ರಮಕ್ಕೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಭಾನುವಾರ ಐದು ವರ್ಷದ ಒಳಗಿನ ಮಗುವಿಗೆ ಪೋಲಿಯೋ ಲಸಿಕೆ ಹಾಕುವ ಮೂಲಕ ಚಾಲನೆ ನೀಡಿದರು. 


ಸುದ್ದಿ ಓದಿ