ಅಸುಂಡಿ ಗ್ರಾಮದಲ್ಲಿ ವಿವಿಧ ರಸ್ತೆ ಕಾಮಗಾರಿಗಳಿಗೆ ಸಚಿವ ಎಚ್.ಕೆ.ಪಾಟೀಲ ಅವರಿಂದ ಭೂಮಿ ಪೂಜೆ ಕಾರ್ಯಕ್ರಮ
Minister H.K. Patil conducts Bhoomi Puja program for various road works in Asundi village
ಗದಗ 18: ಗದಗ ತಾಲೂಕಿನ ಅಸುಂಡಿ ಗ್ರಾಮದಲ್ಲಿ ಮೃಗಾಲಯ ಮುಖ್ಯ ರಸ್ತೆಯಿಂದ ರವಿ ಹುಲಕೋಟಿ ಇವರ ಮನೆವರೆಗಿನ ಸಿಸಿ ರಸ್ತೆ ಕಾಮಗಾರಿಯ ಅಂದಾಜು ಮೊತ್ತ 20 ಲಕ್ಷ. ರೂ.. ವೆಚ್ಚದಲ್ಲಿ, ಅಸುಂಡಿ ಕುರ್ತಕೋಟಿ ಗ್ರಾಮದ 36 ಪ್ಲಾಟ್ ಆಶ್ರಯ ಬಡಾವಣೆ ರಸ್ತೆ ಸುಧಾರಣೆ ಕಾಮಗಾರಿ ಅಂದಾಜು ಮೊತ್ತ 10 ಲಕ್ಷ ರೂ ವೆಚ್ಚ , ಅಸುಂಡಿ ಕುರ್ತಕೋಟಿ ಮುಖ್ಯ ರಸ್ತೆಯಿಂದ ರಾಘವೇಂದ್ರ ಹುಲಕೋಟಿ ಇವರ ಹೊಲದವರೆಗೆ ಸುಧಾರಣೆ ( 0.00 ರಿಂದ 6 ಕಿ.ಮೀ) ಅಂದಾಜು ಮೊತ್ತ 15 ಲಕ್ಷ ವೆಚ್ಚ, ಗದಗ ತಾಲೂಕು ಅಸುಂಡಿ ಕುರ್ತಕೋಟಿ ಮುಖ್ಯ ರಸ್ತೆಯಿಂದ ಬೆಳ್ಳಿಕೊಪ್ಪ ಹನುಮಪ್ಪ ದೇವಸ್ಥಾನಕ್ಕೆ ಹೋಗುವ ರಸ್ತೆ ಸುಧಾರಣೆ ( 0.00 ರಿಂದ 6 ಕಿ.ಮೀ ) ಅಂದಾಜು ಮೊತ್ತ 20 ಲಕ್ಷ ಈ ಕಾಮಗಾರಿಗಳಿಗೆ ಸೋಮವಾರ ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಅವರು ಭೂಮಿ ಪೂಜೆ ನೆರವೇರಿಸಿದರು. ರಸ್ತೆ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು. ನಿಗದಿತ ಕಾಲಾವಧಿಯಲ್ಲಿಯೇ ಕಾಮಗಾರಿಗಳು ಪೂರ್ಣಗೊಳ್ಳಬೇಕು ಎಂದು ಸಚಿವರು ಹೇಳಿದರು. ಈ ಸಂದರ್ಭದಲ್ಲಿ ಜನಪ್ರತಿನಿಧಿಗಳು, ಗಣ್ಯರು, ಹಿರಿಯರು, ಗ್ರಾಮಸ್ಥರು ಹಾಜರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 