ಕನ್ನಡ ರಾಜ್ಯೋತ್ಸವ ಆಚರಣೆಗೆ ಶಾಸಕ ನ್ಯಾಮಗೌಡ ಚಾಲನೆ
ಜಮಖಂಡಿ 01: ರಾಜ್ಯ-ರಾಷ್ಟ್ರ ಮಟ್ಟದಲ್ಲಿ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳನ್ನೂ ಕನ್ನಡ ಭಾಷೆಯಲ್ಲಿ ಬರೆಯುವ ಅವಕಾಶವನ್ನು ಅಭ್ಯರ್ಥಿಗಳಿಗೆ ನೀಡಲು ಕೇಂದ್ರ ಸರ್ಕಾರಗಳು ವ್ಯವಸ್ಥೆ ಮಾಡಬೇಕೆಂದು ಶಾಸಕ ಆನಂದ ನ್ಯಾಮಗೌಡ ಹೇಳಿದರು.
ನಗರದ ಹೊಕ್ಕಳಭಾವಿ ದಿ.ಅನಂತ ಸಾಬಡೆ ಮೈದಾನದಲ್ಲಿ ನಡೆದ 67 ನೇಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಕನ್ನಡ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪ ನಮನ ಸಲಿಸಿ ಮಾತನಾಡಿದರು. ಇಂದು ಕೆಲವು ವಿದೇಶಗಳಲ್ಲೂ ರಾಜ್ಯೋತ್ಸವ ಆಚರಣೆ ನಡೆಯುತ್ತಿರುವುದು ನಮ್ಮೆಲ್ಲರಿಗೆ ಹೆಮ್ಮೆ ತರುವ ವಿಷಯವಾಗಿದೆ.ವಿವಿಧತೆಯಲ್ಲಿ ಏಕತೆ ಕಾಣುವುದು ಕರ್ನಾಟಕದಲ್ಲಿ ಮಾತ್ರ ಎಂದರು.
ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಮಾತನಾಡಿ, ಕನ್ನಡ ಭಾಷೆ ಬಗ್ಗೆ ಕೇವಲ ಚಿಂತನೆ ನಡೆಸದೇ ಸಾಲದು, ಕನ್ನಡ ಭಾಷೆಯನ್ನು ಗಟ್ಟಿಗೊಳಿಸುವ ಕಾರ್ಯ ನಡೆಯಬೇಕು. ಕನ್ನಡ ಭಾಷೆಗೆ ರಾಷ್ಟ್ರೀಯ ಸ್ಥಾನಮಾನ ಸಿಕ್ಕಿದ್ದು ,ನಮ್ಮೆಲ್ಲರಿಗೂ ಸಂತೋಷ ತಂದಿದೆ. ನಾವೆಲ್ಲರೂ ಸೇರಿಕೊಂಡು ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಬೇಕಾಗಿದೆ ಎಂದರು.
ಕನ್ನಡ ರಾಜ್ಯೋತ್ಸವ ಆಚರಣೆಗೆ ಎಸಿ ಡಾ.ಸಿದ್ದು ಹುಲ್ಲೋಳ್ಳಿ ಧ್ವಜಾರೋಹಣ ನೇರವೇರಿಸಿ ಚಾಲನೆ ನೀಡಿ, ಮಾತನಾಡಿದ ಅವರು. ಈ ನಾಡಿನ ಪ್ರತಿಯೊಬ್ಬ ತಾಯಿ ತನ್ನ ಮಕ್ಕಳಿಗೆ ಮಾತೃಭಾಷೆಯಲ್ಲಿ ಶಿಕ್ಷಣ ನಿಡುವಂತೆ ಪ್ರತಿಜ್ಞೆ ಮಾಡಬೇಕು.ಆಗ ಮಾತ್ರ ಕನ್ನಡ ಭಾಷೆಗೆ ಉಳಿವು ಸಾಧ್ಯ. ಪ್ರತಿಯೊಬ್ಬರ ಮನೆ-ಮನದಲ್ಲಿ ರಾಜ್ಯೋತ್ಸವ ಆಚರಣೆ ನಡೆಯಬೇಕು ಎಂದರು.
ಕನ್ನಡ ಸಂಘದ ಅಧ್ಯಕ್ಷ ಅರುಣಕುಮಾರ ಶಹಾ,ಜಗದೀಶ ಗುಡಗುಂಟಿ ಮಾತನಾಡಿದರು .ನಾಟಕಕಾರ ಸಂಗಮೇಶ ಗುರವ ಅವರಿಗೆ ತಾಲೂಕಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ನೀಡಿ, ಗೌರವಿಸಲಾಯಿತು. ವಿಪ ಮಾಜಿ ಸದಸ್ಯ ಜಿ.ಎಸ್.ನ್ಯಾಮಗೌಡ, ಅಪರ್ ಜಿಲ್ಲಾಧಿಕಾರಿ ಸಾಜಿದ ಮುಲ್ಲಾ, ನಗರದ ಪ್ರಾಧಿಕಾರ ಅಧ್ಯಕ್ಷ ಯಮನೂರು ಮೂಲಂಗಿ, ನಗರಸಭೆ ಅಧ್ಯಕ್ಷ ದಾನೇಶ ಘಾಟಗೆ, ಪೌರಾಯುಕ್ತೆ ಲಕ್ಷ್ಮಿ ಅಸ್ಟಗಿ, ಎ.ಜಿ.ಅಜ್ಜನ್ನವರ ವೇದಿಕೆಯಲ್ಲಿದ್ದರು. ಶಾಲಾ ಮಕ್ಕಳು ಪ್ರಾರ್ಥಿಸಿದರು. ತಹಸೀಲ್ದಾರ ಸದಾಶಿವ ಮಕ್ಕೋಜಿ ಸ್ವಾಗತಿಸಿದರು. ಬಿಇಓ ಸಿ.ಎಂ.ನ್ಯಾಮಗೌಡ ವಂದಿಸಿದರು. ಎನ್.ವ್ಹಿ.ಅಸ್ಕಿ ನಿರೂಪಿಸಿದರು.
ಭಾರಿ ಮೇರವಣಿಗೆ-ಈ ಬಾರಿ ಆನೆ ಮೇಲೆ ಅಂಬಾರಿಯಲ್ಲಿ ತಾಯಿ ಭುವನೇಶ್ವರಿ ಭಾವಚಿತ್ರ ಇಟ್ಟು ನಗರದ ಪ್ರಮುಖ ಬೀದಿಗಳಲ್ಲಿವಿವಿಧ ಶಾಲಾ ಮಕ್ಕಳು,ಹಲವು ಸರ್ಕಾರಿ ಇಲಾಖೆ ಸಿಬ್ಬಂದಿ ಸ್ಭಬ್ದ ಚಿತ್ರಗಳ ಮೆರವಣಿಗೆ ನಡೆಸಲಾಯಿತು.