15 ರಂದು ಮೈಲಾರಲಿಂಗೇಶ್ವರ ಜಾತ್ರಾ ಕಾರ್ಣಿಕೋತ್ಸವ
Mailaralingeshwara Fair Karnikotsava on the 15th
ಧಾರವಾಡ 11: ಸುಮಾರು 8ನೇ ಶತಮಾನದ ಪೂಜ್ಯ ಜಕಣಾಚಾರಿಗಳು ಧಾರವಾಡದ ವಿದ್ಯಾಗಿರಿಯಲ್ಲಿ ನಿರ್ಮಿಸಿದ ಮೈಲಾರಲಿಂಗೇಶ್ವರ ದೇವಾಲಯದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಮೈಲಾರಲಿಂಗ ದೇವಸ್ಥಾನದ ಜಾತ್ರೆ ಹಾಗೂ ಕಾರ್ಣಿಕೋತ್ಸವವು ರವಿವಾರ ದಿನಾಂಕ: 15-02-2026 ರಂದು ಜರಗುವುದು ಮತ್ತು ಶನಿವಾರ ದಿನಾಂಕ: 14-02-2026 ರಂದು ಮಹಾಭಿಷೇಕ ಬಿಲ್ಲು ಪೂಜೆ, ಹಾಗೂ ರಾತ್ರಿ, ಭಜನೆ ಜಾಗರಣೆ ನಡೆಯುವದು. ಇದು 60ನೇ ಕಾರ್ಣಿಕೋತ್ಸವ ಆಗಿದ್ದು, ಮೈಲಾರಲಿಂಗೇಶ್ವರ ದೇವಸ್ಥಾನದ ವಂಶ ಪಾರಂಪರಿಕ ಕಾರ್ಣಿಕ ಪುರುಷ ಸಿರಿಮಲ್ಲ ತಿಪ್ಪಣ್ಣ ಶಿರೋಳ ಅವರ ನೇತೃತ್ವದಲ್ಲಿ ಕಾರ್ಯಕ್ರಮಗಳು ಜರಗುವುದು. 15-02-2026 ರಂದು ರವಿವಾರ ಮಧ್ಯಾಹ್ನ 12 ಗಂಟೆಗೆ ಡೋಣಿ ಪೂಜೆ (ತುಂಬಿಸುವುದು), ಅನ್ನ ಸಂತರೆ್ಣ, ಸಂಜೆ 4:30 ಕ್ಕೆ ಮಹಾಮಂಗಳಾರತಿ ನಂತರ ಪಲ್ಲಕ್ಕಿ ಉತ್ಸವ ಕಾರ್ಣಿಕ ಸೇವೆ, ಸರಪಳಿ ಸೇವೆ ಜರಗುವವು, ಕಾರಣ ಸಕಲ ಸದ್ಭಕ್ತರು ತನುಮನದಿಂದ ಸೇವೆ ಸಲ್ಲಿಸಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ಕಾರ್ಣಿಕ ಪುರುಷ ಸಿರಿಮಲ್ಲ ತಿಪ್ಪಣ್ಣ ಶಿರೋಳ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 