ಅವಧಿಗೆ ಮುನ್ನ ಜನಿಸಿದ ಮರಿಯಾನೆ ಸಾವು
ಯಲ್ಲಾಪುರ, ಜ 9, ಅವಧಿಗೆ ಮುನ್ನ ಜನಿಸಿದ ಆನೆ ಮರಿಯೊಂದು ತಾಲ್ಲೂಕಿನ ಬಾಳೆಹಳ್ಳಿ ಅರಣ್ಯ ಪ್ರದೇಶದಲ್ಲಿ ಗುರುವಾರ ಮೃತಪಟ್ಟಿದೆ.ಬುಧವಾರ ರಾತ್ರಿ ಹೆಣ್ಣಾನೆಗೆ ಪ್ರಸವ ವೇದನೆ ಕಾಣಿಸಿಕೊಂಡಿತ್ತು. ನಾಲ್ಕೈದು ಆನೆಗಳ ಹಿಂಡು ಕೆರೆಯ ಪಕ್ಕದ ಅರಣ್ಯದಲ್ಲಿ ಬೀಡು ಬಿಟ್ಟಿದ್ದವು. ತೀವ್ರ ನೋವಿನಿಂದ ಬಳಲಿರುವ ತಾಯಿ ಆನೆ ಹತ್ತಾರು ಮೀಟರಲರ್ ಅಂತರದಲ್ಲಿ ಹೊರಳಾಡಿದೆ. ಸುತ್ತಲಿನ ಸಣ್ಣ ಗಿಡಮರಗಳು ಮುರಿದಿರುವುದು ಕಂಡುಬಂದಿದೆ. ಮಧ್ಯರಾತ್ರಿ ಸಮಯದಲ್ಲಿ ಆನೆಯ ಚೀರಾಟ ಸನಿಹದ ಉಗ್ಗಿನಕೇರಿ ಗ್ರಾಮಸ್ಥರಿಗೂ ಕೇಳಿದೆ.ಗುಂಜಾವತಿ ಅರಣ್ಯ ವ್ಯಾಪ್ತಿಯ ಬಾಳೆಹಳ್ಳಿ ಪ್ರದೇಶದಲ್ಲಿ ಆನೆಯೊಂದು, ಅವಧಿಗೂ ಮುನ್ನ ಮರಿಗೆ ಜನ್ಮ ನೀಡಿದೆ. ಆದರೆ, ಸರಿಯಾಗಿ ಬೆಳವಣಿಗೆ ಆಗದ ಕಾರಣ ಮರಿ ಆನೆ ಜನಿಸುವಾಗಲೇ ಮೃತಪಟ್ಟಿದೆ ಎಂದು ಅಲ್ಲಿನ ಅರಣ್ಯ ಸಂರಕ್ಷಣಾಧಿಕಾರಿಗೆ ಎಸ್.ಎಂ.ವಾಲಿ ತಿಳಿಸಿದ್ದಾರೆ. ಶಾಸಕ ಶಿವರಾಮ ಹೆಬ್ಬಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 