ವಿಶ್ವ ಮಹಿಳಾ ದಿನ ಅಂಗವಾಗಿ ಮಹಿಳೆಯರ ಸ್ಥಾನಮಾನ ಉಪನ್ಯಾಸ ಕಾರ್ಯಕ್ರಮ

ವಿಶ್ವ ಮಹಿಳಾ ದಿನ ಅಂಗವಾಗಿ ಮಹಿಳೆಯರ ಸ್ಥಾನಮಾನ ಉಪನ್ಯಾಸ ಕಾರ್ಯಕ್ರಮ Lecture program on the status of women as part of International Women's Day

ಲೋಕದರ್ಶನ ವರದಿ 

ರಾಯಬಾಗ  12: ಆಧುನಿಕ ಯುಗದಲ್ಲಿ ಸಬಲೆಯಾಗಿರುವ ಮಹಿಳೆ, ಇನ್ನು ಹೆಚ್ಚು ಜಾಗೃತಗೊಂಡು ಉತ್ತಮ ಜೀವನ ರೂಪಿಸಿಕೊಳ್ಳಬೇಕೆಂದು ಹಿಡಕಲ್ ವಿ.ಪಿ.ಸಂ.ಪ.ಪೂ.ಕಾಲೇಜ ನಿವೃತ್ತ ಉಪನ್ಯಾಸಕಿ ಡಾ.ಆರ್‌.ಎಫ್‌.ಬಾಳಪ್ಪನವರ ಹೇಳಿದರು.  ಶನಿವಾರ ಪಟ್ಟಣದ ಎಸ್‌ಪಿಎಮ್ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಮತ್ತು ಎಂ.ಕಾಂ, ಎಂ.ಎ(ರಾಜಶಾಸ್ತ್ರ) ವಿಭಾಗದ ಸಹಯೋಗದಲ್ಲಿ ವಿಶ್ವ ಮಹಿಳಾ ದಿನ ಅಂಗವಾಗಿ ಹಮ್ಮಿಕೊಂಡಿದ್ದ ಆಧುನಿಕ ಸಮಾಜದಲ್ಲಿ ಮಹಿಳೆಯರ ಸ್ಥಾನಮಾನ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಂದಿನ ವಿಜ್ಞಾನ ಯುಗದಲ್ಲಿ ಕೂಡ ಸಮಾಜದಲ್ಲಿ ಮಹಿಳೆಯನ್ನು ದ್ವಿತೀಯ ದರ್ಜೆಯನ್ನಾಗಿ ನೋಡುತ್ತಿರುವುದು ದೃಷ್ಠಿಕೋನ ಬದಲಾಗದೇ ಇರುವುದು ಅತ್ಯಂತ ಕಳವಳಕಾರಿ ವಿಷಯವಾಗಿದೆ.

ಸಮಾನತೆಯ ಸಮಾಜ ಕಟ್ಟುವ ಕೆಲಸ ಕುಟುಂಬದಿಂದಲೇ ಪ್ರಾರಂಭಗೊಳ್ಳಬೇಕೆಂದರು.  ಮಾಜಿ ಸಂಸದ ಅಮರಸಿಂಹ ಪಾಟೀಲ ಅಧ್ಯಕ್ಷತೆಯನ್ನು ವಹಿಸಿದ್ದರು. ಎಸ್‌ಪಿಎಮ್ ಕಾರ್ಯದರ್ಶಿ ಎಸ್‌.ಎಸ್‌.ಸಿಂಗಾಡಿ, ಐಕ್ಯೂಎಸಿ ಕೊಆಡಿನೇಟರ್ ಎನ್‌.ವಾಯ್‌.ಮೋಮಿನ, ಎಂ.ಎ.ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಆರ್‌.ಎಸ್‌.ಗುಡೋಡಗಿ, ಪ್ರಾಚಾರ್ಯ ಪ್ರೊ.ಐ.ಎಸ್‌.ಗೋಕಾಕ, ಎಸ್‌.ಆರ್‌.ಮನೋಜ ಹಾಗೂ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಇದ್ದರು.