ಮುಧೋಳ

ಉತ್ತಮ ಪೌಷ್ಠಿಕಾಂಶವುಳ್ಳ ಆಹಾರ ಸೇವನೆ ಸದೃಢ ಶರೀರ ಕಾಯ್ದುಕೊಳ್ಳಿ: ಅರಳಿಕಟ್ಟಿ

ಉತ್ತಮ ಪೌಷ್ಠಿಕಾಂಶವುಳ್ಳ ಆಹಾರ ಸೇವನೆ ಸದೃಢ ಶರೀರ ಕಾಯ್ದುಕೊಳ್ಳಿ: ಅರಳಿಕಟ್ಟಿ
ಮುಧೋಳ ಎಸ್‌.ಆರ್‌.ಕಂಠಿ ಕಾಲೇಜಿಗೆ ಆರ್‌ಸಿಯು ಏಕವಲಯ ಕಾಲೇಜುಗಳ ಕುಸ್ತಿ ಪಂದ್ಯದಲ್ಲಿ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆ

ಮುಧೋಳ31:  ಯುವಕರು ದುಶ್ಚಟಗಳ ದಾಸರಾಗದೆ, ಉತ್ತಮ ಪೌಷ್ಠಿಕಾಂಶವುಳ್ಳ ಆಹಾರ ಸೇವನೆ ಹಾಗೂ ವ್ಯಾಯಾಮ ಮಾಡಿ ಸದೃಢ ಶರೀರ ಕಾಯ್ದುಕೊಳ್ಳಬೇಕೆಂದು ಅರಳಿಕಟ್ಟಿ ಫೌಂಡೇಶನ್ ಸಂಸ್ಥಾಪಕ ಡಾ.ತಿಮ್ಮಣ್ಣ ಅರಳಿಕಟ್ಟಿ ಹೇಳಿದರು.  

ಮುಧೋಳ ಎಸ್‌.ಆರ್‌.ಕಂಠಿ ಕಾಲೇಜಿನ ಒಳಾಂಗಣ ಕ್ರೀಡಾಂಗಣದಲ್ಲಿ ಗುರುವಾರ ಸಂಜೆ ಬೆಳಗಾವಿ ಆರ್‌ಸಿಯು ಏಕವಲಯ ಪುರುಷ ಮತ್ತು ಮಹಿಳೆಯರ ಅಂತರ ಕಾಲೇಜುಗಳ ಕುಸ್ತಿ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿ ಸ್ಥಾನವಹಿಸಿ ಮಾತನಾಡಿ ಪ್ರಸ್ತುತ ಸಮಯದಲ್ಲಿ ಕ್ರೀಡೆಗಳು ನಿತ್ಯ ಜೀವನದಲ್ಲಿ ಮಹತ್ವ ಪಡೆಯುತ್ತಿವೆ, ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಹೆಚ್ಚಿನ ಸಾಧನೆ ಮಾಡಬೇಕೆಂದು ಹೇಳಿದರು.  

ನಿವೃತ್ತ ಪ್ರಾಚಾರ್ಯ ಡಾ.ಎನ್‌.ಬಿ.ಇಂಗನಾಳ ಅತಿಥಿ ಸ್ಥಾನವಹಿಸಿ ಕುಸ್ತಿ ಕ್ರೀಡೆಗಳ ಮಹತ್ವ ಕುರಿತು ಮಾತನಾಡಿದರು, ನಿವೃತ್ತ ಶಿಕ್ಷಕ, ಪ್ರಗತಿಪರ ರೈತ ವೈ.ಬಿ.ಮುನ್ನೋಳ್ಳಿ ಸಾಂದರ್ಭಿಕವಾಗಿ ಮಾತನಾಡಿದರು, ಪ್ರಾಚಾರ್ಯ ಪ್ರೊ.ಬಿ.ಆರ್‌. ಪಾಟೀಲ ಅಧ್ಯಕ್ಷತೆವಹಿಸಿ ಮಾತನಾಡಿ ಕುಸ್ತಿ  

ಪಂದ್ಯಾವಳಿ ಯಶಸ್ವಿಗೆ ಕಾರಣೀಕರ್ತ ರಾದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳಿಗೆ, ದಾನಿಗಳಿಗೆ, ಸಂಘಟಕರಿಗೆ ವಿಶೇಷವಾಗಿ ಅಭಿನಂದಿಸಿದರು.  

ದೈಹಿಕ ಶಿಕ್ಷಣ ನಿರ್ದೇಶಕ ಎ.ವೈ.ಮುನ್ನೋಳ್ಳಿ ವೇದಿಕೆ ಮೇಲೆ ಉಪಸ್ಥಿತರಿದ್ದರು, ಕ್ರೀಡಾವಿಭಾಗದ ಕಾರ್ಯಾಧ್ಯಕ್ಷ ಡಾ.ಎಂ.ಆರ್‌.ಜರಕುಂಟಿ ವಂದಿಸಿದರು, ಪ್ರೊ.ವ್ಹಿ.ಎಂ.ಕಿತ್ತೂರ ಸ್ವಾಗತಿಸಿದರು, ಪ್ರೊ.ವ್ಹಿ.ಎಸ್‌.ಮುನವಳ್ಳಿ ಅತಿಥಿಗಳ ಪರಿಚಯಿಸಿದರು, ಪ್ರೊ.ಎಂ.ಎಂ.ಹಿರೇಮಠ ಮತ್ತು ಪ್ರೊ.ಪಿ.ಡಿ.ಕುಂಬಾರ ನಿರೂಪಿಸಿದರು. 

ಸುದ್ದಿ ಓದಿ