ಮುಧೋಳ

ನ.9ರಂದು ಮಹಾಯೋಗಿ ಸಿದ್ಧಾರೂಢರು ಚಲನಚಿತ್ರ ಬಿಡುಗಡೆ

ನ.9ರಂದು ಮಹಾಯೋಗಿ ಸಿದ್ಧಾರೂಢರು ಚಲನಚಿತ್ರ ಬಿಡುಗಡೆ

ಮುಧೋಳ 06: ದೆಹಲಿಯ ಆರೂಢ ಧಾಮ ನೆನಪಿಸುವ ಉತ್ತರ ಕರ್ನಾಟಕದ ಶ್ರೇಷ್ಠ ಪ್ರವಾಸಿ ತಾಣ ಆರೂಢ ಧಾಮದಲ್ಲಿ ಬೋಟ್ ಮೂಲಕ ಸಿದ್ಧಾರೂಢರ ದರ್ಶನ ಮಾಡುವ ವಿಶಿಷ್ಟ ಪರಿಕಲ್ಪನೆ,7ಡಿ ತಂತ್ರಜ್ಞಾನ ಬಳಕೆ, ಆಧ್ಯಾತ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ ಅನ್ನ ಹಾಗೂ ಅಕ್ಷರ ದಾಸೋಹದ ಮೂಲಕ ಜನಮನ ಗೆದ್ದ ತಾಲ್ಲೂಕಿನ ಮಂಟೂರ ಗ್ರಾಮ  ಕರ್ನಾಟಕ ರಾಜ್ಯದ ಎರಡನೆಯ ಅತಿ ಎತ್ತರದ ಶಿವನ ವಿಗ್ರಹದ ಸಾಧನೆಯ ಜೊತೆಗೆ ಈಗ ಮತ್ತೊಂದು ಸಾಹಸಕ್ಕೆ ಕೈಹಾಕಿ ಯಶಸ್ವಿಯಾಗಿದೆ.  

ನೂರಾರು ವರ್ಷಗಳ ಇತಿಹಾಸ ಹೊಂದಿರುವ  ಹುಬ್ಬಳ್ಳಿಯ ಸಿದ್ದಾರೂಢರ ಜೀವನದ ಸಾರ ಒಳಗೊಂಡಿರುವ  ಆರೂಢ ವಿದ್ಯಾನಿಕೇತನ ಟ್ರಸ್ಟ್‌ ಅರ​‍್ಿಸುವ  ‘ಮಹಾಯೋಗಿ  ಸಿದ್ಧಾರೂಡರು’ ಚಲನಚಿತ್ರ ಮಂಗಳವಾರ ನ. 9ರಂದು ಬೆಳಿಗ್ಗೆ 9-30ಕ್ಕೆ   ಮಂಟೂರದ ಅರೂಢ ಧಾಮ ಸದ್ಗುರು ಸಿದ್ದಾರೂಢ ಬ್ರಹನ್ಮಠದಲ್ಲಿನ ನೂತನ ಚಿತ್ರಮಂದಿರದಲ್ಲಿ ತೆರೆಕಾಣಲಿದೆ. 

ಆರೂಢ ವಿದ್ಯಾನಿಕೇತನ ಟ್ರಸ್ಟ್‌ ಸಹಯೋಗದಲ್ಲಿ ಮಂಟೂರ ಗ್ರಾಮಸ್ಥರ ಸುತ್ತಮುತ್ತಲಿನ ಭಕ್ತರ ಸಹಕಾರದಿಂದ ಮಹಾಯೋಗಿ ಸಿದ್ಧಾರೂಢರ ಚಲನಚಿತ್ರ ಸಿದ್ಧವಾಗಿದ್ದು, ಚಿತ್ರ ಬಿಡುಗಡೆ ಕಾರ್ಯಕ್ರಮ ಬಹು ವಿಜೃಂಭಣೆಯಿಂದ ನಡೆಯಬೇಕಾಗಿತ್ತು, ಅದಕ್ಕೆ ಮಹಾನ್ ಚಲನಚಿತ್ರ ನಟರು ಅಗಮಿಸಬೇಕಾಗಿತ್ತು ಅದರೆ ಸಾಮಾಜಿಕ ಕಾಳಜಿಯುಳ್ಳ ನಟ ಮಹಾಯೋಗಿ ಶ್ರೀ ಸಿದ್ಧಾರೂಢರು ಚಲನಚಿತ್ರ ಟ್ರೈಲರ್ ಬಿಡುಗಡೆ ಮಾಡಿದ ಅಪ್ಪು ಖ್ಯಾತಿ ಚಲನಚಿತ್ರನಟ ಪುನಿತರಾಜಕುಮಾರ ಅಕಾಲಿಕ ನಿಧನದಿಂದಾಗಿ ಸರಳವಾಗಿ ಬಿಡುಗಡೆಮಾಡಬೇಕಾಗಿದೆ. ಈ ಕಾರ್ಯಕ್ರಮಕ್ಕೆ  ಇಂಚಲದ ಸಾಧು ಸಂಸ್ಥಾನ ಮಠದ ಜಗದ್ಗುರು ಡಾ.ಶಿವಾನಂದ ಮಹಾಸ್ವಾಮಿಗಳು,ಬೀದರದ ಡಾ.ಶಿವಕುಮಾರ ಮಹಾಸ್ವಾಮಿಗಳ ಸಾನಿಧ್ಯದಲ್ಲಿ, ಲೂಪ್ ಎಂಟರಟೇನಮೆಂಟ್ ಹಾಗೂ ಚಲನಚಿತ್ರ ನಿರ್ದೇಶಕ ಖ್ಯಾತ ಹಾಸ್ಯ ನಟ ಸಾದುಕೋಕಿಲರು, ಸ್ಥಳಿಯ ಜನಪ್ರತಿನಿಧಿ ಹಾಗೂ ಮಹಾತ್ಮರು,ಭಕ್ತರ ಸಮ್ಮುಖದಲ್ಲಿ ತೆರೆಕಾಣಲಿದೆ. 

50 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿರುವ ಚಿತ್ರಕ್ಕೆ ಖ್ಯಾತ ಚಿತ್ರ ನಿರ್ದೇಶಕ ಸಾಧು ಕೋಕಿಲಾ ಅವರ ಲೂಪ್ ಎಂಟರೈ​‍್ರಸಿಸ್ ತಂಡದ ಸಹಕಾರದೊಂದಿಗೆ ನಾಡಿನ ವಿವಿಧ ಪ್ರದೇಶಗಳಲ್ಲಿ ಬೀದರ್ ಜಿಲ್ಲೆಯ ಚಳಕಾಪೂರ, ಹುಬ್ಬಳ್ಳಿ, ಬೆಂಗಳೂರು, ಮಂಟೂರ ಹಾಗೂ ಹೈದ್ರಾಬಾದ್, ಶ್ರೀಶೈಲ, ಋಷಿಕೇಶಿ ಸ್ಥಳಗಳಲ್ಲಿ ಚಿತ್ರಿಕರಣ ಮುಗಿದಿದೆ. ಅಕ್ಟೋಬರ ಕೊನೆಯ ವಾರದಲ್ಲಿ ಬೆಂಗಳೂರಲ್ಲಿ ಟ್ರೈಲರ್ ಬಿಡುಗಡೆಯಾಗಿತ್ತು ಈ ಕಾರ್ಯಕ್ರಮದಲ್ಲಿ ಪುನಿತರಾಜಕುಮಾರ ಬಾಗಿಯಾಗಿದ್ದರು.ಮಹಾಯೋಗಿ ಸಿದ್ಧಾರೂಢರು ಎಂಟು ವರ್ಷದವರಿದ್ದಾಗ ಮನೆ ಬಿಟ್ಟು ಆದ್ಯಾತ್ಮ ಚಿಂತನೆಗಾಗಾಗಿ ಪರ್ಯಟನಮಾಡಿ ಮಠಕ್ಕೆ ಸೇರೆ​‍್ಡಯಾಗುವ ಅಧ್ಯಾತ್ಮಿಕತೆಯ ಪವಾಡಗಳ ಕುರಿತು ಚಿತ್ರಿಕರಣದಲ್ಲಿ ಚಿತ್ರೀಕರಿಸಲಾಗಿದೆ ಎಂದು ಹೇಳಿದರು. 

“ ನೂರಾರು ವರ್ಷಗಳ ಇತಿಹಾಸ ಹೊಂದಿರುವ  ಹುಬ್ಬಳ್ಳಿಯ ಸಿದ್ದಾರೂಢರ ಜೀವನದ ಸಾರ ಒಳಗೊಂಡಿರುವ  ಆರೂಢ ವಿದ್ಯಾನಿಕೇತನ ಟ್ರಸ್ಟ್‌ ಅರ​‍್ಿಸುವ  ‘ಮಹಾಯೋಗಿ  ಸಿದ್ಧಾರೂಡರು’ ಚಲನಚಿತ್ರ ಮಂಗಳವಾರ ನ.9ರಂದು ಬೆಳಿಗ್ಗೆ 9-30ಕ್ಕೆ   ಮಂಟೂರದ ಅರೂಢ ಧಾಮ ಸದ್ಗುರು ಸಿದ್ದಾರೂಢ ಬ್ರಹನ್ಮಠದಲ್ಲಿನ ನೂತನ ಚಿತ್ರಮಂದಿರದಲ್ಲಿ ತೆರೆಕಾಣಲಿದೆ.” 

ಸದಾನಂದ ಮಹಾಸ್ವಾಮಿಗಳು 

ಸಿದ್ಧಾರೂಢ ಬ್ರಹನ್ಮಠ ಮಂಟೂರ 


ಸುದ್ದಿ ಓದಿ